4.6 from 10.6K ರೇಟಿಂಗ್‌ಗಳು
 5Hrs 31Min

ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಕೋರ್ಸ್ - ನೂರು ಕೋಟಿ ಮೌಲ್ಯದ ಕಂಪನಿ ಕಟ್ಟೋದು ಹೇಗೆ?

ಕೋಟಿ ಮೌಲ್ಯದ ಉತ್ಪಾದನೆ ಆಧಾರಿತ ಎಕ್ಸ್ ಪೋರ್ಟ್ ಬಿಸಿನೆಸ್ ಒಂದನ್ನು ನೀವೂ ಸಹ ಸ್ಥಾಪಿಸಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

How To Build a Successful Export Business in Manuf
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(147)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
5Hrs 31Min
 
ಪಾಠಗಳ ಸಂಖ್ಯೆ
17 ವೀಡಿಯೊಗಳು
 
ನೀವು ಕಲಿಯುವುದು
ಬಿಸಿನೆಸ್ ಅವಕಾಶಗಳು, Completion Certificate
 
 

(ಪರಿಚಯ)

ನಮ್ಮ ದೇಶದ ಜಿಡಿಪಿ ಯಲ್ಲಿ ಮ್ಯಾನುಫ್ಯಾಕ್ಟುರಿಂಗ್ ಸೆಕ್ಟರ್ ನ ಕೊಡುಗೆ ಕೇವಲ 13.5 - 14 ಪರ್ಸೆಂಟ್ ಇದೆ. ಕೆಲವು ದಶಕಗಳ ಹಿಂದೆ ಭಾರತದಲ್ಲಿ ಕೈಗಾರಿಕಾ ಕ್ರಾಂತಿಯನ್ನು ಮಾಡಲು ಸಾಕಷ್ಟು ಪ್ರಯತ್ನಗಳು ನಡೆದವು ಆದರೆ ಭಾರತದಲ್ಲಿ ಈ ಕ್ರಾಂತಿ ಹೆಚ್ಚು ಯಶಸ್ವಿ ಆಗಲಿಲ್ಲ. ಭಾರತ ಇಂದು 2.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿದ್ದರು ಉತ್ಪಾದಕ ವಲಯದ ಕೊಡುಗೆ ಇನ್ನು ಕಡಿಮೆ ಪ್ರಮಾಣದಲ್ಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಚೀನಾವನ್ನು ನಾವು ಗಮನಿಸಿದರೆ ಆ ದೇಶದ ಪರ್-ಕ್ಯಾಪಿಟಾ ಜಿಡಿಪಿಯು ನಮ್ಮ ದೇಶದ ಪರ್-ಕ್ಯಾಪಿಟಾ ಜಿಡಿಪಿ ಗಿಂತ ನಾಲ್ಕು ಪಟ್ಟು ಹೆಚ್ಚಿದೆ. ಇದಕ್ಕೆ ಕಾರಣ ಚೀನಾದ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್. ಚೀನಾ ಪ್ರಪಂಚಕ್ಕೆ ಮ್ಯಾನುಫ್ಯಾಕ್ಚರಿಂಗ್ ಫ್ಯಾಕ್ಟರಿ ಆಗಿ ಕಾರ್ಯನಿರ್ವಹಿಸುತ್ತಿದೆ. ಒಂದು ವರದಿಯ ಪ್ರಕಾರ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ 2025 ರ ವೇಳೆಗೆ ಸುಮಾರು ಒಂದು ಟ್ರಿಲಿಯನ್ ಡಾಲರ್ ಮೊತ್ತದ ವ್ಯವಹಾರ ಮಾಡುವ ನಿರೀಕ್ಷೆ ಇದೆ. ಹಾಗಾಗಿ ಈ ಸೆಕ್ಟರ್ ನಲ್ಲಿರುವ ಅವಕಾಶವನ್ನು ಬಳಸಿಕೊಳ್ಳಲು ನಮ್ಮ ದೇಶದ ಬಹಳಷ್ಟು ಸಣ್ಣ ಮ್ಯಾನುಫ್ಯಾಟುರಿಂಗ್ ಬಿಸಿನೆಸ್ ಗಳು ಸ್ಕೇಲ್ ಅಪ್ ಆಗುವ ಅವಶ್ಯಕತೆ ಇದೆ. ಅದಕ್ಕಾಗಿಯೇ ಫ್ರೀಡಂ ಅಪ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಕುರಿತಾದ ಈ ಕೋರ್ಸ್ ಅನ್ನು ಪರಿಚಯಿಸುತ್ತಿದೆ. ನೀವೂ ಸಹ ಈ ಕೋರ್ಸ್ ಮೂಲಕ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸಬೇಕು ಮತ್ತು ಅದನ್ನು ಯಶಸ್ವಿಯಾಗಿ ಹೇಗೆ ಮುನ್ನಡೆಸಬೇಕು ಎಂಬುದರ ಬಗ್ಗೆ ವಿವರವಾಗಿ ಈ ಕೋರ್ಸ್ ನಲ್ಲಿ ತಿಳಿದುಕೊಳ್ಳುತ್ತೀರಿ.     

 

(ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳು)

  1. ಕೋರ್ಸ್ ನ ಪರಿಚಯ - ಈ ವಿಭಾಗದಲ್ಲಿ ನೀವು, ಈ ಕೋರ್ಸ್ ನಲ್ಲಿ ಏನೆಲ್ಲಾ ಇದೆ ಹಾಗು ಅದರಿಂದ ನೀವು ಏನೆಲ್ಲ ಕಲಿಯಬಹುದು ಎನ್ನುವ ಬಗ್ಗೆ ಮಾಹಿತಿಯನ್ನು ಪಡೆಯುತ್ತೀರಿ. 

  2. ಮಾರ್ಗದರ್ಶಕರ ಪರಿಚಯ - ಈ ವಿಭಾಗದಲ್ಲಿ ನೀವು ಈ ಕೋರ್ಸ್ ನ ಮಾರ್ಗದರ್ಶಕರ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ. ಅವರು ಈ ಬಿಸಿನೆಸ್ ಅನ್ನು ಯಾಕೆ ಶುರು ಮಾಡಿದರು. ಈ ಬಿಸಿನೆಸ್ ಮಾಡಲು ಅವರಿಗೆ ಪ್ರೇರೇಪಣೆ ಏನು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ ಮತ್ತು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ನಿಂದ ಎಷ್ಟು ಲಾಭವನ್ನು ಅವರು ಗಳಿಸುತ್ತಿದ್ದಾರೆ. ಈ ಬಿಸಿನೆಸ್ ನಲ್ಲಿ ಅವರು ಎದುರಿಸಿದ ಸವಾಲುಗಳೇನು ಮತ್ತು ಅದನ್ನು ಸಮರ್ಥವಾಗಿ ಹೇಗೆ ಎದುರಿಸಿ ಸಾಧನೆ ಮಾಡಿದರು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ.

  3. ಸಂಸ್ಥೆಯ ಹುಟ್ಟು - ಯಾವುದೇ ಉದ್ಯಮವನ್ನು ಸ್ಥಾಪಿಸಬೇಕಾದರೆ ಆ ಉದ್ಯಮಕ್ಕೆ ಸಂಬಂಧ ಪಟ್ಟಂತೆ ನಿಮಗೆ ಜ್ಞಾನದ ಜೊತೆಗೆ ಆಸಕ್ತಿ ಇರಬೇಕಾಗುತ್ತದೆ. ಆದರೆ ಉದ್ಯಮಶೀಲತೆ ಯನ್ನು ಯಾರು ಸಹ ಹೇಳಿಕೊಡಲು ಸಾಧ್ಯವಿಲ್ಲ, ಅದು ಹುಟ್ಟಿನಿಂದಲೇ ನಿಮ್ಮಲ್ಲಿ ಇರಬೇಕಾಗುತ್ತದೆ. ಹಾಗಿದ್ದಾಗ ಮಾತ್ರ ನೀವು ಒಂದು ಸಂಸ್ಥೆಯನ್ನು ಯಶಸ್ವಿಯಾಗಿ ಹುಟ್ಟುಹಾಕಲು ಸಾಧ್ಯವಾಗುತ್ತದೆ. 

  4. ಬಿಸಿನೆಸ್ ನ ಆರಂಭಿಕ ಪಯಣ - ಯಾವುದೇ ಬಿಸಿನೆಸ್ ಆದರು, ಅದನ್ನು ಶುರುಮಾಡಿದ ಆರಂಭಿಕ ದಿನಗಳಲ್ಲಿ ಬಹಳಷ್ಟು ಸಮಸ್ಯೆಗಳನ್ನು ಕುಟುಂಬದಿಂದ ಹಾಗು ಸಮಾಜದಿಂದ ಎದುರಿಸಬೇಕಾಗುತ್ತದೆ. ಆದರೆ ಈ ಆರಂಭಿಕ ಕಷ್ಟಗಳು ಮುಂದೊಂದು ದಿನ ಅದ್ಭುತವಾದ ಫಲವನ್ನು ನೀಡುತ್ತವೆ. ಅದಕ್ಕಾಗಿ ದೃತಿಗೆಡದೆ ಗುರಿಯನ್ನು ಬೆನ್ನಟ್ಟುವ ಅಗತ್ಯತೆ ಇರುತ್ತದೆ. ಹಾಗಾದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. 

  5. ಅಡೆತಡೆಗಳನ್ನು ಎದುರಿಸುವುದು ಹೇಗೆ - ಯಾವುದೇ ಬಿಸಿನೆಸ್ ಆದರು ಅದಕ್ಕೆ ಅಡೆತಡೆಗಳು ಸಾಮಾನ್ಯವಾಗಿರುತ್ತದೆ. ಆದರೆ ಅಂತ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸುವುದನ್ನು ಕಲಿಯಬೇಕು. ಹಾಗಾದಾಗ ಮಾತ್ರ ಒಂದು ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗುತ್ತದೆ. 

  6. ಆವಿಷ್ಕಾರ - ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿ ಬಿಸಿನೆಸ್ ಗಳು ಪ್ರತಿ ದಿನವೂ ಸಹ ಹೊಸ ಹೊಸ ರೀತಿಯ ಆವಿಷ್ಕಾರಗಳನ್ನು ಮಾಡಬೇಕಾಗುತ್ತದೆ. ಇಂದು ತಂತ್ರಜ್ಞಾನ ಹೆಚ್ಚು ಬೆಳೆಯುತ್ತಿರುವುದರಿಂದ ಅದರ ಸದುಪಯೋಗವನ್ನು ಮಾಡಿಕೊಂಡು ಇತರರಿಗಿಂತ ವಿಭಿನ್ನ ರೀತಿಯಲ್ಲಿ ಹೊಸತನವನ್ನು ಬಿಸಿನೆಸ್ ನಲ್ಲಿ ತರಲು ಪ್ರಯತ್ನಿಸಬೇಕು.  

  7. ವಿನ್ಯಾಸ ಮತ್ತು ಉತ್ಪಾದನೆ - ಮ್ಯಾನುಫ್ಯಾಕ್ಚರಿಂಗ್ ಅನ್ನು ಮಾಡುವ ಮುಂಚೆ ಉತ್ಪನ್ನದ ವಿನ್ಯಾಸದ ಬಗ್ಗೆ ಬಹಳಷ್ಟು ಮುತುವರ್ಜಿ ವಹಿಸಬೇಕಾಗುತ್ತದೆ. ಗ್ರಾಹಕರಿಗೆ ಉತ್ಪನ್ನವನ್ನು ತಯಾರಿಸುತ್ತಿದ್ದಾರೆ, ಅವರು ಅದನ್ನು ಇಷ್ಟ ಪಡುವ ರೀತಿ ಮತ್ತು ಸೆಳೆಯುವ ರೀತಿ ನಿಮ್ಮ ಉತ್ಪನ್ನವನ್ನು ತಯಾರಿಸಬೇಕಾಗುತ್ತದೆ. ನೀವು ಉತ್ಪನ್ನವನ್ನು ಇನ್ನೊಬರ ಬಿಸಿನೆಸ್ ಗಾಗಿ ಮಾಡುತ್ತಿದ್ದರೆ ಅವರ ಅವಶ್ಯಕತೆಗೆ ತಕ್ಕಂತೆ ನೀವು ವಿನ್ಯಾಸವನ್ನು ಮಾಡಬೇಕಾಗುತ್ತದೆ. ಜೊತೆಗೆ ಉತ್ಪಾದನೆಯನ್ನು ಯಾವಾಗಲು ಬೇಡಿಕೆಗೆ ಅನುಗುಣವಾಗಿ ಮಾಡಬೇಕಾಗುತ್ತದೆ. ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ನಲ್ಲಿ ಉತ್ಪಾದನೆಗೂ ಸಹ ಹೆಚ್ಚು ವೆಚ್ಚ ಆಗುವುದರಿಂದ ಅವಶ್ಯಕತೆಗೆ ತಕ್ಕಂತೆ ಉತ್ಪಾದಿಸಬೇಕಾಗುತ್ತದೆ. ಇಲ್ಲದಿದ್ದರೆ ನಷ್ಟವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ.  

  8. ಸಾಂಸ್ಥಿಕ ರಚನೆ - ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ನಲ್ಲಿ ಡಿಸೈನ್ ವಿಭಾಗ ಮತ್ತು ಉತ್ಪಾದನೆ ವಿಭಾಗ ಪ್ರಮುಖವಾಗಿರುತ್ತದೆ. ಈ ಎರಡು ವಿಭಾಗವನ್ನು ಸರಿಯಾಗಿ ನಿರ್ವಹಿಸುವುದು ಅಗತ್ಯವಾಗಿರುತ್ತದೆ. ಇದರ ಜೊತೆಗೆ ಬಿಸಿನೆಸ್ ನಲ್ಲಿ ಫೈನಾನ್ಸ್, ಎಚ್.ಆರ್ ಡಿಪಾರ್ಟ್ಮೆಂಟ್ ಗಳನ್ನು ಮಾಲೀಕರು ತಮ್ಮ ಹತ್ತಿರದಲ್ಲಿ ಇಟ್ಟುಕೊಳ್ಳುವುದರಿಂದ ಅವುಗಳ ಮೇಲೆ ಹಿಡಿತ ಇರುತ್ತದೆ. 

  9. ಗ್ರಾಹಕ ಹಿತಾಸಕ್ತಿ - ಯಾವುದೇ ಬಿಸಿನೆಸ್ ಆದರೂ ಅದರಲ್ಲಿ ಗ್ರಾಹಕರ ಹಿತಾಸಕ್ತಿಯನ್ನು ಕಾಯುವುದು ಬಹಳ ಮುಖ್ಯವಾಗಿರುತ್ತದೆ. ಯಾಕೆಂದರೆ ಎಲ್ಲ ಬಿಸಿನೆಸ್ ಗಳು ಸಹ ಗ್ರಾಹಕರಿಂದಲೇ ನಡೆಯುತ್ತದೆ. ಆದರೂ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ನಲ್ಲಿ ಈ ಹಿತಾಸಕ್ತಿಯನ್ನು ಹೆಚ್ಚು ಕಾಪಾಡಬೇಕಾಗುತ್ತದೆ. ಇಲ್ಲದಿದ್ದರೆ ಬಿಸಿನೆಸ್ ನ ರೆಪ್ಯೂಟೇಷನ್ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.  

  10. ಖರೀದಿ ಮತ್ತು ಮಾರಾಟ ನಿರ್ವಹಣೆ - ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ನಲ್ಲಿ ಉತ್ಪನ್ನಗಳನ್ನು ಮ್ಯಾನುಫ್ಯಾಕ್ಚರಿಂಗ್ ಮಾಡಲು ಬಹಳಷ್ಟು ವಸ್ತುಗಳನ್ನು ಖರೀದಿಸಬೇಕಾಗುತ್ತದೆ. ನಮ್ಮ ದೇಶದಲ್ಲೇ ಸಿಗುವ ಕೆಲವು ವಸ್ತುಗಳನ್ನು ಇಲ್ಲೇ ಖರೀದಿಸುವುದು ಉತ್ತಮವಾದ ಆಯ್ಕೆ. ಆದರೆ ನಮ್ಮಲ್ಲಿ ಸಿಗದ ಕೆಲವನ್ನು ಹೊರದೇಶದಲ್ಲಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಕೆಲವು ಹೊರ ದೇಶದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಬದಲು ಡಿಸ್ಟ್ರಿಬ್ಯುಟರ್ ಗಳ ಮೂಲಕ ಸಹ ಪಡೆದುಕೊಳ್ಳಬಹುದು.  

  11. ಗುಣಮಟ್ಟ ನಿರ್ವಹಣೆ - ಯಾವುದೇ ಉತ್ಪನ್ನವನ್ನು ತಯಾರಿಸುವಾಗ ಅವುಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿರುತ್ತದೆ. ಉತ್ಪನ್ನದ ಗುಣಮಟ್ಟ ಚೆನ್ನಾಗಿ ಇದ್ದರೆ ಮತ್ತು ಅದು ಗ್ರಾಹಕರನ್ನು ಸಂತೃಪ್ತಿ ಪಡಿಸಿದರೆ ಗ್ರಾಹಕರು ಪದೇ ಪದೇ ಬರುತ್ತಾರೆ. ಇದರಿಂದ ಬಿಸಿನೆಸ್ ಸಹ ವೃದ್ಧಿಸುತ್ತದೆ. ಮತ್ತು ಮಾರ್ಕೆಟ್ ನಲ್ಲಿ ಬಿಸಿನೆಸ್ ನ ರೆಪ್ಯೂಟೇಷನ್ ಕೂಡ ಹೆಚ್ಚಾಗುತ್ತದೆ. ಹಾಗಾಗಿ ಪ್ರತಿ ಉತ್ಪನ್ನವನ್ನು ಮ್ಯಾನುಫ್ಯಾಕ್ಚರ್ ಮಾಡುವಾಗಲೂ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಮತ್ತು ಉತ್ಪನ್ನದ ಗುಣಮಟ್ಟವನ್ನು ಪರೀಕ್ಷಿಸಿ ಖಾತರಿ ಪಡಿಸಿಕೊಳ್ಳಲು ಒಂದು ವಿಭಾಗವನ್ನೇ ಮೀಸಲಿಡುವುದು ಸಹ ಉತ್ತಮ ಯೋಜನೆ. 

 

(ನೀವು ಫ್ರೀಡಂ ಅಪ್ ನಿಂದ ಈ ಕೋರ್ಸ್ ಅನ್ನು ಏಕೆ ತೆಗೆದುಕೊಳ್ಳಬೇಕು)

ಈ ಕೋರ್ಸ್ ಅನ್ನು ನೀವು ffreedom app ನಿಂದ ಯಾಕೆ ತೆಗೆದುಕೊಳ್ಳಬೇಕು ಅಂದರೆ, ಈ ಕೋರ್ಸ್ ನಲ್ಲಿ ನಿಮಗೆ ಮಾರ್ಗದರ್ಶಕರಾಗಿ ಮಾರ್ಗದರ್ಶನ ಮಾಡುವವರು ಸುದರ್ಶನ್ ಅವರು. ಇವರು ಸ್ಪೆಕ್ಟ್ರಮ್ ಟೂಲ್ಸ್ ಎಂಬ ಕಂಪನಿಯ ಸಂಸ್ಥಾಪಕರು. ಇವರು ಸುಮಾರು 500 ಕ್ಕೂ ಹೆಚ್ಚು ಜನರಿಗೆ ಅವರ ಕಂಪನಿಯಲ್ಲಿ ಕೆಲಸವನ್ನು ನೀಡಿದ್ದಾರೆ. ಅವರು ತಮ್ಮ ಕಂಪನಿಯನ್ನು ಬಹಳ ದೊಡ್ಡ ಮಟ್ಟದಲ್ಲಿ ನಡೆಸುತ್ತಿದ್ದಾರೆ ಮತ್ತು ವಿವಿಧ ಉತ್ಪನ್ನಗಳನ್ನು ಮ್ಯಾನುಫ್ಯಾಕ್ಚರಿಂಗ್ ಮಾಡಿ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಇವರು ನಿಮಗೆ ಈ ಕೋರ್ಸ್ ನಲ್ಲಿ ಒಂದು ಯಶಸ್ವಿ ಮ್ಯಾನುಫ್ಯಾಕ್ಟ್ಜುರಿಂಗ್ ಬಿಸಿನೆಸ್ ಅನ್ನು ಸ್ಥಾಪಿಸುವುದು ಮತ್ತು ಅದನ್ನು ಬೆಳೆಸುವುದು ಹೇಗೆ ಎಂಬುದರ ಬಗ್ಗೆ ವಿವರವಾದ ಮಾರ್ಗದರ್ಶನವನ್ನು ಈ ಕೋರ್ಸ್ ಮೂಲಕ ಮಾಡುತ್ತಾರೆ. ಅವರ ಮಾರ್ಗದರ್ಶನದಲ್ಲಿ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಕುರಿತಾದ ಸಂಪೂರ್ಣ ಮಾಹಿತಿಯನ್ನು ಪಡೆದು ನೀವು ಕೂಡ ಒಂದು ಯಶಸ್ವಿ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಸ್ಥಾಪಿಸಬಹುದು. ಮತ್ತು ನಿಮ್ಮ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ನೂರು ಕೋಟಿ ಮೌಲ್ಯದ ಕಂಪನಿಯನ್ನು ಕಟ್ಟಬಹುದು. 

 

ಸಂಬಂಧಿತ ಕೋರ್ಸ್‌ಗಳು

 
Ffreedom App

ಈಗಲೇ ffreedom app ಡೌನ್‌ಲೋಡ್ ಮಾಡಿ ಮತ್ತು ಕೇವಲ ₹399 ರಿಂದ ಪ್ರಾರಂಭವಾಗುವ ಮತ್ತು ತಜ್ಞರು ಸಿದ್ಧಪಡಿಸಿರುವ 1000ಕ್ಕೂ ಹೆಚ್ಚು ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆಯಿರಿ