ಈ ಕೋರ್ಸ್ ಒಳಗೊಂಡಿದೆ
ಬೇಕರಿ ಮತ್ತು ಸಿಹಿ ತಿನಿಸುಗಳು ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವೆರೆಗೂ ಸಹ ಎಲ್ಲರೂ ಇಷ್ಟಪಟ್ಟು ತಿನ್ನುವ ಒಂದು ಆಹಾರ. ನಮ್ಮ ದೇಶ ಮತ್ತು ರಾಜ್ಯ ಎರಡು ಸಹ ಬಹಳಷ್ಟು ಸಿಹಿ ಖಾದ್ಯಗಳಿಗೆ ಹೆಸರುವಾಸಿ ಆಗಿದೆ. ವಿಶೇಷ ಶುಭ ಸಂದರ್ಭಗಳಾದ ಮದುವೆ, ಹಬ್ಬ ಇತ್ಯಾದಿಗಳ ಆಚರಣೆಯಲ್ಲಿ ಸಿಹಿ ತಿನಿಸುಗಳು ಬಹಳ ಮಹತ್ವವನ್ನು ಪಡೆದುಕೊಳ್ಳುತ್ತವೆ. ಶುಭ ಸಂದರ್ಭಗಳಲ್ಲಿ ಸಿಹಿ ತಿನಿಸುಗಳ ಸೇವನೆ ಮಾಡುವುದು ನಮ್ಮ ಸಂಪ್ರದಾಯದ ಒಂದು ಭಾಗ ಎಂದು ಸಹ ಹೇಳಬಹುದು. ಇಂತಹ ಸಿಹಿ ತಿನಿಸು ಮತ್ತು ಬೇಕರಿ ಉದ್ಯಮಕ್ಕೆ ಬೇಡಿಕೆ ಯಾವಾಗಲೂ ಹೆಚ್ಚಿರುತ್ತದೆ.
ನಮ್ಮ ದೇಶದಲ್ಲಿ ಬೇಕರಿ ಮತ್ತು ಸ್ವೀಟ್ಸ್ ಉದ್ಯಮ ಈ ಕಾರಣಕ್ಕಾಗಿಯೇ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗುತ್ತಿದೆ ಎನ್ನಬಹುದು. ಬೇಕರಿಗಳಲ್ಲಿ ಸಿಗುವ ಆಹಾರದ ವೈವಿಧ್ಯತೆಯೂ ದಿನೇ ದಿನೇ ಬೆಳೆಯುತ್ತಿದೆ. ಬೇಕರಿ ಉದ್ಯಮದಲ್ಲಿ ಜನರು ಹೆಚ್ಚಿನ ಆಸಕ್ತಿ ವಹಿಸಿ ಅದರ ಮೂಲಕ ಉತ್ತಮ ಆದಾಯ ಗಳಿಸಿ ಸುಖೀ ಜೀವನ ನಡೆಸುತ್ತಿದ್ದಾರೆ. ಈ ಉದ್ಯಮದಲ್ಲಿ ವ್ಯಾಪಾರದ ಅವಕಾಶವೂ ಸಹ ದೊಡ್ಡದಾಗಿದೆ. ನೀವೂ ಸಹ ಈ ಕೋರ್ಸ್ ಮೂಲಕ ಈ ಉದ್ಯಮದ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.