ಈ ಕೋರ್ಸ್ ಒಳಗೊಂಡಿದೆ
ಸ್ವಂತವಾದ ಒಂದು ಬಿಸಿನೆಸ್ ಅನ್ನು ಶುರುಮಾಡುವುದು ಬಹಳ ಮಂದಿಯ ಕನಸಾಗಿರುತ್ತದೆ, ಒಂದು ಉತ್ತಮ ಬಿಸಿನೆಸ್ ಅನ್ನು ಶುರುಮಾಡಿ ಅದರಿಂದ ಹಣ ಸಂಪಾದಿಸುವ ಆಸೆ ಇರುತ್ತದೆ. ಹಣ ಸಂಪಾದಿಸುವ ಜೊತೆಗೆ, ಒಂದಿಷ್ಟು ಸ್ಥಳೀಯರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿ ಸ್ವಾವಲಂಬನೆಯ ಬದುಕು ನಡೆಸಬೇಕು ಎಂಬ ಕನಸಿರುತ್ತದೆ. ಅಂಥವರ ಕನಸುಗಳಿಗೆ ನೆರವಾಗಲು ಬಹಳಷ್ಟು ಬಿಸಿನೆಸ್ ಲೋನ್ ಗಳನ್ನು ಬ್ಯಾಂಕ್ ಮತ್ತು ಸರ್ಕಾರಗಳು ನೀಡುತ್ತಿವೆ.
ಉದ್ಯಮವನ್ನು ಸ್ಥಾಪಿಸುವ ಕನಸು ಕಂಡು, ಹಣಕಾಸಿನ ಕೊರತೆಯಿಂದಾಗಿ ಉದ್ಯಮವನ್ನು ಶುರುಮಾಡಲು ಅನೇಕರಿಗೆ ಸಾಧ್ಯವಾಗುವುದಿಲ್ಲ. ಉದ್ಯಮದ ಕನಸು ಕಂಡಿರುವ ಅನೇಕ ಯುವ ಚೇತನಗಳಿಗೆ ನೆರವಾಗಲು ಬಹಳಷ್ಟು ಬಿಸಿನೆಸ್ ಲೋನ್ ಗಳು ನಮ್ಮ ವ್ಯವಸ್ಥೆಯಲ್ಲಿ ಲಭ್ಯವಿದೆ. ಆದರೆ ಬಹಳಷ್ಟು ಮಂದಿಗೆ ಈ ಲೋನ್ ಗಳ ಕುರಿತಂತೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಇದೇ ಕಾರಣಕ್ಕೆ ಮತ್ತು ಹಲವು ಉದ್ಯಮಿಗಳಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಈ ಕೋರ್ಸ್ ಅನ್ನು ಪರಿಚಯಿಸಲಾಗಿದೆ. ಈ ಕೋರ್ಸ್ ಮೂಲಕ ನೀವು ಉದ್ಯಮಕ್ಕೆ ಅವಶ್ಯವಿರುವ ಲೋನ್ ಅನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಸಮಗ್ರ ಮಾಹಿತಿಯನ್ನು ಈ ಕೋರ್ಸ್ ಮೂಲಕ ಪಡೆದುಕೊಳ್ಳುತ್ತೀರಿ.