ಈ ಕೋರ್ಸ್ ಒಳಗೊಂಡಿದೆ
(ಪರಿಚಯ)
ಭಾರತದಲ್ಲಿ ಬಹಳಷ್ಟು ಯುವಕರಿಗೆ ಐಎಎಸ್ ಅನ್ನು ಪಾಸ್ ಮಾಡಬೇಕು ನಂತರ ಐಪಿಎಸ್ ಅಧಿಕಾರಿ ಆಗಬೇಕು ಎಂಬ ದೊಡ್ಡ ಕನಸು ಇರುತ್ತದೆ. ಐಎಎಸ್ ಅಧಿಕಾರಿಗೆ ಇರುವ ಜವಾಬ್ದಾರಿಯ ಬಗ್ಗೆ ಮತ್ತು ಅವರು ಜಿಲ್ಲೆಯನ್ನು ಅಥವಾ ರಾಜ್ಯವನ್ನು ಮುನ್ನಡೆಸುವ ರೀತಿಯ ಬಗ್ಗೆ ಎಲ್ಲರಿಗು ಪ್ರೇರಣೆ ಮೂಡುತ್ತದೆ ಮತ್ತು ತಾವು ಸಹ ಐಎಎಸ್ ಅಧಿಕಾರಿ ಆಗಬೇಕು ಎಂಬ ಕನಸು ಚಿಗುರುತ್ತದೆ. ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ನೋಡಿಯೇ ಒಮ್ಮೊಮ್ಮೆ ಸ್ಪೂರ್ತಿ ಸಿಗುತ್ತದೆ. ಇನ್ನು ನಿಜ ಜೀವನದ ಐಪಿಎಸ್ ಕಾರ್ಯವೈಖರಿ, ಜವಾಬ್ದಾರಿ ಅತ್ಯದ್ಭುತ ಅನ್ನಿಸುತ್ತದೆ. ಒಬ್ಬ ನಿಜವಾದ ನಾಯಕ ಹೇಗಿರುತ್ತಾನೆ ಎಂಬುದನ್ನು ನಾವು ಐಪಿಎಸ್ ಪೊಲೀಸ್ ಅಧಿಕಾರಿಯಿಂದ ಸಹ ಕಲಿಯ ಬಹುದು. ಅವರ ಶಿಸ್ತು, ಜನಸ್ಪಂದನೆ, ಜನಸ್ನೇಹಿ ಮತ್ತು ದಕ್ಷ ಕಾರ್ಯವೈಖರಿ ಇವೆಲ್ಲವು ಸ್ಫೂರ್ತಿ ನೀಡುತ್ತವೆ. ಇಂತಹ ಐಪಿಎಸ್ ಅಧಿಕಾರಿ ಆಗುವ ಕನಸನ್ನು ನೀವು ಸಹ ಹೊಂದಿದ್ದರೆ, ನಿಮಗೆಂದೇ ಈ ಕೋರ್ಸ್ ಅನ್ನು ನಾವು ಸಿದ್ಧಪಡಿಸಿದ್ದೇವೆ. ಹಿರಿಯ ಐಪಿಎಸ್ ಪೊಲೀಸ್ ಅಧಿಕಾರಿ ಈ ಕೋರ್ಸ್ ಮೂಲಕ ನಿಮಗೆ ಉತ್ತಮ ಮಾರ್ಗದರ್ಶನವನ್ನು ಮಾಡಲಿದ್ದಾರೆ. ಇದರ ಮೂಲಕ ನೀವು ಸಹ ಉತ್ತಮ ಜ್ಞಾನವನ್ನು ಪಡೆದುಕೊಳ್ಳಬಹುದು. ನೀವು ಸಹ ಹೇಗೆ ಐಪಿಎಸ್ ಪರೀಕ್ಷೆಗೆ ತಯಾರಿಯನ್ನು ನಡೆಸಬೇಕು ಎಂಬುದರ ಬಗ್ಗೆ ಕೂಡ ವಿವರವಾಗಿ ಈ ಕೋರ್ಸ್ ನಲ್ಲಿ ತಿಳಿದುಕೊಳ್ಳಬಹುದು.
(ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳು)
ಕೋರ್ಸ್ ನ ಪರಿಚಯ - ಈ ವಿಭಾಗದಲ್ಲಿ ನೀವು, ಈ ಕೋರ್ಸ್ ನಲ್ಲಿ ಏನೆಲ್ಲಾ ಇದೆ ಹಾಗು ಅದರಿಂದ ನೀವು ಏನೆಲ್ಲ ಕಲಿಯಬಹುದು ಎನ್ನುವ ಬಗ್ಗೆ ಮಾಹಿತಿಯನ್ನು ಪಡೆಯುತ್ತೀರಿ.
ಮಾರ್ಗದರ್ಶಕರ ಪರಿಚಯ - ಈ ವಿಭಾಗದಲ್ಲಿ ನೀವು ಈ ಕೋರ್ಸ್ ನ ಮಾರ್ಗದರ್ಶಕರ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ.
ಐಪಿಎಸ್ ನಲ್ಲಿ ತರಬೇತಿಯ ಮಹತ್ವ - ಒಮ್ಮೆ ಐಪಿಎಸ್ ಅನ್ನು ಪಾಸ್ ಮಾಡಿದರೆ ಅವರಿಗೆ ಎರಡು ವರ್ಷಗಳ ಕಾಲ ತರಬೇತಿಯನ್ನು ನೀಡಲಾಗುತ್ತದೆ. ಈ ವೃತ್ತಿಗೆ ತರಬೇತಿ ಅತ್ಯಂತ ಮಹತ್ವದ ಕೊಡುಗೆಯನ್ನು ನೀಡುತ್ತದೆ. ತರಬೇತಿ ಇಲ್ಲದ ಮನುಷ್ಯ ಲೈಯಬಲಿಟಿ ಇದ್ದಂತೆ ಮತ್ತು ಒಬ್ಬ ತರಬೇತಿ ಇರುವ ಮನುಷ್ಯ ಅಸೆಟ್ ಇದ್ದಂತೆ ಎಂಬ ಮಾತಿದೆ. ಹಾಗಾಗಿಯೇ ಇದನ್ನು ಭಾರತ ಸರ್ಕಾರಗಳು ಬಹು ಹಿಂದೆಯೇ ಅರ್ಥೈಸಿಕೊಂಡು ಐಪಿಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಕೆಲಸವನ್ನು ಮಾಡುತ್ತಿವೆ.
ಐಪಿಎಸ್ ಅಧಿಕಾರಿಯ ನೇಮಕಾತಿ ಮತ್ತು ವೃತ್ತಿ ಬೆಳವಣಿಗೆ - ಸಾಮಾನ್ಯವಾಗಿ ಐಪಿಎಸ್ ಅಧಿಕಾರಿಯಾಗಿ ನೇಮಕಾತಿ ಆದಮೇಲೆ ತರಬೇತಿ ಸಮಯದಲ್ಲಿ ಸಬ್ ಇನ್ಸ್ ಪೆಕ್ಟರ್ ಅಥವಾ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ತರಬೇತಿ ನಂತರದಲ್ಲಿ ಎರಡು ವರ್ಷಗಳ ಕಾಲ ಎಸ್ಪಿ ಅಥವಾ ಡಿವೈಎಸ್ಪಿ ಆಗಿ ಕೆಲಸವನ್ನು ನಿರ್ವಹಿಸಬೇಕು. ಐಪಿಎಸ್ ಅಧಿಕಾರಿಗಳ ವೃತ್ತಿ ಬೆಳವಣಿಗೆಯನ್ನು ಸೀನಿಯಾರಿಟಿ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಜನಸ್ನೇಹಿ ಐಪಿಎಸ್ ಅಧಿಕಾರಿ ಆಗುವುದು ಹೇಗೆ - ಯಾವುದೇ ವೃತ್ತಿಯನ್ನು ಮಾಡುವಾಗ ಅದು ಜನರಿಗೆ ಕನೆಕ್ಟ್ ಆಗುವಂತೆ ಮಾಡಬೇಕು ಮತ್ತು ಅದರ ಲಾಭ ಪ್ರತಿಯೊಬ್ಬರಿಗೂ ಸಹ ಸಿಗುವಂತೆ ಇರಬೇಕು ಹಾಗೆಯೇ ಐಪಿಎಸ್ ಅಧಿಕಾರಿಗಳು ತಮ್ಮ ಪ್ರತಿಯೊಂದು ಕಾರ್ಯವನ್ನು ಜನರಿಗೆ ಹತ್ತಿರವಾಗಿರುವಂತೆ ಮತ್ತು ಅನುಕೂಲವಾಗುವಂತೆ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇದರ ಜೊತೆಗೆ ಸಾರ್ವಜನಿಕರ ಜೊತೆಗೆ ತಳಮಟ್ಟದಲ್ಲಿ ಅವರ ದೂರುಗಳನ್ನು ಆಲಿಸಿ ಮತ್ತು ಅದಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು. ಹಾಗಾದಾಗ ಜನರು ಐಪಿಎಸ್ ಅಧಿಕಾರಿಗಳನ್ನು ಉತ್ತಮ ನಾಯಕ ಎಂದು ಭಾವಿಸುತ್ತಾರೆ. ಇದರಿಂದ ಜನಸ್ನೇಹಿ ಅಧಿಕಾರಿ ಎಂಬ ಜನಪ್ರಿಯತೆಯೂ ಸಿಗುತ್ತದೆ.
ಐಪಿಎಸ್ ಹುದ್ದೆ ಮತ್ತು ವೃತ್ತಿ ಪಾರದರ್ಶಕತೆ - ಐಪಿಎಸ್ ಎಂಬುದು ಒಂದು ಮಹೋನ್ನತ ಹುದ್ದೆಯಾಗಿದ್ದು ಇದರಿಂದ ಹಲವಾರು ಜನಹಿತ ಕೆಲಸಗಳನ್ನು ಮಾಡಲು ಅಧಿಕಾರಿಗಳಿಗೆ ಸ್ವಾತಂತ್ರ್ಯ ಇರುತ್ತದೆ. ಇದನ್ನು ಸರಿಯಾಗಿ ಬಳಸಿಕೊಂಡು ಅಧಿಕಾರಿಗಳು ಹೆಚ್ಚು ಜನಪರ ಕೆಲಸಗಳನ್ನು ಮಾಡುವುದರಿಂದ ಅವರು ಜನಸ್ನೇಹಿ ಎಂದು ಕರೆಸಿಕೊಳ್ಳುತ್ತಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ರೀತಿಯ ಕಳಂಕಗಳು ಬಾರದಂತೆ ಜನಗಳಿಗೆ ಹತ್ತಿರವಾಗಿ ಅವರ ದೂರುಗಳನ್ನು ಆಲಿಸಿ ಸೂಕ್ತವಾದ ಕ್ರಮಗಳನ್ನು ಜರುಗಿಸಿ ಅವರಿಗೆ ಪರಿಹಾರವನ್ನು ಒದಗಿಸಿ ಕೊಡುವುದರಿಂದ ಜನ ಮನ್ನಣೆ ಗಳಿಸಬಹುದು. ಇದರ ಜೊತೆಗೆ ಪ್ರಾಮಾಣಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವುದರಿಂದ ತಮ್ಮ ವೃತ್ತಿಯಲ್ಲಿ ಪಾರದರ್ಶಕತೆಯನ್ನು ಸಹ ಕಾಪಾಡಬಹುದು.
ಐಪಿಎಸ್ - ಮಾನಸಿಕ ಮತ್ತು ದೈಹಿಕ ಸದೃಢತೆಯ ಮಹತ್ವ - ಐಪಿಎಸ್ ಎಂಬುದು ಒಂದು ಮಹತ್ವದ ಮತ್ತು ಜವಾಬ್ದಾರಿಯುತ ಹುದ್ದೆ ಆಗಿದ್ದು. ಸಮಾಜದ ಹಿತವನ್ನು ಕಾಯುವ ಹುದ್ದೆ ಇದಾಗಿರುವುದರಿಂದ ಸಮಯದ ಪರಿಗಣನೆ ಮಾಡದೆ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ. ಅದಕ್ಕಾಗಿ ಸಕ್ರಿಯವಾಗಿ ಕೆಲಸವನ್ನು ಮಾಡಲು ಮಾನಸಿಕ ಮತ್ತು ದೈಹಿಕ ಸದೃಢತೆಯನ್ನು ಹೊಂದುವುದು ಸಹ ಅಗತ್ಯವಿರುತ್ತದೆ.
ಐಪಿಎಸ್ ಅಧಿಕಾರಿ ಸಮಾಜಕ್ಕೆ ಹೇಗೆ ಕೊಡುಗೆ ನೀಡುತ್ತಾರೆ - ತಮ್ಮ ಅಧಿಕಾರ ಅವಧಿಯಲ್ಲಿ ಜನರಿಗೆ ಮತ್ತು ನಗರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮವನ್ನು ಜರುಗಿಸಬೇಕು. ಸಮಾಜದಲ್ಲಿ ಉತ್ತಮ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸಮಾಜದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ದೃಢ ನಿರ್ಧಾರಗಳನ್ನು ಕೈಗೊಳ್ಳಬೇಕು. ಹೀಗೆ ಮಾಡುವುದರ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದ ಸಾರ್ಥಕ ಭಾವನೆ ಮೂಡುತ್ತದೆ. ಮತ್ತು ಅದರ ಮೂಲಕ ಐಪಿಎಸ್ ನಂಥ ಮಹೋನ್ನತ ಹುದ್ದೆಗೆ ಗೌರವ ಸಿಗುತ್ತದೆ.
(ನೀವು ಫ್ರೀಡಂ ಅಪ್ ನಿಂದ ಈ ಕೋರ್ಸ್ ಅನ್ನು ಏಕೆ ತೆಗೆದುಕೊಳ್ಳಬೇಕು)
ಐಪಿಎಸ್ ಕೋರ್ಸ್ ಅನ್ನು ನೀವು ffreedom app ನಿಂದ ಯಾಕೆ ತೆಗೆದುಕೊಳ್ಳಬೇಕು ಅಂದರೆ, ಈ ಕೋರ್ಸ್ ನಲ್ಲಿ ಮಾರ್ಗದರ್ಶಕರಾಗಿ ನಿಮಗೆ ಮಾರ್ಗದರ್ಶನ ಮಾಡುವವರು ಹಿರಿಯ ಐಪಿಎಸ್ ಅಧಿಕಾರಿ ಆಗಿರುವ ಭಾಸ್ಕರ್ ರಾವ್ ಅವರು. ಇವರು 1990 ರ ಬ್ಯಾಚ್ ನ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಆಗಿದ್ದಾರೆ ಮತ್ತು ಕರ್ನಾಟಕ ಕೇಡರ್ ನಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸರ್ದಾರ್ ವಲ್ಲಭ ಬಾಯ್ ನ್ಯಾಷನಲ್ ಪೊಲೀಸ್ ಅಕಾಡೆಮಿ, ಮತ್ತು ಹೈದರಬಾದ್ ನ ಲಾಲ್ ಬಹದ್ದೂರ್ ಶಾಸ್ತ್ರೀ ನ್ಯಾಷನಲ್ ಅಕಾಡೆಮಿ ಯಲ್ಲಿ ತರಬೇತಿಯನ್ನು ಪಡೆದು ಸೈನ್ಯದಲ್ಲಿ ಸೇನೆಯೊಂದಿಗೆ ಸೇವೆಯನ್ನು ಸಹ ಸಲ್ಲಿಸಿದ್ದಾರೆ. ಪ್ರದಾನ ಮಂತ್ರಿಗಳ ರಕ್ಷಣೆಗೆ ಇರುವ ಸ್ಪೆಷಲ್ ಪ್ರೊಟೆಕ್ಷನ್ ಫೋರ್ಸ್ ನಲ್ಲೂ ಸಹ ಇವರು ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ನಗರ ಭಯೋತ್ಪಾದನೆ ನಿಗ್ರಹ ಸಂಸ್ಥೆಯೊಂದಿಗೆ ತರಬೇತಿಯನ್ನು ಸಹ ಪಡೆದಿದ್ದಾರೆ. ಇಷ್ಟೇ ಅಲ್ಲದೆ ರಾಷ್ಟೀಯ ಭದ್ರತಾ ಸಿಬ್ಬಂದಿಯೊಂದಿಗೆ ಕಾರ್ಯವನ್ನು ನಿರ್ವಹಿಸಿದ್ದಾರೆ. ಗಡಿ ಭದ್ರತಾ ಪಡೆಯ ಇಂದೋರ್ ನ ಸ್ಕೂಲ್ ಆಫ್ ವೆಪನ್ಸ್ ಮತ್ತು ಟ್ಯಾಕ್ಟಿಕ್ಸ್ ನಲ್ಲೂ ನಿಯುಕ್ತಿಗೊಂಡು ಅನುಭವವನ್ನು ಗಳಿಸಿದ್ದಾರೆ. ಕರ್ನಾಟಕ ಕಂಡ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಭಾಸ್ಕರ್ ರಾವ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ಕೋವಿಡ್ ಆರಂಭಿಕ ದಿನಗಳಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರು, ಜನರು ಮತ್ತು ಪೊಲೀಸ್ ನಡುವೆ ಸಮ್ಮೋಹನ ಮತ್ತು ಸಮನ್ವಯವನ್ನು ಸಾಧಿಸಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಜನ ಮೆಚ್ಚುಗೆಯನ್ನು ಸಹ ಪಡೆದಿದ್ದಾರೆ. ಯಾವುದೇ ಹುದ್ದೆ ಸಿಗಲಿ ಅದರಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಅವರು ಮೂಡಿಸುತ್ತಾರೆ. ಸಿಬ್ಬಂದಿ ಮತ್ತು ಜನಗಳು ನೆನಪಿಟ್ಟುಕೊಳ್ಳುವಂತೆ ಕೆಲಸವನ್ನು ಮಾಡುತ್ತಾರೆ. ಅದಕ್ಕಾಗೇ ಜನರು ಇವರನ್ನು ಪೀಪಲ್ಸ್ ಪೊಲೀಸ್ ಎಂದು ಗುರುತಿಸುತ್ತಾರೆ. ಇಂತಹ ಯಶಸ್ವಿ ಪೊಲೀಸ್ ಅಧಿಕಾರಿ ಈ ಕೋರ್ಸ್ ಮೂಲಕ ನಿಮಗೆ ಉತ್ತಮ ಐಪಿಎಸ್ ಅಧಿಕಾರಿ ಆಗುವುದು ಹೇಗೆ ಎಂಬುದರ ಬಗ್ಗೆ ಮಾರ್ಗದರ್ಶನವನ್ನು ಮಾಡುತ್ತಾರೆ. ನೀವು ಸಹ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.