ಈ ಕೋರ್ಸ್ ಒಳಗೊಂಡಿದೆ
ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆಯ ಪ್ರಮಾಣ ಹೆಚ್ಚುತ್ತಿದೆ. ಇದರ ಕಾರಣದಿಂದಾಗಿ ದಿನ ಬಳಕೆಯ ಪದಾರ್ಥಗಳ ಬೇಡಿಕೆಯೂ ಸಹ ಹೆಚ್ಚುತ್ತಿದೆ. ಅಡುಗೆ ಎಣ್ಣೆಯು ಸಹ ದಿನಂಪ್ರತಿ ಅಡುಗೆಗೆ ಅವಶ್ಯಕವಿರುವ ಮತ್ತು ಬೇಡಿಕೆಯಲ್ಲಿರುವ ಪದಾರ್ಥಗಳಲ್ಲಿ ಒಂದು. ಅಡುಗೆ ಎಣ್ಣೆಯನ್ನು ಸೂರ್ಯಕಾಂತಿ, ಕೊಬ್ಬರಿ, ಸಾಸಿವೆ, ಕಡಲೆಕಾಯಿ ಮತ್ತು ಮುಂತಾದವುಗಳಿಂದ ಸಿದ್ಧಪಡಿಸಲಾಗುತ್ತದೆ.
ತೈಲ ಬೆಳೆಗಳನ್ನು ಬೆಳೆಯಲು ಭಾರತವು ಸೂಕ್ತವಾದ ಪರಿಸರವನ್ನು ಹೊಂದಿರುವ ಕಾರಣ ಅಡುಗೆ ಎಣ್ಣೆ ತಯಾರಿಕೆಗೆ ಅವಶ್ಯವಿರುವ ಕಚ್ಚಾ ವಸ್ತುಗಳು ಸಹ ಹೇರಳವಾಗಿ ಲಭ್ಯವಿದೆ. ಈ ಎಲ್ಲ ಕಾರಣಕ್ಕೆ ಗಾಣದ ಎಣ್ಣೆ ಬಿಸಿನೆಸ್ ಗೆ ಉತ್ತಮ ಮಾರುಕಟ್ಟೆ ಅವಕಾಶವಿದೆ. ಆದರೆ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿರುವ ಕಾರಣ ಮತ್ತು ಕಡಿಮೆ ಲಾಭದ ಕಾರಣದಿಂದಾಗಿ ಭಾರತದಲ್ಲಿ ದೇಶೀಯ ಅಡುಗೆ ಎಣ್ಣೆ ಉತ್ಪಾದನೆಯು ಬಹಳಷ್ಟು ಕುಂಠಿತವಾಗಿದೆ.
ಆದರೆ ನಿರಂತರ ಬೇಡಿಕೆಯಿಂದಾಗಿ, ಕಳೆದ ಐದು ವರ್ಷಗಳಲ್ಲಿ ಅಡುಗೆ ಎಣ್ಣೆಯ ಆಮದು ಪ್ರಮಾಣವು ಸುಮಾರು 45 ಪರ್ಸೆಂಟ್ ನಷ್ಟು ಹೆಚ್ಚಾಗಿದೆ ಮತ್ತು ಇದರ ಮೇಲಿನ ಆಮದು ಅವಲಂಬನೆ ಸುಮಾರು 70 ಪರ್ಸೆಂಟ್ ನಷ್ಟು ತಲುಪಿದೆ ಎಂದು ಹೇಳಲಾಗುತ್ತಿದೆ. ಉತ್ತಮ ಗುಣಮಟ್ಟವನ್ನು ಕಾಪಾಡುವ ಜೊತೆಗೆ ಉತ್ತಮ ಮಾರ್ಕೆಟಿಂಗ್ ಮಾಡುವ ಮೂಲಕ ಆಯಿಲ್ ಮಿಲ್ ಆರಂಭಿಸಿ್ದರೆ ಲಾಭದಾಯಕ ಬಿಸಿನೆಸ್ ಕಟ್ಟಲು ಅವಕಾಶವಿದೆ ಎಂದು ಹೇಳಬಹುದು.
ಈ ಬಿಸಿನೆಸ್ ನಲ್ಲಿರುವ ಮಾರುಕಟ್ಟೆ ಅವಕಾಶವನ್ನು ಗಮನಿಸಿ ffreedom ಅಪ್ಲಿಕೇಶನ್ ಗಾಣದ ಎಣ್ಣೆ ಬಿಸಿನೆಸ್ ಕುರಿತಂತೆ ಸಮಗ್ರ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಈ ಬಿಸಿನೆಸ್ ಅನ್ನು ಆರಂಭಿಸಿ ಯಶಸ್ಸನ್ನು ಪಡೆದಿರುವ ಸಾಧಕರಾದ ಶಿವರಾಜ್ ಅವರು ಈ ಬಿಸಿನೆಸ್ ನ ಕುರಿತಂತೆ ಉತ್ತಮ ಮಾರ್ಗದರ್ಶನವನ್ನು ಈ ಕೋರ್ಸ್ ಮೂಲಕ ಮಾಡಲಿದ್ದಾರೆ. ನೀವೂ ಸಹ ಇದರ ಮೂಲಕ ಉತ್ತಮ ಲಾಭವನ್ನು ಪಡೆಯಬಹುದು.