ಈ ಕೋರ್ಸ್ ಒಳಗೊಂಡಿದೆ
ಅಥಿತಿ ದೇವೋ ಭವ..! ಸನಾತನ ಭಾರತದ ಪರಂಪರೆಯಲ್ಲಿ ಅತಿಥಿ ಸತ್ಕಾರ ಅನ್ನೋದು ಬಹಳ ಮೇರು ಸ್ಥಾನದಲ್ಲಿದೆ. ಈಗ ಈ ಅತಿಥಿ ಸತ್ಕಾರ ಲಕ್ಷಾಂತರ ಹಣವನ್ನು ಗಳಿಸುವಲ್ಲಿ ನೆರವಾಗುತ್ತಿದೆ. ಹೇಗೆ ಅಂತ ಯೋಚ್ನೆ ಮಾಡ್ತಿದ್ದೀರಾ? ಅದುವೇ ಹೋಂ ಸ್ಟೇ. ಮನೆಯಲ್ಲಿರುವ ಹೆಚ್ಚುವರಿ ಕೋಣೆಗಳನ್ನ ಬಳಸಿಕೊಂಡು, ಮನೆಯಿಂದಲೇ ಊಟ, ಉಪಚಾರ ಪೂರೈಕೆ ಮಾಡಿಕೊಂಡು ಅಥಿತಿಗಳನ್ನ ನೋಡಿಕೊಳ್ಳುತ್ತ, ತಮ್ಮ ನಗರದ ಅಥವಾ ಪ್ರದೇಶದ ಸೊಗಡನ್ನು ಸಾರುತ್ತಾ ಮನೆಯಲ್ಲಿಯೆ ಲಕ್ಷ ಲಕ್ಷ ದುಡಿಯುವ ದೊಡ್ಡ ಉದ್ದಿಮೆಯಾಗಿ ಬೆಳೆದಿದೆ ಈ ಹೋಮ್ ಸ್ಟೇ. ಪ್ರವಾಸಿಗರಿಗೆ, ದೂರದ ಊರಿಗೆ ಪಯಣ ಮಾಡುವವರಿಗೆ ಎಲ್ಲಾ ಕಡೆಯಲ್ಲು ತಂಗಲು ಅವಕಾಶವಿರುವುದಿಲ್ಲ. ಜೊತೆಗೆ ಹೋದಲ್ಲಿ-ಬಂದಲ್ಲಿ ಮನೆಯಂತಹ ವಾತಾವರಣ, ಮನೆ ರುಚಿ ಸವಿಯಲು ಎಲ್ಲಾ ಪ್ರವಾಸಿಗರು ಹಾತೊರೆಯುತ್ತಿರುವ ಕಾರಣ ಹೋಂ ಸ್ಟೇಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅದೆಷ್ಟೋ ಜನರು ಮನೆಯಲ್ಲೇ ಇದ್ದುಕೊಂಡು ಬಹಳ ಸುಲಭವಾಗಿ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ. ಹಾಗಾದ್ರೆ, ನಾನೂ ಕೂಡ ಮನೆಯಲ್ಲೇ ಈ ರೀತಿಯ ಬಿಸಿನೆಸ್ ಆರಂಭಿಸಲು ಏನು ಮಾಡ್ಬೇಕು. ಅಂತ ಅಂದುಕೊಳ್ಳುತ್ತಿದ್ದೀರಾ? ಇದಕ್ಕೆ ಬೇಕಾದ ಪೂರ್ಣ ಮಾಹಿತಿ ಈ ಕೋರ್ಸ್ ನಲ್ಲಿ ಲಭ್ಯ
ಈ ಕೋರ್ಸ್ ನಿಂದ ನೀವು ಏನು ಕಲಿಯಬಹುದು?