ಈ ಕೋರ್ಸ್ ಒಳಗೊಂಡಿದೆ
(ಪರಿಚಯ)
ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳ ಹಾವಳಿಗಳು ಹೆಚ್ಚಾದ ಮೇಲೆ ಓದುಗರ ಸಂಖ್ಯೆ ಕಡಿಮೆ ಆಗಿದೆ. ಆದರೆ ಓದುವ ಹವ್ಯಾಸವನ್ನು ರೂಢಿಸಿಕೊಂಡ ಜನರು ಈಗಲೂ ಸಹ ಅನೇಕರಿದ್ದಾರೆ. ಅಕ್ಷರಗಳಲ್ಲೇ ಓದುಗರನ್ನು ಬಂಧಿಸುವ ಸಾಮರ್ಥ್ಯವನ್ನು ಹೊಂದಿರುವ ಅನೇಕ ಅತ್ಯುತ್ತಮ ಲೇಖಕರು ಇಂದಿಗೂ ಸಹ ಹೊಸ ಹೊಸ ಓದುಗರನ್ನು ಹುಟ್ಟುಹಾಕುತ್ತಿದ್ದಾರೆ.
ಒಬ್ಬ ಉತ್ತಮ ಲೇಖಕ ತನ್ನ ಅಕ್ಷರದ ಮಾಂತ್ರಿಕತೆಯ ಮೂಲಕವೇ ಬಹಳಷ್ಟು ಅಭಿಮಾನಿ ಬಳಗವನ್ನು ಸಂಪಾದಿಸುತ್ತಾನೆ. ಆತ ತನ್ನ ಕಲ್ಪನೆಯ ಮೂಲಕವೇ ಓದುಗರಿಗೆ ಹೊಸದೊಂದು ಪ್ರಪಂಚವನ್ನು ಕಟ್ಟಿಕೊಟ್ಟಿರುತ್ತಾನೆ. ಅಂತಹ ವಿಶಿಷ್ಟವಾದ ಶಕ್ತಿ ಬರವಣಿಗೆಗೆ ಇರುತ್ತದೆ. ಅಕ್ಷರಗಳ ಮೂಲಕ ಪದಗಳನ್ನು ಪೋಣಿಸಿ ಕಲ್ಪನೆಯ ಸನ್ನಿವೇಶಕ್ಕೆ ಕರೆದೊಯ್ಯುವ ಲೇಖಕನ ಮಾಂತ್ರಿಕತೆ ಅನುಭವಿಸಿದವರಿಗೆ ಗೊತ್ತು ಎಂದು ಹೇಳಬಹುದು.
ಒಬ್ಬ ಉತ್ತಮ ಲೇಖಕರಾಗಲು ಭಾಷೆಯ ಮೇಲೆ ಉತ್ತಮವಾದ ಹಿಡಿತವನ್ನು ಹೊಂದಿರಬೇಕಾಗುತ್ತದೆ ಜೊತೆಗೆ ಅಮೋಘವಾದ ಕಲ್ಪನೆಯನ್ನು ಬರವಣಿಗೆಯಲ್ಲಿ ರಚಿಸುವ ಕಲೆಯನ್ನು ಹೊಂದಬೇಕಾಗುತ್ತದೆ. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿದೆ ಅದರಂತೆ ಲೇಖಕರ ಕಲ್ಪನೆಯ ಮಟ್ಟವು ಓದುಗರನ್ನು ಬೆರಗಾಗಿಸುವಂತೆ ಮಾಡಬೇಕು. ಇಷ್ಟೆಲ್ಲಾ ಸಾಮರ್ಥ್ಯವನ್ನು ಹೊಂದಲು ಲೇಖಕರಿಗೆ ಮನೆಯ ವಾತಾವರಣ ಮತ್ತು ಸುತ್ತ ಮುತ್ತಲಿನ ಪರಿಸರ ಬಹಳ ಪ್ರಮುಖ ಪಾತ್ರವನ್ನು ಸಹ ವಹಿಸುತ್ತದೆ.
ಗಿರೀಶ್ ರಾವ್ ಅವರು ಜೋಗಿ ಎಂಬ ಹೆಸರಿನಿಂದ ಕರ್ನಾಟಕದ ತುಂಬ ಖ್ಯಾತಿಯನ್ನು ಪಡೆದಿದ್ದಾರೆ. ಜೋಗಿ ಅವರು ಇಲ್ಲಿಯವರೆಗೆ ಸುಮಾರು ಎಪ್ಪತ್ತಕ್ಕೂ ಹೆಚ್ಚಿನ ಪುಸ್ತಕವನ್ನು ರಚಿಸಿದ್ದಾರೆ. ಇವರು ಪ್ರಸ್ತುತ ಕನ್ನಡದಲ್ಲಿ ಅತಿ ಹೆಚ್ಚು ಓದುಗ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ffreedom ಅಪ್ಲಿಕೇಶನ್ ಜೋಗಿ ಅವರ ಮಾರ್ಗದರ್ಶನದಲ್ಲಿ ಉತ್ತಮ ಲೇಖಕರಾಗುವುದು ಹೇಗೆ ಎಂಬುದರ ಬಗ್ಗೆ ಸಮಗ್ರ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಈ ಕೋರ್ಸ್ ಮೂಲಕ ನೀವೂ ಸಹ ಉತ್ತಮ ಪ್ರಯೋಜನವನ್ನು ಪಡೆಯಬಹುದು.