4.2 from 13K ರೇಟಿಂಗ್‌ಗಳು
 2Hrs 1Min

ಯೂಟ್ಯೂಬ್ ಬೇಸಿಕ್ ವಿಡಿಯೋ ಎಡಿಟಿಂಗ್ ಮತ್ತು ತಂಬ್‌ನೈಲ್ ಡಿಸೈನಿಂಗ್ ಕೋರ್ಸ್!

YouTube ವೀಡಿಯೊ ಸಂಪಾದನೆ ಮತ್ತು ಥಂಬ್‌ನೇಲ್ ವಿನ್ಯಾಸವನ್ನು ಕಲಿಯುವ ಮೂಲಕ ನಿಮ್ಮ ಸೃಜನಶೀಲತೆಯನ್ನು ಸಡಿಲಿಸಿ ಮತ್ತು ನಿಮ್ಮ ಆದಾಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಿರಿ!

ಈ ಕೋರ್ಸ್ ಇಲ್ಲಿ ಲಭ್ಯವಿದೆ:

YouTube Basic Video Editing and Thumbnail Designin
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(42)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 1Min
 
ಪಾಠಗಳ ಸಂಖ್ಯೆ
11 ವೀಡಿಯೊಗಳು
 
ನೀವು ಕಲಿಯುವುದು
ಬಿಸಿನೆಸ್ ಅವಕಾಶಗಳು, Completion Certificate
 
 

ಯೂಟ್ಯೂಬ್, ಗೂಗಲ್‌ನ ನಂತರ ಜನರು ಅತಿ ಹೆಚ್ಚು ಭೇಟಿ ನೀಡಿದ ಎರಡನೇ ಸರ್ಚ್ ಎಂಜಿನ್ ಪ್ಲಾಟ್‌ಫಾರ್ಮ್ ಆಗಿದೆ. ಆದ್ದರಿಂದ ಈ ಪ್ಲಾಟ್‌ಫಾರ್ಮ್ ಮೂಲಕ ನಿಮ್ಮ ಆಡಿಯನ್ಸ್ ಅನ್ನು ಆಕರ್ಷಿಸುವುದು ಯಾವುದೇ ಬಿಸಿನೆಸ್ ಗೆ ಉತ್ತಮವಾಗಿದೆ. ಯಾವುದೇ ವೀಡಿಯೊಗಳಿಗೆ ರೀಚ್, ಇಂಪ್ರೆಶನ್‌ಗಳು ಮತ್ತು ಎಂಗೇಜ್ಮೆಂಟ್ ಎಲ್ಲವೂ ಮುಖ್ಯವಾದ ಅಂಶವಾಗಿದೆ. YouTube ನ ಯಾವುದೇ ವೀಡಿಯೊಗೆ ಅದರ ಥಂಬ್‌ನೇಲ್‌ ಮೊದಲ ಆಕರ್ಷಣೆಯಾಗಿದ್ದು ಅದು ಕ್ಲಿಕ್-ಥ್ರೂ ರೇಟ್ (CTR) ಅನ್ನು ಹೆಚ್ಚಿಸುತ್ತದೆ ಮತ್ತು ವೀಡಿಯೊದಾದ್ಯಂತ ಆಡಿಯನ್ಸ್ ಅನ್ನು ಎಂಗೇಜ್ ಮಾಡಲು ಅದರ ಎಡಿಟಿಂಗ್ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಹೆಚ್ಚು ವೀಕ್ಷಕರನ್ನು ಆಕರ್ಷಿಸಲು ವಿಶಿಷ್ಟ ಮತ್ತು ವಿಭಿನ್ನ ಥಂಬ್‌ನೇಲ್‌ಗಳನ್ನು ಸಿದ್ಧಪಡಿಸಬೇಕು. ಆಕರ್ಷಕ ಥಂಬ್‌ನೇಲ್‌ಗಳು ವೀಕ್ಷಕರನ್ನು ವೀಡಿಯೊಗಳ ಮೇಲೆ ಕ್ಲಿಕ್ ಮಾಡಲು ಪ್ರೋತ್ಸಾಹಿಸುತ್ತವೆ. ನೀವು ಕೂಡ ವೀಡಿಯೊ ಎಡಿಟಿಂಗ್ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ffreedom App ಈ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವೂ ಸಹ ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು.

ಅಧಿಕೃತವಾಗಿ ffreedom App 6 ಭಾಷೆಗಳಲ್ಲಿ 18 ಯೂಟ್ಯೂಬ್ ಚಾನೆಲ್‌ಗಳನ್ನು ಹೊಂದಿದೆ ನಾವು ಥಂಬ್‌ನೇಲ್‌ಗಳು ಮತ್ತು ಎಡಿಟಿಂಗ್ ಪ್ಯಾಟರ್ನ್‌ಗಳಲ್ಲಿ ಹಲವಾರು ಸಂಯೋಜನೆಗಳನ್ನು ಪ್ರಯತ್ನಿಸಿದ್ದೇವೆ ಮತ್ತು ಯಾವುದು ಕಾರ್ಯನಿರ್ವಹಿಸುತ್ತಿದೆ ಮತ್ತು ಯಾವುದು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸ್ಪಷ್ಟ ಡೇಟಾವನ್ನು ನಾವು ಹೊಂದಿದ್ದೇವೆ ಮತ್ತು ಆ ಜ್ಞಾನದಿಂದ ನಾವು ಈ ಕೋರ್ಸ್ ಅನ್ನು ರಚಿಸಿದ್ದೇವೆ.

ಈ ಕೋರ್ಸ್‌ನಿಂದ, ನೀವು ವಿವಿಧ ರೀತಿಯ ಎಡಿಟಿಂಗ್ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್‌ಗಳ ಬಗ್ಗೆ ಕಲಿಯುವಿರಿ, ಯೂಟ್ಯೂಬ್ ವೀಡಿಯೊಗಾಗಿ ಥಂಬ್‌ನೇಲ್ ಅನ್ನು ಹೇಗೆ ವಿನ್ಯಾಸಗೊಳಿಸುವುದು? ಮೊಬೈಲ್‌, ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ವೀಡಿಯೊವನ್ನು ಹೇಗೆ ಎಡಿಟ್ ಮಾಡುವುದು ಎಂಬುದರ ಬಗ್ಗೆ ಸಹ ಈ ಕೋರ್ಸ್‌ ಮೂಲಕ ನೀವು ಅರ್ಥಮಾಡಿಕೊಳ್ಳುವಿರಿ.

ನೀವು ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಲು ಅಥವಾ ಯೂಟ್ಯೂಬ್ ಚಾನೆಲ್ ಅನ್ನು ಬೆಳೆಸಲು ಬಯಸಿದರೆ ಮತ್ತು ನಿಮ್ಮ ಕಂಟೆಂಟ್ ಮೂಲಕ ನಿಮ್ಮ ಆಡಿಯನ್ಸ್ ಅನ್ನು ಎಂಗೇಜ್ ಮಾಡಲು ಬಯಸಿದರೆ, ತಕ್ಷಣವೇ ಈ ಕೋರ್ಸ್ ಅನ್ನು ತೆಗೆದುಕೊಳ್ಳಿ. ಇದು ಯೂಟ್ಯೂಬ್ ನಲ್ಲಿ ಬೇಸಿಕ್ ವೀಡಿಯೊ ಎಡಿಟಿಂಗ್ ಮತ್ತು ಥಂಬ್‌ನೇಲ್ ವಿನ್ಯಾಸದ ಕುರಿತು ನೀವು ಹೊಂದಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಒದಗಿಸುತ್ತದೆ.

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಯೂಟ್ಯೂಬ್ ಮೂಲಕ ನಿಮ್ಮ ಪ್ರತಿಭೆಗಳು ಮತ್ತು ಕೌಶಲ್ಯಗಳನ್ನು ತೋರಿಸಲು ಬಯಸಿದ್ದರೆ ಈ ಕೋರ್ಸ್ ಅನ್ನು ಪರಿಗಣಿಸಿ

  • ಯೂಟ್ಯೂಬ್ ಮೂಲಕ ಗಳಿಸುವುದನ್ನು ಪರಿಗಣಿಸುವ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಉತ್ತಮವಾಗಿದೆ

  • ಪ್ರೇಕ್ಷಕರನ್ನು ಎಂಗೇಜ್ ಮಾಡುವುದು ಹೇಗೆ ಎಂದು ಕಲಿಯಲು ಆಸಕ್ತಿ ಹೊಂದಿರುವ ಯೂಟ್ಯೂಬ್ ಚಾನೆಲ್ ಮಾಲೀಕರು

  • ವೀಡಿಯೊ ಎಡಿಟಿಂಗ್ ಕುರಿತು ಅಡ್ವಾನ್ಸ್ ಜ್ಞಾನವನ್ನು ಪಡೆಯಲು ಬಯಸುವ ಉದಯೋನ್ಮುಖ ಅಥವಾ ಅನುಭವಿ ಎಡಿಟರ್ ಗಳು 

  • ಥಂಬ್‌ನೇಲ್‌ಗಳನ್ನು ಡಿಸೈನ್ ಮಾಡುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಬಯಸುವ ಮಹತ್ವಾಕಾಂಕ್ಷಿ ಗ್ರಾಫಿಕ್ ಡಿಸೈನರ್‌ಗಳು 

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ವೀಡಿಯೊ ಎಡಿಟಿಂಗ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ

  • ವೀಡಿಯೊಗಳಿಗಾಗಿ ಉತ್ತಮ ಥಂಬ್‌ನೇಲ್ ಅನ್ನು ಹೇಗೆ ವಿನ್ಯಾಸಗೊಳಿಸುವುದು ಎಂಬುದನ್ನು ವಿವರವಾಗಿ ತಿಳಿಯಿರಿ

  • ಅತ್ಯುತ್ತಮ ವೀಡಿಯೊ ಎಡಿಟಿಂಗ್ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್‌ಗಳ ಕುರಿತು ಉಪಯುಕ್ತ ಮಾಹಿತಿಯನ್ನು ಅನ್ವೇಷಿಸಿ

  • ಮೊಬೈಲ್ ಫೋನ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ವೀಡಿಯೊ ಎಡಿಟಿಂಗ್ ಮಾಡುವ ಕುರಿತು ವಿವರವಾಗಿ ತಿಳಿಯಿರಿ

  • ವೀಡಿಯೊ ಎಡಿಟಿಂಗ್ ನಲ್ಲಿ ವಿವಿಧ ಟರ್ಮಿನಾಲಜಿಯನ್ನು ಅನ್ವೇಷಿಸಿ ಮತ್ತು ಹಕ್ಕುಸ್ವಾಮ್ಯವಿಲ್ಲದ ಸಂಗೀತವನ್ನು ಹುಡುಕಲು ಕಲಿಯಿರಿ

 

ಅಧ್ಯಾಯಗಳು 

  • ವೀಡಿಯೊ ಎಡಿಟಿಂಗ್ ಎಂದರೇನು?: ವೀಡಿಯೊ ಎಡಿಟಿಂಗ್ ಕಾನ್ಸೆಪ್ಟ್ ಗಳ ಬಗ್ಗೆ ಮತ್ತು ಎಂಗೇಜಿಂಗ್ ಕಂಟೆಂಟ್ ಅನ್ನು ರಚಿಸುವಲ್ಲಿನ ಅದರ ಪ್ರಾಮುಖ್ಯತೆಯನ್ನು ತಿಳಿಯಿರಿ.
  • ಥಂಬ್‌ನೇಲ್ ಎಂದರೇನು?: ವೀಡಿಯೊ ಮಾರ್ಕೆಟಿಂಗ್‌ನಲ್ಲಿ ಥಂಬ್‌ನೇಲ್‌ಗಳ ಪಾತ್ರವನ್ನು ಅನ್ವೇಷಿಸಿ ಮತ್ತು ಅವು ವೀಡಿಯೊದ ಯಶಸ್ಸಿನ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂದು ತಿಳಿಯಿರಿ. 
  • ವಿವಿಧ ರೀತಿಯ ಎಡಿಟಿಂಗ್ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್‌ಗಳು: ವಿವಿಧ ರೀತಿಯ ಎಡಿಟಿಂಗ್ ಸಾಫ್ಟ್‌ವೇರ್ ಮತ್ತು ವೀಡಿಯೊ ಎಡಿಟಿಂಗ್‌ಗಾಗಿ ಲಭ್ಯವಿರುವ ಅಪ್ಲಿಕೇಶನ್‌ಗಳನ್ನು ತಿಳಿಯಿರಿ. 
  • ವೀಡಿಯೊ ಎಡಿಟಿಂಗ್ ಟರ್ಮಿನಾಲಜಿ: ವೀಡಿಯೊ ಎಡಿಟಿಂಗ್ ನಲ್ಲಿ ಬಳಸಲಾಗುವ ಟರ್ಮಿನಾಲಜಿಯನ್ನು ತಿಳಿಯಿರಿ. ಉದ್ಯಮದಲ್ಲಿ ಬಳಸುವ ಪ್ರಮುಖ ಟೆಕ್ನಿಕಲ್ ಪದಗಳ ಬಗ್ಗೆ ತಿಳುವಳಿಕೆಯನ್ನು ಪಡೆಯಿರಿ.
  • ಫೋನ್‌ನಲ್ಲಿ ವೀಡಿಯೊವನ್ನು ಹೇಗೆ ಎಡಿಟ್ ಮಾಡುವುದು?: ಸ್ಮಾರ್ಟ್‌ಫೋನ್ ಬಳಸಿಕೊಂಡು ವೀಡಿಯೊಗಳನ್ನು ಎಡಿಟ್ ಮಾಡುವ ಪ್ರಕ್ರಿಯೆಯನ್ನು ಅನ್ವೇಷಿಸಿ. ಮೊಬೈಲ್ ವೀಡಿಯೊ ಎಡಿಟಿಂಗ್ ಗಾಗಿ ಲಭ್ಯವಿರುವ ವಿವಿಧ ಅಪ್ಲಿಕೇಶನ್‌ಗಳ ಬಗ್ಗೆ ತಿಳಿಯಿರಿ. 
  • ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ವೀಡಿಯೊವನ್ನು ಹೇಗೆ ಎಡಿಟ್ ಮಾಡುವುದು?: ವಿವಿಧ ರೀತಿಯ ಎಡಿಟಿಂಗ್ ಸಾಫ್ಟ್‌ವೇರ್ ಮೂಲಕ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಬಳಸಿಕೊಂಡು ವೀಡಿಯೊಗಳನ್ನು ಎಡಿಟ್ ಮಾಡುವ ಪ್ರಕ್ರಿಯೆಯನ್ನು ಅನ್ವೇಷಿಸಿ.
  • ಪಠ್ಯ ಆಧಾರಿತ ವೀಡಿಯೊಗಳನ್ನು ಎಡಿಟ್ ಮಾಡುವುದು ಹೇಗೆ?: ಟ್ಯುಟೋರಿಯಲ್ ವೀಡಿಯೊಗಳು ಅಥವಾ ಎಕ್ಸ್-ಪ್ಲೇನರ್ ವೀಡಿಯೊಗಳಂತಹ ಪಠ್ಯದ ಮೇಲೆ ಹೆಚ್ಚು ಅವಲಂಬಿತವಾಗಿರುವ ವೀಡಿಯೊಗಳನ್ನು ಎಡಿಟ್ ಮಾಡುವುದು ಹೇಗೆ ಎಂದು ತಿಳಿಯಿರಿ.
  • ಹಕ್ಕುಸ್ವಾಮ್ಯವಿಲ್ಲದ ಸಂಗೀತವನ್ನು ಹುಡುಕುವುದು ಹೇಗೆ?: ನಿಮ್ಮ ವೀಡಿಯೊ ಪ್ರಾಜೆಕ್ಟ್‌ಗಳಿಗೆ ಹಕ್ಕುಸ್ವಾಮ್ಯವಿಲ್ಲದ ಸಂಗೀತವನ್ನು ಹೇಗೆ ಹುಡುಕುವುದು ಮತ್ತು ಬಳಸುವುದು ಎಂಬುದನ್ನು ತಿಳಿಯಿರಿ. 
  • ಯೂಟ್ಯೂಬ್ ವೀಡಿಯೊಗಾಗಿ ಥಂಬ್‌ನೇಲ್ ಅನ್ನು ಹೇಗೆ ವಿನ್ಯಾಸಗೊಳಿಸುವುದು?: ಯೂಟ್ಯೂಬ್ ವೀಡಿಯೊಗಾಗಿ ಪರಿಣಾಮಕಾರಿ ಥಂಬ್‌ನೇಲ್ ಅನ್ನು ವಿನ್ಯಾಸಗೊಳಿಸುವ ಪ್ರಕ್ರಿಯೆಯನ್ನು ಇದು ಒಳಗೊಂಡಿದೆ. ಉತ್ತಮ ಥಂಬ್‌ನೇಲ್ ವಿನ್ಯಾಸ ಮಾಡುವ ಅಂಶಗಳ ಬಗ್ಗೆ ನೀವು ಕಲಿಯುವಿರಿ.
  • ಸಾರಾಂಶ: ಹಿಂದಿನ ಮಾಡ್ಯೂಲ್‌ಗಳಲ್ಲಿ ಒಳಗೊಂಡಿರುವ ಪ್ರಮುಖ ಕಾನ್ಸೆಪ್ಟ್ ಗಳು ಮತ್ತು ತಂತ್ರಗಳನ್ನು ರೀಕ್ಯಾಪ್ ಮಾಡಿ.

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.