ಈ ಕೋರ್ಸ್ ಒಳಗೊಂಡಿದೆ
ನಿಮ್ಮದೇ ಸ್ವಂತ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ನೀವು ಆಸಕ್ತಿ ಹೊಂದಿದ್ದೀರಾ ಆದರೆ ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿದುಕೊಳ್ಳಲು ನಿಮಗೆ ಸಹಾಯ ಬೇಕೇ? ಹಾಗಿದ್ದರೆ ನಮ್ಮ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಕೋರ್ಸ್ ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ! ಈ ಕೋರ್ಸ್‌ನೊಂದಿಗೆ, ನೀವು ಯಶಸ್ವಿ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ನಿರ್ವಹಿಸಲು ಜೊತೆಗೆ 3೦ ರಿಂದ 40 ಪರ್ಸೆಂಟ್ ನಷ್ಟು ಲಾಭವನ್ನು ಗಳಿಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನೀವು ಕಲಿಯುವಿರಿ.
ಅಗತ್ಯ ಲೈಸೆನ್ಸ್ ಮತ್ತು ಪರ್ಮಿಟ್ ಗಳನ್ನು ಹೇಗೆ ಪಡೆಯುವುದು, ನಿಮ್ಮ ಡ್ರೈವಿಂಗ್ ಸ್ಕೂಲ್ ಅನ್ನು ಸೆಟ್ ಅಪ್ ಮಾಡುವುದು, ಇನ್ಸ್ಟ್ರಕ್ಟರ್ ಅನ್ನು ನೇಮಿಸಿಕೊಳ್ಳುವುದು ಮತ್ತು ತರಬೇತಿ ನೀಡುವುದು ಜೊತೆಗೆ ನಿಮ್ಮ ಬಿಸಿನೆಸ್ ಅನ್ನು ಮಾರ್ಕೆಟಿಂಗ್ ಮಾಡುವುದು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಈ ಕೋರ್ಸ್ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿದೆ. ನಿಖರವಾದ ದಾಖಲೆಗಳನ್ನು ಹೇಗೆ ಇಟ್ಟುಕೊಳ್ಳುವುದು ಮತ್ತು ನಿಮ್ಮ ಲಾಭವನ್ನು ಹೇಗೆ ಹೆಚ್ಚಿಸುವುದು ಸೇರಿದಂತೆ ನಿಮ್ಮ ಹಣಕಾಸುಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಸಹ ನೀವು ಸಲಹೆಗಳನ್ನು ಸ್ವೀಕರಿಸುತ್ತೀರಿ.
ನಮ್ಮ ಅನುಭವಿ ಇನ್ಸ್ಟ್ರಕ್ಟರ್ ಗಳು ಈ ಬಿಸಿನೆಸ್ ಪ್ರಕ್ರಿಯೆಯ ಹಂತ-ಹಂತದ ಮಾಹಿತಿಯನ್ನು ನೀಡುವ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಈ ಉದ್ಯಮದಲ್ಲಿ ನೀವು ಯಶಸ್ವಿಯಾಗಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಸಹ ಅವರು ನಿಮಗೆ ಒದಗಿಸುತ್ತಾರೆ. ಜೊತೆಗೆ ಸ್ಯಾಂಪಲ್ ಬಿಸಿನೆಸ್ ಪ್ಲಾನ್ಸ್, ಮಾರ್ಕೆಟಿಂಗ್ ಮೆಟೀರಿಯಲ್ಸ್, ಫೈನಾನ್ಷಿಯಲ್ ಟೆಂಪ್ಲೆಟ್ಸ್ ಸೇರಿದಂತೆ ಮೌಲ್ಯಯುತ ಸಂಪನ್ಮೂಲಗಳು ಮತ್ತು ಸಾಧನಗಳಿಗೆ ನೀವು ಪ್ರವೇಶವನ್ನು ಹೊಂದಿರುತ್ತೀರಿ.
ಶ್ರೀನಿವಾಸ್ ಮತ್ತು ಅನಿರುದ್ಧ್ ಇಬ್ಬರೂ ಯಶಸ್ವಿ ಉದ್ಯಮಿಗಳು, ಅವರು ತಮ್ಮ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ನಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ಅವರು ಕೆಲವೇ ಕೆಲವು ಸಂಪನ್ಮೂಲಗಳೊಂದಿಗೆ ತಮ್ಮ ಬಿಸಿನೆಸ್ ಅನ್ನು ಪ್ರಾರಂಭಿಸಿದರು ಮತ್ತು ತಮ್ಮ ಪರಿಶ್ರಮ ಜೊತೆಗೆ ಅತ್ಯುತ್ತಮ ಸೇವೆಯೊಂದಿಗೆ ಯಶಸ್ವಿ ಬಿಸಿನೆಸ್ ಅನ್ನು ನಿರ್ಮಿಸಿದರು. ಕಠಿಣ ಪರಿಶ್ರಮ ಮತ್ತು ತಾಳ್ಮೆಯಿಂದ ಯಶಸ್ಸು ಸಾಧಿಸಬಹುದು ಎಂದು ಅವರ ಕಥೆಗಳು ನಮಗೆ ನೆನಪಿಸುತ್ತವೆ.
ಕೋರ್ಸ್‌ನ ಅಂತ್ಯದ ವೇಳೆಗೆ, ನಿಮ್ಮದೇ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ಈ ಮೂಲಕ ಲಾಭವನ್ನು ಗಳಿಸಲು ನೀವು ಸಿದ್ಧರಾಗಿರುತ್ತೀರಿ. ನೀವು ಅನುಭವಿ ಉದ್ಯಮಿಯಾಗಿರಲಿ ಅಥವಾ ಮೊದಲ ಬಾರಿಗೆ ಬಿಸಿನೆಸ್ ಆರಂಭಿಸುತ್ತಿರಲಿ, ಈ ರೋಮಾಂಚಕಾರಿ ಇಂಡಸ್ಟ್ರಿಯಲ್ಲಿ ಬಿಸಿನೆಸ್ ಅನ್ನು ಪ್ರಾರಂಭಿಸಲು ನಮ್ಮ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಕೋರ್ಸ್ ಪರಿಪೂರ್ಣ ಆಯ್ಕೆಯಾಗಿದೆ.
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಡ್ರೈವಿಂಗ್ ಸ್ಕೂಲ್ ಇಂಡಸ್ಟ್ರಿಯಲ್ಲಿ ಆಸಕ್ತಿ ಹೊಂದಿರುವ ಮಹತ್ವಾಕಾಂಕ್ಷಿ ಉದ್ಯಮಿಗಳು
ತಮ್ಮದೇ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ಡ್ರೈವಿಂಗ್ ಇನ್ಸ್ಟ್ರಕ್ಟರ್
ತಮ್ಮ ಆಫರಿಂಗ್ಸ್ ಅನ್ನು ವೈವಿಧ್ಯಗೊಳಿಸಲು ಬಯಸುವ ಬಿಸಿನೆಸ್ ಮಾಲೀಕರು
ಡ್ರೈವಿಂಗ್ ಬಗ್ಗೆ ಮತ್ತು ಅದನ್ನು ಕಲಿಸುವ ಬಗ್ಗೆ ಪ್ಯಾಷನ್ ಹೊಂದಿರುವ ಯಾರಾದರೂ
ಲಾಭದಾಯಕ ವೃತ್ತಿಯನ್ನು ಹುಡುಕುತ್ತಿರುವ ವ್ಯಕ್ತಿಗಳು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಅಗತ್ಯ ಲೈಸೆನ್ಸ್ ಮತ್ತು ಪರ್ಮಿಟ್ ಗಳನ್ನು ಪಡೆಯಲು ಕಲಿಯಿರಿ
ಲಾಭದಾಯಕ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ಸಿದ್ದಪಡಿಸುವುದು ಎಂದು ತಿಳಿಯಿರಿ
ನಿಮ್ಮ ಬಿಸಿನೆಸ್ ಅನ್ನು ಮಾರ್ಕೆಟಿಂಗ್ ಮಾಡಲು ಮತ್ತು ಜಾಹೀರಾತು ಮಾಡಲು ತಂತ್ರಗಳನ್ನು ಅನ್ವೇಷಿಸಿ
ಡ್ರೈವಿಂಗ್ ಇನ್ಸ್ಟ್ರಕ್ಟರ್ ಅನ್ನು ಹೇಗೆ ನೇಮಿಸಿಕೊಳ್ಳುವುದು, ತರಬೇತಿ ನೀಡುವುದು ಮತ್ತು ನಿರ್ವಹಿಸುವುದು ಎಂಬುದನ್ನು ತಿಳಿದುಕೊಳ್ಳಿ
ಲಾಭ ಹೆಚ್ಚಿಸಲು ಮತ್ತು ಹಣಕಾಸು ನಿರ್ವಹಣೆಗೆ ಸಲಹೆಗಳನ್ನು ಪಡೆಯಿರಿ
ಅಧ್ಯಾಯಗಳು