ಈ ಕೋರ್ಸ್ ಒಳಗೊಂಡಿದೆ
ಆಹಾರ ತಯಾರಿಸಿ ಅದನ್ನು ವಿಧ ವಿಧವಾದ ಸಭೆ-ಸಮಾರಂಭಗಳಿಗೆ ಪೂರೈಸುವುದೇ ಕೇಟರಿಂಗ್ ಬಿಸಿನೆಸ್. ಊಟ ಯಾರಿಗೆ ಬೇಡ ಹೇಳಿ? ಪ್ರತಿಯೊಂದು ಸಭೆಯಲ್ಲಿ ಊಟ ಇದ್ದೇ ಇರತ್ತೆ. ಒಂದು ಸಮಾರಂಭ ಯಶಸ್ವಿಯಾಗಿ ಸಂಪನ್ನವಾಗಲು ಅಲ್ಲಿ ಪೂರೈಕೆ ಆಗುವ ಆಹಾರದ ಕ್ವಾಲಿಟಿ ಕೂಡ ಚೆನ್ನಾಗಿರಬೇಕು. ಮದುವೆ, ಬರ್ತಡೆ ಪಾರ್ಟಿ, ಇನ್ನಿತರ ಎಲ್ಲ ರೀತಿಯ ಸಮಾರಂಭಕ್ಕೂ ಕೇಟರಿಂಗ್ ಅತ್ಯವಶ್ಯ.
ಒಳ್ಳೆಯ ಊಟ ಇದ್ದರೆ, ಜನರು ಸಮಾರಂಭದ ಪ್ರಶಂಸೆ ಜೊತೆಗೆ ಕೇಟರಿಂಗ್‌ರವರನ್ನೂ ಸಹ ಹೊಗಳುತ್ತಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕೇಟರಿಂಗ್ ಬಿಸಿನೆಸ್‌ಗೆ ತನ್ನದೇ ಆದ ಬಿಸಿನೆಸ್ ವ್ಯಾಲ್ಯೂ ಇದೆ. ಇದು ಪ್ರತಿ ವರ್ಷಕ್ಕೆ 25-30% ಬೆಳೆಯುತ್ತಲೇ ಇದೆ. ಪ್ರತಿಯೊಂದು ಸ್ಥಳದ ಆಹಾರ ಪದ್ಧತಿಗೆ ತಕ್ಕಂತೆ ಪಾಕ ಪ್ರವೀಣರಿದ್ದರೆ, ನಿಮ್ಮ ಕೇಟರಿಂಗ್ ಬಿಸಿನೆಸ್ ಗೆದ್ದಂತೆಯೇ. ಇದಕ್ಕೆ ಬಂಡವಾಳ ಹೆಚ್ಚಿಗೆ ಬೇಕಾದರೂ ಸಹ, ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಬಿಸಿನೆಸ್ ಶುರು ಮಾಡುವುದು ಉತ್ತಮ.
ಸಣ್ಣ ಬರ್ತಡೆ ಪಾರ್ಟಿ, ಕಾರ್ಪೊರೇಟ್ ಮೀಟಿಂಗ್‌ಗಳಿಗೆ ಊಟ ಸಪ್ಲೈ ಮಾಡುತ್ತ ಬಿಸಿನೆಸ್ ಶುರು ಮಾಡಿದರೆ ನೀವು ಒಳ್ಳೆಯ ಆದಾಯ ಗಳಿಸಿ, ಬರುವ ಮೊತ್ತದಲ್ಲಿ ನಿಮ್ಮ ಬಿಸಿನೆಸ್‌ಅನ್ನು ವಿಸ್ತರಿಸಬಹುದು. ಅಡುಗೆ ಮಾಡಲು ನುರಿತ ಶೆಫ್, ಸಪ್ಲೈ ಮಾಡಲು ಕೆಲವೊಂದಿಷ್ಟು ಕೆಲಸಗಾರರು ಮತ್ತು ಅಡುಗೆಯನ್ನು ತೆಗೆದುಕೊಂಡು ಹೋಗಲು ವಾಹನಗಳಿದ್ದರೆ ಈ ಬಿಸಿನೆಸ್ ಮಾಡಲು ಸೂಕ್ತ. ಈ ಬಿಸಿನೆಸ್‌ನಲ್ಲಿ ಯಶಸ್ಸು ಸಾಧಿಸಲು ನೀವು ಅಡುಗೆಯ ರುಚಿಯ ಜೊತೆಗೆ, ಸಮಯಪ್ರಜ್ಞೆ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಈ ಕೋರ್ಸ್ ಪಡೆದು, ಕೇಟರಿಂಗ್ ಬಿಸಿನೆಸ್ ಶುರು ಮಾಡುವ ಬಗ್ಗೆ ಸಂಪೂರ್ಣ ಮಾಹಿತಿ ಕಲಿತುಕೊಳ್ಳಿ.