ಈ ಕೋರ್ಸ್ ಒಳಗೊಂಡಿದೆ
ಸಾಮಾನ್ಯವಾಗಿ ಮದುವೆ, ನಾಮಕರಣ ಮತ್ತು ಇನ್ನಿತರೇ ಯಾವುದೇ ಶುಭ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಅನ್ನು ಅತ್ಯಧಿಕವಾಗಿ ಬಳಸಲಾಗುತ್ತದೆ. ಪ್ಲಾಸ್ಟಿಕ್ ಅನ್ನು ಬಳಸುವುದು ಮತ್ತು ತ್ಯಾಜ್ಯವಾಗಿ ಎಸೆಯುವುದು ಸುಲಭ ಎನ್ನುವ ಕಾರಣಕ್ಕೆ ಈ ಪ್ಲಾಸ್ಟಿಕ್ಕನ್ನು ಅತ್ಯಧಿಕವಾಗಿ ಬಳಸಲಾಗುತ್ತದೆ. ಆದರೆ ಈ ಪ್ಲಾಸ್ಟಿಕ್ ಪರಿಸರವನ್ನು ಹೆಚ್ಚು ಹೆಚ್ಚು ಕಲುಷಿತವಾಗಿಸುತ್ತಿದೆ. ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದ ಕಾರಣ ಹಲವಾರು ಪ್ರಾಣಿಸಂಕುಲಗಳಿಗೆ ವಿಷವಾಗಿ ಪರಿಣಮಿಸುತ್ತಿದೆ.
ಪ್ಲಾಸ್ಟಿಕ್ ಬಳಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಹಲವಾರು ಹೊಸ ರೀತಿಯ ಅವಿಷ್ಕಾರಗಳನ್ನು ಮಾಡಲಾಗುತ್ತ್ತಿದೆ. ಅಂತಹ ಯಶಸ್ವಿ ಆವಿಷ್ಕಾರದಲ್ಲಿ ಒಂದು ಈ ಅರೆಕಾ ಪ್ಲೇಟ್ಸ್ ಗಳು. ಇತ್ತೀಚಿನ ಕೆಲವು ಸ್ಟಡಿಗಳ ಪ್ರಕಾರ ಗ್ಲೋಬಲ್ ಪ್ಲಾಸ್ಟಿಕ್ ಪ್ರೊಡಕ್ಷನ್ ಸುಮಾರು 311 ಮಿಲಿಯನ್ ಟನ್ ನಷ್ಟಿದೆ ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಗಾತ್ರದ ಪ್ಲಾಸ್ಟಿಕ್ ಅನ್ನು ನಾವು ಹೇಗೆ ವಿಲೇವಾರಿ ಮಾಡುತ್ತಿದ್ದೇವೆ ಎಂಬುದರ ಅಂಶವನ್ನು ಗಮನಿಸಿದರೆ ನಿಜಕ್ಕೂ ದಿಗ್ಬ್ರಾಂತಿ ಆಗುತ್ತದೆ. 2050ರ ವೇಳೆಗೆ ಗ್ಲೋಬಲ್ ಪ್ಲಾಸ್ಟಿಕ್ ಪ್ರೊಡಕ್ಷನ್ ಪ್ರಸ್ತುತಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರವು ಸಹ ರಿಸೈಕಲ್ ಮಾಡಲಾಗದಂತಹ ಪ್ಲಾಸ್ಟಿಕ್ ಗಳನ್ನು ಬ್ಯಾನ್ ಮಾಡಲು ಚಿಂತನೆಯನ್ನು ನಡೆಸುತ್ತಿದೆ. ಈ ಕಾರಣಕ್ಕೆ ಅಡಿಕೆ ಪ್ಲೇಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ಮಾರುಕಟ್ಟೆ ಸಹ ದಿನದಿಂದ ದಿನಕ್ಕೆ ದೊಡ್ಡದಾಗುತ್ತ ಸಾಗುತ್ತಿದೆ. ನೀವು ಸಹ ಈ ಕೋರ್ಸ್ ಮೂಲಕ ಅರೇಕಾ ಪ್ಲೇಟ್ ಮ್ಯಾನುಫ್ಯಾಕ್ಚರಿಂಗ್ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.