ಈ ಕೋರ್ಸ್ ಒಳಗೊಂಡಿದೆ
ಬಹಳಷ್ಟು ಜನರಿಗೆ ತಾನು ಸೆಲೆಬ್ರಿಟಿ ಆಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದರಲ್ಲೂ ನಟನಾಗಬೇಕು ಎಂಬ ಕನಸನ್ನು ಇಟ್ಟುಕೊಂಡವರಿಗೆ ಜನರು ತಮ್ಮ ನಟನೆ ನೋಡಬೇಕು ಮತ್ತು ತಾವು ಮಾಡಿದ ನಟನೆಯನ್ನು ಮೆಚ್ಚಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಇದರ ಜೊತೆಗೆ ತನ್ನ ಸಿನಿಮಾಗಳನ್ನು ಪ್ರತಿಯೊಬ್ಬರು ನೋಡಬೇಕು ಮತ್ತು ಚಪ್ಪಾಳೆ ತಟ್ಟಬೇಕು ಜೊತೆಗೆ ಥಿಯೇಟರ್‌ಗಳ ಮುಂದೆ ತಮ್ಮ ಕಟೌಟ್ ನಿಲ್ಲಿಸಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ನಟನೆಯಿಂದ ಹಣ, ಕೀರ್ತಿ ಮತ್ತು ಯಶಸ್ಸನ್ನು ಸಹ ಪಡೆಯಬಹುದು.
ಭಾರತ ದೇಶವನ್ನು ಆಧರಿಸಿ ಹೇಳುವುದಾದರೆ ಇಲ್ಲಿ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗಿಂತ ನಟರಾಗಿ ಸಾಧನೆ ಮಾಡಿದವರನ್ನು ಜನ ಹೆಚ್ಚು ಗೌರವಿಸುತ್ತಾರೆ ಮತ್ತು ಆರಾಧಿಸುತ್ತಾರೆ. ನಟರು ಬೇರೆಯವರ ಜೀವನದ ಕಥೆಯನ್ನು ತಮ್ಮ ಪಾತ್ರದ ಮೂಲಕ ತೋರಿಸುವುದರಿಂದ ಅವರು ಜನರಿಗೆ ಹೆಚ್ಚಿಗೆ ಹತ್ತಿರವಾಗುತ್ತಾರೆ. ಹಾಗಾಗಿ ಜನರು ನಟರ ಅಭಿಮಾನಿಗಳಾಗುತ್ತಾರೆ. ನಟನಾಗುವುದರಿಂದ ಇಷ್ಟೆಲ್ಲಾ ಲಾಭವಿರುವ ಕಾರಣ ಬಹಳಷ್ಟು ಮಂದಿ ತಾವು ಸಹ ನಟರಾಗಲು ಹವಣಿಸುತ್ತಾರೆ. ಹಾಗಿದ್ದರೆ ಒಬ್ಬ ಒಳ್ಳೆಯ ನಟ ಆಗಬೇಕಾದರೆ ಯಾವೆಲ್ಲ ರೀತಿಯ ತರಬೇತಿಗಳನ್ನು ಪಡೆಯಬೇಕು ಮತ್ತು ಒಬ್ಬ ಅತ್ಯುತ್ತಮ ನಟನಾಗಲು ಯಾವ ರೀತಿ ಸಿದ್ಧತೆಯನ್ನು ನಡೆಸಬೇಕು ಎಂಬುದರ ಬಗ್ಗೆ ಈ ಕೋರ್ಸಿನಲ್ಲಿ ವಿವರವಾಗಿ ನಮ್ಮ ಮಾರ್ಗದರ್ಶಕರಿಂದ ತಿಳಿದುಕೊಳ್ಳುತ್ತೀರಿ.