4.3 from 4.8K ರೇಟಿಂಗ್‌ಗಳು
 1Hrs 45Min

ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಮಾಡಿ, 10%-15% ಲಾಭ ಗಳಿಸಿ!

ನಮ್ಮ ಕೋರ್ಸ್ ನೊಂದಿಗೆ ಕಲಿಯುವ ಮೂಲಕ ನೀವೂ ಸಹ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಅನ್ನು ಪ್ರಾರಂಭಿಸಿ 10-15% ವರೆಗೆ ಲಾಭ ಗಳಿಸಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Electrical Shop Business Course Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(147)
ಬಿಸಿನೆಸ್ ಕೋರ್ಸ್‌ಗಳು(105)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 45Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
ಬಿಸಿನೆಸ್ ಅವಕಾಶಗಳು, Completion Certificate
 
 

ತಮ್ಮ ಎಲೆಕ್ಟ್ರಿಕಲ್ ಶಾಪ್ ಅನ್ನು ಪ್ರಾರಂಭಿಸಲು ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕಲ್ ಶಾಪ್ ವ್ಯವಹಾರವನ್ನು ಸುಧಾರಿಸಲು ಬಯಸುವವರಿಗೆ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಕೋರ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್ ನಿಮಗೆ ಪರಿಣಾಮಕಾರಿಯಾದ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಪ್ಲಾನ್ ಅನ್ನು ರಚಿಸುವುದರಿಂದ ಹಿಡಿದು ಲಾಭದಾಯಕ ಬಿಸಿನೆಸ್ ಐಡಿಯಾಗಳನ್ನು ಕಾರ್ಯಗತಗೊಳಿಸುವ ವರೆಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಒದಗಿಸುತ್ತದೆ. 

ಬಿಸಿನೆಸ್ ಪ್ಲಾನ್ ಅನ್ನು ಅಭಿವೃದ್ಧಿ ಪಡಿಸುವುದು ಹೇಗೆ ಎಂಬುದರ ಜೊತೆಗೆ, ಈ ಕೋರ್ಸ್ ಎಲೆಕ್ಟ್ರಿಕಲ್ ಶಾಪ್ ನ ಬಿಸಿನೆಸ್ ಐಡಿಯಾ ಗಳ ಬಗ್ಗೆ ಸಹ ಮಾಹಿತಿಯನ್ನು ಒದಗಿಸುತ್ತದೆ. ಸಂಭಾವ್ಯ ಪೂರೈಕೆದಾರರು ಮತ್ತು ಉತ್ಪನ್ನಗಳನ್ನು ಗುರುತಿಸುವುದರಿಂದ ಹಿಡಿದು ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸುವವರೆಗಿನ ಎಲ್ಲ ಪ್ರಮುಖ ಮಾಹಿತಿಯನ್ನು ಈ ಕೋರ್ಸ್ ಒದಗಿಸುವ ಮೂಲಕ ನಿಮ್ಮ ಬಿಸಿನೆಸ್ ಅನ್ನು ಇತರರಿಗಿಂತ ಭಿನ್ನವಾಗಿ ಎದ್ದು ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ.   

ನಿಮಗೆ ಇರಬಹುದಾದ ಪ್ರಮುಖ ಪ್ರಶ್ನೆಗಳಲ್ಲಿ ಒಂದು ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಲಾಭದಾಯಕವೇ ಅಲ್ಲವೇ ಎಂಬುದು. ಹೀಗಾಗಿ ನಿಮ್ಮ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ಒದಗಿಸಲು ಈ ಕೋರ್ಸ್ ಅನ್ನು ಇಬ್ಬರು ಮಾರ್ಗದರ್ಶಕರು ಮುನ್ನಡೆಸಲಿದ್ದಾರೆ. ಈ ಇಬ್ಬರೂ ಸಹ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ನಲ್ಲಿ ಉತ್ತಮ ಆದಾಯವನ್ನು ಗಳಿಸುವ ಮೂಲಕ ಯಶಸ್ಸನ್ನು ಸಾಧಿಸಿದ್ದಾರೆ. 

ಎಂಬಿಎ ಪದವೀಧರರಾದ ರಾಜೇಶ್ಕರ್ ಗೌಡ ಅವರು ತಮ್ಮ ಕಠಿಣ ಪರಿಶ್ರಮದಿಂದ ಮತ್ತು 6 ಉದ್ಯೋಗಿಗಳ ಸಹಾಯದಿಂದ ತಮ್ಮ ವ್ಯಾಪಾರವನ್ನು ಮಾಸಿಕ 1.5 ಕೋಟಿಯಷ್ಟು ಗಳಿಕೆ ಮಾಡುವಷ್ಟು ಬೆಳೆಸಿದ್ದಾರೆ. ಕೇವಲ 10 ನೇ ತರಗತಿ ತೇರ್ಗಡೆ ಆಗಿರುವ ರಾಜಸ್ಥಾನದ ಧರ್ಮರಾಮ್ ಅವರು ಮೈಸೂರಿಗೆ ತೆರಳಿ ಅಲ್ಲಿ ಇಂದು 1.75 ಕೋಟಿಯಷ್ಟು ವಹಿವಾಟು ಮಾಡುವ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಅನ್ನು ನಡೆಸುತ್ತಿದ್ದಾರೆ ಮತ್ತು  ಅದು 50 ಶಾಖೆಗಳನ್ನು ಹೊಂದಿದೆ. 

ಒಟ್ಟಾರೆಯಾಗಿ, ಈ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಕೋರ್ಸ್ ತಮ್ಮದೇ ಆದ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ಅಥವಾ ಸುಧಾರಿಸಲು ಬಯಸುವವರಿಗೆ ಅತ್ಯುತ್ತಮ ಸಂಪನ್ಮೂಲವಾಗಿದೆ. ಪ್ರಾಯೋಗಿಕ ವ್ಯಾಪಾರ ಸಲಹೆ ಮತ್ತು ನೈಜ-ಪ್ರಪಂಚದ ಉದಾಹರಣೆಗಳ ಸಂಯೋಜನೆಯೊಂದಿಗೆ, ಈ ಉದ್ಯಮದಲ್ಲಿ ನೀವು ಯಶಸ್ವಿಯಾಗಲು ಅಗತ್ಯವಿರುವ ಎಲ್ಲ ರೀತಿಯ ಜ್ಞಾನ ಮತ್ತು ವಿಶ್ವಾಸವನ್ನು  ಈ ಕೋರ್ಸ್ ಒದಗಿಸುತ್ತದೆ. 

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಈ ಇಂಡಸ್ಟ್ರಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಅಥವಾ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವವರು

  • ಎಲೆಕ್ಟ್ರಿಕಲ್ ಉಪಕರಣದ ಸಂಬಂಧ ಹೆಚ್ಚು ಉತ್ಸಾಹವಿರುವವರು

  • ಸರ್ವಿಸ್ ಶಾಪ್ ಅನ್ನು ಹೊಂದಿರುವ ಜನರು ಮತ್ತು ಈ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆಯಲು ಬಯಸುವವರು

  • ಉತ್ತಮ ಲಾಭವನ್ನು ಗಳಿಸುವ ವಿಭಿನ್ನ ವ್ಯವಹಾರ ಕಲ್ಪನೆಗಳನ್ನು ಅನ್ವೇಷಿಸುವ ಯಾರಾದರೂ

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಲಾಭದಾಯಕ ಎಲೆಕ್ಟ್ರಿಕಲ್ ಅಂಗಡಿ ವ್ಯಾಪಾರವನ್ನು ಪ್ರಾರಂಭಿಸಲು ಕಲಿಯಿರಿ

  • ಕಂಪನಿಗೆ ಆರಂಭಿಕ ಬಂಡವಾಳ ಮತ್ತು ಫಂಡಿಂಗ್ ಅನ್ನು ಹೇಗೆ ವ್ಯವಸ್ಥೆ ಮಾಡುವುದು ಎಂದು ತಿಳಿಯಿರಿ

  • ವ್ಯವಹಾರವನ್ನು ಪ್ರಾರಂಭಿಸಲು ಅಗತ್ಯವಿರುವ ಸಲಕರಣೆಗಳ ಪ್ರಕಾರಗಳ ಬಗ್ಗೆ ತಿಳಿಯಿರಿ

  • ವ್ಯಾಪಾರದಿಂದ ನೀವು ಎಷ್ಟು ಗಳಿಸಬಹುದು ಮತ್ತು ಅದನ್ನು ನಡೆಸಲು ತಗಲುವ ವೆಚ್ಚಗಳೇನು ಎಂಬುದನ್ನು ತಿಳಿಯಿರಿ

  • ವ್ಯಾಪಾರದಲ್ಲಿ ಎದುರಿಸುತ್ತಿರುವ ಕೆಲವು ಸಾಮಾನ್ಯ ಸವಾಲುಗಳ ಬಗ್ಗೆ ತಿಳಿಯಿರಿ

 

ಅಧ್ಯಾಯಗಳು 

  • ಕೋರ್ಸ್ ಅವಲೋಕನ ಮತ್ತು ಉದ್ದೇಶಗಳು: ಈ ಕೋರ್ಸ್‌ನಾದ್ಯಂತ ನೀವು ಏನನ್ನು ನಿರೀಕ್ಷಿಸಬಹುದು ಮತ್ತು ಕಲಿಯಬಹುದು ಎಂಬುದರ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ನೀಡುತ್ತದೆ
  • ಮಾರ್ಗದರ್ಶಕರನ್ನು ಭೇಟಿ ಮಾಡಿ: ಈ ಮಾಡ್ಯೂಲ್ ಕೋರ್ಸ್ ನ ಮಾರ್ಗದರ್ಶಕರನ್ನು ಪರಿಚಯಿಸುತ್ತದೆ, ಅವರ ಹಿನ್ನಲೆ, ಅನುಭವ ಮತ್ತು ಪರಿಣತಿಯ ಕ್ಷೇತ್ರಗಳ ಮಾಹಿತಿಯನ್ನು ಒದಗಿಸುತ್ತದೆ
  • ಎಲೆಕ್ಟ್ರಿಕಲ್ ಶಾಪ್ ವ್ಯವಹಾರವನ್ನು ಪ್ರಾರಂಭಿಸುವುದು: ಈ ಮಾಡ್ಯೂಲ್ ಎಲೆಕ್ಟ್ರಿಕಲ್ ಶಾಪ್ ವ್ಯವಹಾರವನ್ನು ಪ್ರಾರಂಭಿಸಲು ಸಂಬಂಧಿಸಿದ ಮೂಲಭೂತ ಪ್ರಶ್ನೆಗಳು ಮತ್ತು ಪರಿಕಲ್ಪನೆಗಳನ್ನು ಒಳಗೊಂಡಿರುತ್ತದೆ
  • ಬಂಡವಾಳ, ಕ್ರೆಡಿಟ್ ಮತ್ತು ವಿಮೆ: ಈ ಮಾಡ್ಯೂಲ್ ಬಂಡವಾಳ, ಕ್ರೆಡಿಟ್ ಸೌಲಭ್ಯಗಳು ಮತ್ತು ವಿಮೆಯನ್ನು ಸೇರಿದಂತೆ ಎಲೆಕ್ಟ್ರಿಕಲ್ ಶಾಪ್ ವ್ಯವಹಾರವನ್ನು ಪ್ರಾರಂಭಿಸುವ ನಿಟ್ಟಿನಲ್ಲಿನ ಹಣಕಾಸಿನ ಅಂಶಗಳನ್ನು ಅನ್ವೇಷಿಸುತ್ತದೆ.
  • ಸರಿಯಾದ ಸ್ಥಳ ಆಯ್ಕೆ: ಎಲೆಕ್ಟ್ರಿಕಲ್ ಶಾಪ್ ವ್ಯವಹಾರವನ್ನು ಪ್ರಾರಂಭಿಸಲು ಸರಿಯಾದ ಸ್ಥಳವನ್ನು ಹೇಗೆ ಆಯ್ಕೆ ಮಾಡುವುದು ಎಂಬುದರ ಕುರಿತ ಉಪಯುಕ್ತ ಸಲಹೆಗಳನ್ನು ನೀಡುತ್ತದೆ
  • ವ್ಯಾಪಾರಕ್ಕಾಗಿ ಕಾನೂನು ಅವಶ್ಯಕತೆಗಳನ್ನು ನ್ಯಾವಿಗೇಟ್ ಮಾಡುವುದು: ಪರವಾನಗಿಗಳನ್ನು ಪಡೆಯುವುದು ಮತ್ತು ನಿಯಮಗಳ ಅನುಸರಣೆ ಸೇರಿದಂತೆ ಈ ಬಿಸಿನೆಸ್ ಪ್ರಾರಂಭಿಸುವ ನಿಟ್ಟಿನಲ್ಲಿನ ಕಾನೂನು ಅವಶ್ಯಕತೆಗಳನ್ನು ಒಳಗೊಂಡಿರುತ್ತದೆ
  • ಕಾರ್ಮಿಕರ ನೇಮಕ ಮತ್ತು ತರಬೇತಿ: ಈ ಮಾಡ್ಯೂಲ್ ಸೂಕ್ತ ಕಾರ್ಮಿಕರನ್ನು ನೇಮಕ ಮಾಡುವುದರ ಪ್ರಾಮುಖ್ಯತೆ ಮತ್ತು ಅವರಿಗೆ ಅವಶ್ಯ ತರಬೇತಿ ನೀಡುವುದು ಹೇಗೆ ಎಂಬುದರ ಕುರಿತು ಸಲಹೆಗಳನ್ನು ನೀಡುತ್ತದೆ
  • ಸಲಕರಣೆ ಖರೀದಿ ಮತ್ತು ಸರಬರಾಜು: ಖರೀದಿಯ ನಿಯಮಗಳು ಮತ್ತು ಪಾವತಿ ಆಯ್ಕೆಗಳನ್ನು ಒಳಗೊಂಡಂತೆ ಎಲೆಕ್ಟ್ರಿಕಲ್ ಶಾಪ್ ವ್ಯವಹಾರಕ್ಕಾಗಿ ಉಪಕರಣಗಳ ಖರೀದಿ ಮತ್ತು ಸರಬರಾಜಿನ ಕುರಿತ ಮಾಹಿತಿ ಒಳಗೊಂಡಿರುತ್ತದೆ
  • ಒದಗಿಸುವ ಸೇವೆಗಳು: ಎಲೆಕ್ಟ್ರಿಕಲ್ ಶಾಪ್ ವ್ಯಾಪಾರವು ನೀಡಬಹುದಾದ ಸೇವೆಗಳ ಅವಲೋಕನವನ್ನು ಮತ್ತು ಪ್ರತಿಸ್ಪರ್ಧಿಗಳಿಂದ ಹೇಗೆ ನಿಮ್ಮ ಸೇವೆಯನ್ನು ಪ್ರತ್ಯೇಕಿಸುವುದು ಎಂಬುದರ ಬಗ್ಗೆ ತಿಳಿಯಿರಿ 
  • ಬೆಲೆ ನಿಗದಿ ಮತ್ತು ಪ್ರಾಫಿಟ್ ಮಾರ್ಜಿನ್: ಎಲೆಕ್ಟ್ರಿಕಲ್ ಶಾಪ್ ವ್ಯವಹಾರದಲ್ಲಿ ಬೆಲೆಗಳನ್ನು ಹೇಗೆ ನಿಗದಿಸುವುದು ಮತ್ತು ಲಾಭದಾಯಕತೆಯನ್ನು ಹೆಚ್ಚಿಸುವುದು ಎಂಬುದರ ಕುರಿತು ಸಲಹೆಗಳನ್ನು ಪಡೆಯಿರಿ
  • ಆನ್‌ಲೈನ್ ಉಪಸ್ಥಿತಿಯನ್ನು ನಿರ್ಮಿಸುವುದು: ಆನ್‌ಲೈನ್ ಉಪಸ್ಥಿತಿಯ ಪ್ರಾಮುಖ್ಯತೆಯ ಜೊತೆಗೆ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಉಪಸ್ಥಿತಿಯನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಕುರಿತ ಸಲಹೆಗಳನ್ನು ನೀಡುತ್ತದೆ
  • ಮಾರ್ಕೆಟಿಂಗ್ ತಂತ್ರಗಳು: ಈ ಮಾಡ್ಯೂಲ್ ಜಾಹೀರಾತು, ಪಬ್ಲಿಕ್ ರಿಲೇಶನ್ ಶಿಪ್ ಸೇರಿದಂತೆ ಪ್ರಮೊಟಿಂಗ್ ಮಾಡಲು ಬಳಸಬಹುದಾದ ಮಾರ್ಕೆಟಿಂಗ್ ತಂತ್ರಗಳು ಮತ್ತು ತಂತ್ರಗಳ ಅವಲೋಕನವನ್ನು ಒದಗಿಸುತ್ತದೆ.
  • ಸವಾಲುಗಳನ್ನು ಎದುರಿಸುವುದು: ಎಲೆಕ್ಟ್ರಿಕಲ್ ಶಾಪ್ ವ್ಯವಹಾರದಲ್ಲಿ ಎದುರಾಗುವ ಸಾಮಾನ್ಯ ಸವಾಲುಗಳ ಬಗ್ಗೆ ಮತ್ತು ಆ ಸವಾಲುಗಳನ್ನು ಎದುರಿಸಿ ಜಯಿಸುವ ತಂತ್ರಗಳ ಬಗ್ಗೆ ತಿಳಿಯಿರಿ  
  • ಮಾರ್ಗದರ್ಶಕರ ಸಲಹೆಗಳು: ಎಲೆಕ್ಟ್ರಿಕಲ್ ಶಾಪ್ ವ್ಯವಹಾರದಲ್ಲಿ ಯಶಸ್ವಿಯಾಗುವ ನಿಟ್ಟಿನಲ್ಲಿ ಈ ಕೋರ್ಸ್ ಮಾರ್ಗದರ್ಶಕರಿಂದ ಅತ್ಯುತ್ತಮ ಸಲಹೆಗಳು 

 

 

ಸಂಬಂಧಿತ ಕೋರ್ಸ್‌ಗಳು