ಈ ಕೋರ್ಸ್ ಒಳಗೊಂಡಿದೆ
ನೀವು ಬಿಸಿನೆಸ್ ಮಾಡಿ, ಹಣ ಗಳಿಸುವುದು ನಿಜ ಇರಬಹುದು. ಆದರೆ, ನೀವು ತಯಾರಿಸಿದ ಪ್ರೊಡಕ್ಟ್‌ಗಳನ್ನು ಹೊರ ದೇಶಕ್ಕೆ ಕಳುಹಿಸುವ ಮಾತು ಬಂದಾಗ ಸ್ವಲ್ಪ ತಲೆನೋವು ಬರಬಹುದು. ನಿಮ್ಮ ಉತ್ಪನ್ನವನ್ನು ಎಕ್ಸ್‌ಪೋರ್ಟ್ ಹೇಗೆ ಮಾಡಬೇಕು? ನಾವು ಬೆಳೆಯುವ ಬೆಳೆ ಅಥವಾ ತಯಾರಿಸಿದ ಯಾವುದೇ ವಸ್ತುವನ್ನು ಹೊರದೇಶಕ್ಕೆ ಕಳುಹಿಸಬಹುದು. ಪ್ರತಿಯೊಬ್ಬರೂ ಸಹ ಈ ಇಂಪೋರ್ಟ್ ಮತ್ತು ಎಕ್ಸ್‌ಪೋರ್ಟ್ ಬಿಸಿನೆಸ್ ಬಗ್ಗೆ ತಿಳಿದುಕೊಳ್ಳಲೇಬೇಕು.
ನೀವು ನಿಮ್ಮ ಪ್ರೋಡಕ್ಟ್‌ಗಳನ್ನು ಎಕ್ಸ್‌ಪೋರ್ಟ್ ಮಾಡಲು ಅನುಮತಿ ಮತ್ತು ಲೈಸೆನ್ಸ್ ಪಡೆಯಬೇಕು. ಪ್ರೊಡಕ್ಟ್‌ಗಳನ್ನು ಎಕ್ಸ್‌ಪೋರ್ಟ್ ಮಾಡಲು ನೀವು ಪ್ರೊಡಕ್ಟ್ ಕ್ವಾಲಿಟಿ ಮೆಂಟೇನ್ ಮಾಡಲೇಬೇಕು. ಕೋವಿಡ್ ಸಂಕಷ್ಟದ ಸಮಯದಲ್ಲೂ ಸಹ ಭಾರತ ಸುಮಾರು 31 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ಎಕ್ಸ್‌ಪೋರ್ಟ್ ಮಾಡಿದೆ. ಇದರೊಂದಿಗೆ ಜಾಗತಿಕ ಮಟ್ಟದಲ್ಲಿ ರಫ್ತಿನ ತಾಣ ಆಗುವಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಭಾರತದಿಂದ ಸುಮಾರು 2 ಲಕ್ಷ ವಸ್ತುಗಳು ಎಕ್ಸ್‌ಪೋರ್ಟ್ ಆಗುತ್ತಿವೆ.
ಭಾರತದಿಂದ ಎಕ್ಸ್‌ಪೋರ್ಟ್ ಆಗುತ್ತಿರುವ ಕೆಲವು ವಸ್ತುಗಳು ಯಾವೆಂದರೆ, ಎಂಜಿನಿಯರಿಂಗ್ ಸರಕುಗಳು, ಪೆಟ್ರೋಲಿಯಂ ಪ್ರೊಡಕ್ಟ್, ವಿವಿಧ ರತ್ನ ಮತ್ತು ಆಭರಣಗಳು, ಕಾಟನ್ ಮತ್ತು ಕೈಮಗ್ಗ ಉತ್ಪನ್ನಗಳು ಮುಂತಾದವು. ಈ ಕೋರ್ಸ್ ಮಾಡಿ ನೀವೂ ಸಹ ವಸ್ತುಗಳನ್ನು ಎಕ್ಸ್‌ಪೋರ್ಟ್ ಮಾಡುವ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.