ಈ ಕೋರ್ಸ್ ಒಳಗೊಂಡಿದೆ
ಸೋಲಾರ್ ಫಾರ್ಮ್ ಎಂದರೆ ಸೂರ್ಯನ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಒಂದು ಯೋಜನೆ. ಇದನ್ನು ಫೋಟೋ ವೋಲ್ಟಾಯಿಕ್ ಟೆಕ್ನಾಲಜಿ ಎಂದು ಸಹ ಕರೆಯುತ್ತಾರೆ. ಸೂರ್ಯನ ಕಿರಣವನ್ನು ಬಳಸಿಕೊಂಡು ವಿದ್ಯುತ್ ಅನ್ನು ಉತ್ಪಾದಿಸುವುದು ಸೋಲಾರ್ ಫಾರ್ಮ್ ನ ಮೂಲ ಉದ್ದೇಶವಾಗಿರುತ್ತದೆ. ಭಾರತವು ಅತ್ಯಧಿಕವಾಗಿ ಸೂರ್ಯನ ಕಿರಣದ ದಿನಗಳನ್ನು ಹೊಂದಿದೆ. ವರ್ಷದಲ್ಲಿ ಸುಮಾರು 300 ಸೂರ್ಯ ಕಿರಣದ ದಿನಗಳನ್ನು ನಮ್ಮ ದೇಶದಲ್ಲಿ ಕಾಣಬಹುದಾಗಿದೆ.
ಸೂರ್ಯ ಕಿರಣದ ದಿನಗಳು ಹೆಚ್ಚಿರುವ ಕಾರಣ ಸೋಲಾರ್ ಪ್ಯಾನೆಲ್ ಗಳನ್ನು ಬಳಸಿಕೊಂಡು ವಿದ್ಯುತ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಭಾರತಕ್ಕಿದೆ. ಇದನ್ನು ಸರಿಯಾಗಿ ಬಳಸಿಕೊಂಡರೆ ನೀವು ಜೀವನ ಪರ್ಯಂತ ವಿದ್ಯುತ್ ಅನ್ನು ಉತ್ಪಾದಿಸಬಹುದಾಗಿದೆ. ಆದರೆ ಸೋಲಾರ್ ಪ್ಯಾನೆಲ್ ಗಳನ್ನು ಅಚ್ಚುಕಟ್ಟಾಗಿ ಆಗಿಂದಾಗ್ಗೆ ನೀವು ನಿರ್ವಹಣೆ ಮಾಡಬೇಕಾಗುತ್ತದೆ. ಮನೆಯ ಮಾಳಿಗೆಯಲ್ಲಿ ಲಭ್ಯವಿರುವ ಜಾಗದಲ್ಲಿ ಸಹ ಸಣ್ಣದಾಗಿ ಸೋಲಾರ್ ಘಟಕವನ್ನು ಸ್ಥಾಪಿಸಬಹುದಾಗಿದೆ. ಈ ಮೂಲಕ ಕನಿಷ್ಠ ಪಕ್ಷ ಮನೆಗೆ ಅಗತ್ಯವಿರುವಷ್ಟು ವಿದ್ಯುತ್ ಅನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ.
ದೇಶದಲ್ಲೇ ಸೋಲಾರ್ ಮೂಲಕ ಅತಿ ಹೆಚ್ಚು ವಿದ್ಯುತ್ ಅನ್ನು ಉತ್ಪಾದಿಸುವ ನಿಟ್ಟಿನಲ್ಲಿ ನಮ್ಮ ರಾಜ್ಯ ಒಂದು ಹೆಜ್ಜೆಯನ್ನು ಮುಂದಿಟ್ಟಿದೆ. ಲಾರ್ಜ್ ಸ್ಕೇಲ್ ಸೋಲಾರ್ ಇನ್ಸ್ಟಾಲೇಷನ್ ನಲ್ಲಿ ಕರ್ನಾಟಕವು ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ನಮ್ಮ ರಾಜ್ಯದ ಒಟ್ಟಾರೆ ವಿದ್ಯುತ್ ಬಳಕೆಯ ಶೇಕಡಾ 23ರಷ್ಟು ವಿದ್ಯುತ್ತನ್ನು ಸೋಲಾರ್ ಮೂಲಕ ಪಡೆಯಲಾಗುತ್ತಿದೆ. ಹಾಗಾಗಿ ಸೋಲಾರ್ ನಿಂದ ಉದ್ಯುತ್ ಅನ್ನು ಉತ್ಪಾದಿಸುವುದು ಲಾಭದಾಯಕ ಎಂದು ಹೇಳಬಹುದು.