ಈ ಕೋರ್ಸ್ ಒಳಗೊಂಡಿದೆ
ಶ್ರೇಷ್ಠ ವೃತ್ತಿಗಳೆಂದು ಪರಿಗಣಿಸುವ ವೃತ್ತಿಗಳಲ್ಲಿ ವೈದ್ಯ ವೃತ್ತಿ ಸಹ ಅತಿ ಪ್ರಮುಖವಾದದ್ದು. ವೈದ್ಯರನ್ನು ದೇವರ ಸ್ವರೂಪವೆಂದು ಸಹ ಬಹಳಷ್ಟು ಮಂದಿ ನೋಡುತ್ತಾರೆ. ಒಬ್ಬ ವೈದ್ಯನಿಗೆ ಒಂದು ಜೀವವನ್ನು ರಕ್ಷಿಸುವ ಸಾಮರ್ಥ್ಯ ಇರುವ ಕಾರಣ ಜನರು ಅವರನ್ನು ಪೂಜ್ಯ ಭಾವದಿಂದ ಕಾಣುತ್ತಾರೆ. ವೈದ್ಯೋ ನಾರಾಯಣೋ ಹರಿ ಎಂಬ ಶ್ರೇಷ್ಠ ಹೋಲಿಕೆಯನ್ನು ಸಹ ವೈದ್ಯರಿಗೆ ಅರ್ಪಿಸಲಾಗಿದೆ.
ವೈದ್ಯರಾಗುವುದು ಸುಲಭದ ಮಾತಲ್ಲ, ವೈದ್ಯ ಶಿಕ್ಷಣಕ್ಕೆ ಪ್ರವೇಶವನ್ನು ಪಡೆಯಲು ಬಯಸುವವರು, ಬಹಳಷ್ಟು ತಯಾರಿಗಳ ಮೂಲಕ ಪ್ರವೇಶ ಪರೀಕ್ಷೆಗಳನ್ನು ಉತ್ತೀರ್ಣವಾಗಬೇಕಾಗುತ್ತದೆ. ಸುಮಾರು ಐದಾರು ವರ್ಷದ ಅವಿರತ ಶ್ರಮದ ಮೂಲಕ ವೈದ್ಯ ಪದವಿ ಲಭಿಸುತ್ತದೆ. ಪ್ರತಿ ವರ್ಷವೂ ಸಹ ಬಹಳಷ್ಟು ಮಂದಿ ವೈದ್ಯರಾಗಿ ಹೊರಹೊಮ್ಮುತ್ತಿದ್ದರೂ ಕೆಲವೇ ಮಂದಿ ಮಾತ್ರವೇ ಸಮಾಜದಲ್ಲಿ ತಮ್ಮ ಛಾಪನ್ನು ಮೂಡಿಸಿ ಜನಮಾನಸದಲ್ಲಿ ಉಳಿಯುತ್ತಾರೆ.
ಅರೋಗ್ಯ ವ್ಯವಸ್ಥೆಯಲ್ಲಿ ಉತ್ತಮ ಸುಧಾರಣೆ ತರುವ ಮೂಲಕ ಮತ್ತು ಜನರಿಗೆ ಕಡಿಮೆ ದರದಲ್ಲಿ ಉತ್ತಮ ಅರೋಗ್ಯ ಸೇವೆ ಒದಗಿಸುವ ಮೂಲಕ ವೈದ್ಯರು ಸಮಾಜಕ್ಕೆ ಹತ್ತಿರವಾಗಬಹುದು. ಜನ ಸಾಮಾನ್ಯರಿಗೆ ಸ್ಪಂದಿಸುವ ಮನೋಭಾವವನ್ನು ಹೊಂದಿರುವ ವೈದ್ಯರು ಇತರೆ ಎಲ್ಲ ವೈದ್ಯರಿಗಿಂತ ಭಿನ್ನವಾಗಿ ಮತ್ತು ಸಮಾಜಕ್ಕೆ ಹತ್ತಿರವಾಗಿ ಇರುತ್ತಾರೆ. ಇಂತಹ ಗುಣವನ್ನು ಹೊಂದಿರುವ ವೈದ್ಯರು ತಮ್ಮ ವೃತ್ತಿಯಲ್ಲಿ ಸಂತೃಪ್ತಿಯ ಜೊತೆಗೆ ಯಶಸ್ಸನ್ನು ಪಡೆಯುತ್ತಾರೆ. ನೀವೂ ಸಹ ಈ ಕೋರ್ಸ್ ಮೂಲಕ ಯಶಸ್ವೀ ವೈದ್ಯರಾಗುವ ಬಗ್ಗೆ ಉಪಯುಕ್ತ ಸಲಹೆಗಳನ್ನು ಪಡೆದುಕೊಳ್ಳುತ್ತೀರಿ.