ಈ ಕೋರ್ಸ್ ಒಳಗೊಂಡಿದೆ
ಭಾರತ ಕೃಷಿ ಪ್ರಧಾನ ದೇಶವಾಗಿದೆ. ಭಾರತವು ತನ್ನ ಹೆಚ್ಚಿನ ಆದಾಯವನ್ನು ಇಂದಿಗೂ ಸಹ ಕೃಷಿಯ ಮೂಲಕ ಗಳಿಸುತ್ತಿದೆ. ಆಹಾರ ಮತ್ತು ದಿನಸಿ ಮಾರುಕಟ್ಟೆಯಲ್ಲಿ ಭಾರತ ಪ್ರಪಂಚದಲ್ಲೇ ಆರನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ ಮತ್ತು ಜಾಗತಿಕ ಮಟ್ಟದಲ್ಲಿ ಐದನೇ ಅತಿದೊಡ್ಡ ಚಿಲ್ಲರೆ ಮಾರುಕಟ್ಟೆಯನ್ನು ಸಹ ಹೊಂದಿದೆ. ಆಹಾರ ಸಂಸ್ಕರಣಾ ಉದ್ಯಮವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ಭವಿಷ್ಯದ ಪ್ರಮುಖ ಉದ್ಯಮವಾಗುವ ಎಲ್ಲ ಲಕ್ಷಣವನ್ನು ಸಹ ಇದು ಹೊಂದಿದೆ.
ಆಹಾರ ಸಂಸ್ಕರಣಾ ಘಟಕಗಳು ಕಚ್ಚಾ ವಸ್ತುಗಳನ್ನು ಸೇವಿಸಬಹುದಾದ ಆಹಾರ ಉತ್ಪನ್ನವಾಗಿ ಪರಿವರ್ತಿಸುವಲ್ಲಿ ಅಗತ್ಯವಿರುವ ಎಲ್ಲಾ ವಿಧಾನಗಳು ಮತ್ತು ತಂತ್ರಗಳನ್ನು ಒಳಗೊಂಡಿರುತ್ತದೆ. ಆಹಾರ ಸಂಸ್ಕರಣಾ ಘಟಕಗಳು ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಮೀನುಗಾರಿಕೆಯಂತಹ ಕೃಷಿ ಚಟುವಟಿಕಗಳ ಅವಿಭಾಜ್ಯ ಅಂಗವಾಗಿದೆ. ಸಂಸ್ಕರಿಸಿದ ಆಹಾರ ಉದ್ಯಮದ ಒಟ್ಟು ಮಾರುಕಟ್ಟೆ ಮೌಲ್ಯವು ಸುಮಾರು ₹ 1100 ಕೋಟಿ ಎಂದು ಅಂದಾಜಿಸಲಾಗಿದೆ ಮತ್ತು ಈ ಉದ್ಯಮವು ವಾರ್ಷಿಕವಾಗಿ 10-15% CAGR ವೇಗದಲ್ಲಿ ಬೆಳೆಯುತ್ತಿದೆ.
ಈ ಬಿಸಿನೆಸ್ ನಲ್ಲಿರುವ ವ್ಯಾಪಾರ ಅವಕಾಶವನ್ನು ಗಮನಿಸಿ ffreedom ಅಪ್ಲಿಕೇಶನ್ ಉತ್ತಮ ಮಾರ್ಗದರ್ಶಕರ ಸಹಾಯದಿಂದ ಫುಡ್ ಪ್ರೊಸೆಸಿಂಗ್ ಬಿಸಿನೆಸ್ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವು ಸಹ ಈ ಕೋರ್ಸ್ ಮೂಲಕ ಈ ಬಿಸಿನೆಸ್ ಕುರಿತಂತೆ ಉಪಯುಕ್ತ ಮಾಹಿತಿಯನ್ನು ಪಡೆಯಬಹುದು.