ಈ ಕೋರ್ಸ್ ಒಳಗೊಂಡಿದೆ
ಎಲ್ಲರಿಗೂ ತಾವೂ ಸುಂದರವಾಗಿ ಕಾಣಬೇಕೆಂಬ ಆಸೆ ಇರುತ್ತೆ. ಜನರು ಇದಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡಲು ಸಿದ್ಧರಿರುತ್ತಾರೆ. ತೆರೆ ಮೇಲೆ ಕಾಣುವ ನಟನಾಮಣಿಯರಿಂದ ಹಿಡಿದು ಮನೆಯಲ್ಲೇ ಇರುವ ಗೃಹಿಣಿಯರವರೆಗೆ ಎಲ್ಲಾರಿಗೂ ತಾವೂ ಸುಂದರವಾಗಿ ಆಕರ್ಷಕವಾಗಿರಬೇಕು ಎಂದು ಆಶಿಸುತ್ತಾರೆ. ಇದಕ್ಕೆ ನೆರವು ನೀಡೋದೇ ಮೇಕಪ್ ಆರ್ಟಿಸ್ಟ್‌ಗಳು. ಮೇಕಪ್ ಆರ್ಟಿಸ್ಟ್‌ಗಳು ಇವತ್ತಿನ ಲೇಟೆಸ್ಟ್ ಟ್ರೆಂಡಿಂಗ್ ಕರಿಯರ್ ಆಗಿಬಿಟ್ಟಿದೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನ ದೈನಂದಿನ ಜೀವನದಲ್ಲಿ ಅತ್ಯಂತ ಸುಂದರವಾಗಿ ಕಾಣಬೇಕು ಎಂಬ ಖಯಾಲಿ ಇರುತ್ತೆ.
ಒಬ್ಬರಿಗಿಂತ ಮತ್ತೊಬ್ಬರು ಸುಂದರವಾಗಿ ಕಾಣುವ ಹಾಗೆ ಮಾಡುವ ಮೇಕಪ್ ಆರ್ಟಿಸ್ಟ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಸಿನಿ ತಾರೆಯರಿಗೆ, ಮದುಮಕ್ಕಳಿಗೆ ಮೇಕಪ್ ಮಾಡುವ ಮೂಲಕ ಅದೆಷ್ಟೋ ಜನ ಮೇಕಪ್ ಆರ್ಟಿಸ್ಟ್‌ಗಳು ತಿಂಗಳಿಗೆ ಲಕ್ಷಾಂತರ ಹಣವನ್ನು ಸಂಪಾದಿಸುತ್ತಿದ್ದಾರೆ. ನಿಮಗೂ ಕೂಡ ಈ ವೃತ್ತಿಪರ ಕೋರ್ಸಿನಲ್ಲಿ ಆಸಕ್ತಿ ಉಂಟಾ? ನಾನು ಕೂಡ ಬಹಳ ಚೆನ್ನಾಗಿ ಮೇಕಪ್ ಮಾಡ್ತೀನಿ. ವೃತ್ತಿಪರವಾಗಿ ಮೇಕಪ್ ಆರ್ಟಿಸ್ಟ್ ಗಳಾಗಲು ಏನು ಮಾಡ್ಬೇಕು? ಇದಕ್ಕೆ ಎಷ್ಟು ಖರ್ಚಾಗುತ್ತೆ? ಈ ಎಲ್ಲಾ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ ಈ ಕೋರ್ಸ್ ಆಯ್ಕೆ ಮಾಡಿಕೊಳ್ಳಿ