ಈ ಕೋರ್ಸ್ ಒಳಗೊಂಡಿದೆ
ಚಾಕಲೇಟ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರಿಗೂ ಇಷ್ಟ. ಇಂದು ಚಾಕಲೇಟ್ ಉದ್ಯಮಕ್ಕೆ ಉತ್ತಮ ಮಾರುಕಟ್ಟೆ ಇದೆ. ಚಾಕಲೇಟ್ ಇದು ಪ್ರತಿ ದೇಶದಲ್ಲಿ ಸಾರ್ವತ್ರಿಕ ಬೇಡಿಕೆಯನ್ನು ಹೊಂದಿರುವ ಒಂದು ಉತ್ಪನ್ನವಾಗಿದೆ. ಹಲವಾರು ವಿಧದ ಚಾಕೊಲೇಟ್‌ಗಳಿವೆ, ಅವುಗಳಲ್ಲಿ ಕೆಲವು ಹಾಲು, ಹಣ್ಣು ಮತ್ತು ಕಾಯಿ, ಡಾರ್ಕ್, ಪುದೀನ, ಸಿಹಿಗೊಳಿಸದ, ಜೇನು ಆಧಾರಿತ ಮತ್ತು ಹಣ್ಣು-ಆಧಾರಿತವುಗಳನ್ನು ಒಳಗೊಂಡಿವೆ. ನೀವು ಗುಣಮಟ್ಟದ ಚಾಕಲೇಟ್ ಗಳನ್ನು ತಯಾರಿಸಿ ನೀವು ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದು. 2020 ರಲ್ಲ ಭಾರತದಲ್ಲಿ ಚಾಕೊಲೇಟ್ ಉದ್ಯಮವು ₹ 190 ಕೋಟಿಗಳಷ್ಟಿತ್ತು. ಎಲ್ಲರಿಗೂ ಸಿಹಿ ನೆನಪುಗಳನ್ನು ಸೃಷ್ಟಿಸಲು ಹೆಸರಾಗಿರುವ ಈ ಉದ್ಯಮಕ್ಕೆ ನೀವು ಕಾಲಿಡಲು ಬಯಸುತ್ತೀರಾ? ಹಾಗಾದರೆ ನಿಮಗಾಗಿ ಮಾಹಿತಿ ಇಲ್ಲಿದೆ.