ಈ ಕೋರ್ಸ್ ಒಳಗೊಂಡಿದೆ
ಫೌಂಡೇಶನ್ ಮೇಕಪ್ ಆರ್ಟಿಸ್ಟ್ ಕೋರ್ಸ್ ಆರ್ಟಿಸ್ಟ್ ಆಗಬೇಕೆಂದಿದ್ದೀರಾ? ಹಾಗಾದರೆ ಈ ಕೋರ್ಸ್ ನಿಮಗಾಗಿ ಆಗಿದೆ. ಖ್ಯಾತ ಮೇಕಪ್ ಕೋರ್ಸ್ ಆರ್ಟಿಸ್ಟ್ ರಕ್ಷಾ ಜೋಯಿಸ್ ಮಾರ್ಗದರ್ಶನದ ಈ ಕೋರ್ಸ್ ಮೇಕಪ್ ಬಗೆಗಿನ ಎಲ್ಲಾ ಅಂಶಗಳನ್ನು ಒಳಗೊಂಡಿದೆ.
ನೈಸರ್ಗಿಕ ಲುಕ್ ಪಡೆಯುವ ಮೇಕ್‌ಅಪ್ ಸಲಹೆಗಳೊಂದಿಗೆ ಆರಂಭವಾಗುವ ಈ ಕೋರ್ಸ್ ಫೌಂಡೇಶನ್ ಆಯ್ಕೆ ಹೇಗೆ,ಮೇಕಪ್ ಆರ್ಟಿಸ್ಟ್ ಆಗುವುದು ಹೇಗೆ, ಮಾರ್ಕೆಟಿಂಗ್ ಮಾಡುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ತಿಳಿಯುವಿರಿ. ಕೋರ್ಸ್‌ನುದ್ದಕ್ಕೂ, ಮಾರ್ಗದರ್ಶಕ ರಕ್ಷಾ ಜೋಯಿಸ್, ವಿದ್ಯಾರ್ಥಿಗಳಿಗೆ ಮೇಕ್ಅಪ್ ಅನ್ವಯಿಸುವ ಕಲೆಯನ್ನು ಕರಗತ ಮಾಡಿಕೊಳ್ಳಲು ಪ್ರಾಕ್ಟಿಕಲ್ ಮಾಹಿತಿಯನ್ನು ನೀಡುತ್ತಾರೆ. ಫೌಂಡೇಶನ್ ಮೇಕಪ್ ಕಲಾವಿದರಾಗಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ಕೌಶಲ್ಯಗಳನ್ನು ಇವರು ಮೇಕಪ್ ಆರ್ಟಿಸ್ಟ್ ಆಗಬಯಸುವವರಿಗೆ ಸಲಹೆಯನ್ನು ನೀಡುತ್ತಾರೆ.
ಮೇಕಪ್ ಕಲಾತ್ಮಕತೆಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ಅಥವಾ ಅವರ ಕೌಶಲ್ಯಗಳನ್ನು ಹೆಚ್ಚಿಸಲು ಬಯಸುವವರು ಯಾರಿಗಾದರೂ ಫೌಂಡೇಶನ್ ಮೇಕಪ್ ಆರ್ಟಿಸ್ಟ್ ಬಿಸಿನೆಸ್ ಕೋರ್ಸ್ ಪರಿಪೂರ್ಣ ಆಯ್ಕೆಯಾಗಿದೆ. ನೀವು ಈ ಕ್ಷೇತ್ರಕ್ಕೆ ಹೊಸಬರಾಗಿರಲಿ ಅಥವಾ ಅನುಭವಿ ಮೇಕಪ್ ಕಲಾವಿದರಾಗಿರಲಿ, ಈ ಕೋರ್ಸ್ ನಿಮಗೆ ಉದ್ಯಮದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಿರುವ ಜ್ಞಾನ ಮತ್ತು ತಂತ್ರಗಳನ್ನು ನೀಡುತ್ತದೆ. ರಕ್ಷಾ ಜೋಯಿಸ್ ನಿಮ್ಮ ಮಾರ್ಗದರ್ಶಕರಾಗಿ, ಯಶಸ್ವಿ ಫೌಂಡೇಶನ್ ಮೇಕಪ್ ಕಲಾವಿದರಾಗುವಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ.
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಮೇಕ್ಅಪ್ ಮತ್ತು ಬ್ಯೂಟಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು
ತಮ್ಮ ಕೌಶಲ್ಯಗಳನ್ನು ವಿಸ್ತರಿಸಲು ಬಯಸುವ ವೃತ್ತಿಪರ ಮೇಕಪ್ ಕಲಾವಿದರು
ಫ್ಯಾಷನ್ ಅಥವಾ ಚಲನಚಿತ್ರ/ಟೆಲಿವಿಷನ್ ಮೇಕಪ್‌ನಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವವರು
ಬ್ಯೂಟಿ ಸಲೂನ್, ಸ್ಪಾ, ಡಿಪಾರ್ಟ್ಮೆಂಟ್ ಸ್ಟೋರ್ ಅಥವಾ ಇತರ ರೀತಿಯ ಪರಿಸರದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರು
ಸ್ವತಂತ್ರ ಮೇಕಪ್ ಕಲಾವಿದರಾಗಲು ಬಯಸುವವರು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಪರಿಕರಗಳು ಮತ್ತು ತಂತ್ರಗಳನ್ನು ಒಳಗೊಂಡಂತೆ ಮೇಕಪ್ ಅಪ್ಲಿಕೇಶನ್‌ನ ಮೂಲಭೂತ ಅಂಶಗಳು
ಮದುವೆ ಮತ್ತು ಫೋಟೋಶೂಟ್‌ನಂತಹ ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನ ಲುಕ್‌ಗೆ ಮೇಕಪ್ ಹೇಗೆ ಮಾಡುವುದು
ಬಣ್ಣದ ಸಿದ್ಧಾಂತ ಮತ್ತು ವಿವಿಧ ಚರ್ಮದ ಟೋನ್ಗಳಿಗೆ ಸರಿಯಾದ ಶೇಡ್‌ಗಳನ್ನು ಹೇಗೆ ಆರಿಸುವುದು
ತ್ವಚೆ ಮೇಕಪ್‌ಗೆ ಹೇಗೆ ಸಂಬಂಧಿಸಿದೆ ಎಂಬುವುದನ್ನು ತಿಳಿಯುವಿರಿ.
ವೃತ್ತಿಪರ ಮೇಕಪ್ ಕಲಾವಿದರಿಗೆ ನೈರ್ಮಲ್ಯ ಮತ್ತು ಸಂಬಂಧಿತ ತಂತ್ರಗಳು
ಅಧ್ಯಾಯಗಳು