ಈ ಕೋರ್ಸ್ ಒಳಗೊಂಡಿದೆ
ಕಡಿಮೆ ಓದಿದವರು, ಹಳ್ಳಿಯಲ್ಲಿರುವವರು ಪ್ರಾಣಿ ಸಾಕಣೆಯನ್ನು ಮಾಡುತ್ತಾರೆ ಎಂಬ ಮಾತಿದೆ. ಆದರೆ, ಅದೆಲ್ಲವನ್ನು ಸುಳ್ಳಾಗಿಸುವಂತೆ ಡಬಲ್ ಡಿಗ್ರಿ ತೆಗೆದುಕೊಂಡವರು ಇಂದು ಮೇಕೆ ಸಾಕಣೆಯಲ್ಲಿ ವಿಸ್ತಾರ ಫಾರ್ಮ್ಸ್ ಎಂಬ ಒಂದು ದೊಡ್ಡ ಕೃಷಿ ಉದ್ಯಮವನ್ನೇ ಕಟ್ಟಿ ಬೆಳೆಸಿದ್ದಾರೆ. ಲಕ್ಷ ಲಕ್ಷ ಸಂಬಳವನ್ನು ಪಡೆಯುತ್ತಿದ್ದವರು, ತಮ್ಮ ಉದ್ಯೋಗಕ್ಕೆ ಗುಡ್ ಬೈ ಹೇಳಿ ಇಂದು ದೊಡ್ಡ ಮಟ್ಟದಲ್ಲಿ ಮೇಕೆ ಸಾಕಣೆಯನ್ನು ಮಾಡಿ ಅದರಿಂದ ಕೋಟಿಯಲ್ಲಿ ಆದಾಯವನ್ನು ಗಳಿಸುತ್ತಿದ್ದಾರೆ.
ಸಾಮಾನ್ಯವಾಗಿ ಮೇಕೆಯನ್ನು ಬ್ರೀಡಿಂಗ್ ಗಾಗಿ ಮತ್ತು ಮಾಂಸಕ್ಕಾಗಿ ಸಾಕಣೆ ಮಾಡಲಾಗುತ್ತದೆ. ಆದರೆ ಬ್ರೀಡಿಂಗ್, ಮಾಂಸದ ಜೊತೆಗೆ ಹಾಲಿನಿಂದಲೂ ಸಹ ಉತ್ತಮ ಗಳಿಕೆಯನ್ನು ವಿಸ್ತಾರ ಫಾರ್ಮ್ ಗಳಿಸುತ್ತಿದೆ. ಸಾವಿರಕ್ಕೂ ಹೆಚ್ಚು ಮೇಕೆಗಳನ್ನು ಒಂದೇ ಜಾಗದಲ್ಲಿ ಸಾಕಣೆ ಮಾಡುತ್ತಿರುವ ವಿಸ್ತಾರ ಫಾರ್ಮ್ಸ್ ದಿನಕ್ಕೆ ಸುಮಾರು 120 ರಿಂದ 150 ಲೀಟರ್ ವೆರೆಗೆ ಮೇಕೆ ಹಾಲನ್ನು ಉತ್ಪಾದಿಸಿ ಅದನ್ನು ನಗರ ಪ್ರದೇಶಗಳಲ್ಲಿ ಮಾರಾಟ ಸಹ ಮಾಡುತ್ತಿದೆ.
ವಿಸ್ತಾರ ಫಾರ್ಮ್ಸ್ ಬೆಳೆದು ಬಂದ ದಾರಿ ನಿಜಕ್ಕೂ ಸ್ಪೂರ್ತಿದಾಯಕ ಕಥೆ. ಬಹಳಷ್ಟು ಏಳು ಬೀಳುಗಳ ಮೂಲಕ ವಿಸ್ತಾರ ಫಾರ್ಮ್ಸ್ ಯಶಸ್ಸನ್ನು ಕಂಡಿದೆ. ಇವರ ಮಾರ್ಗದರ್ಶನದಲ್ಲಿ ಮೇಕೆ ಸಾಕಣೆ ಕುರಿತು ಕಲಿಯುವ ಮೂಲಕ ಈ ಸಾಕಣೆಯಲ್ಲಿ ನಷ್ಟ ಅನುಭವಿಸುವ ಸಾಧ್ಯತೆಯನ್ನು ಕಡಿಮೆ ಗೊಳಿಸಬಹುದು ಎಂಬ ಉದ್ದೇಶದಿಂದ ffreedom ಅಪ್ಲಿಕೇಶನ್ ಮೇಕೆ ಸಾಕಣೆ ಕುರಿತ ಸಮಗ್ರ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವೂ ಸಹ ಈ ಕೋರ್ಸ್ ಮೂಲಕ ಲಾಭವನ್ನು ಪಡೆದುಕೊಳ್ಳಬಹುದು.