ಈ ಕೋರ್ಸ್ ಒಳಗೊಂಡಿದೆ
ಶುದ್ಧವಾದ ಮತ್ತು ಗುಣಮಟ್ಟವಾದ ಅಡುಗೆ ಎಣ್ಣೆಯನ್ನು ಉಪಯೋಗಿಸುವ ನಿಟ್ಟಿನಲ್ಲಿ ಬಹಳಷ್ಟು ಮಂದಿ ಇಂದು ಗಾಣದ ಎಣ್ಣೆಗೆ ಮೊರೆಹೋಗುತ್ತಿದ್ದಾರೆ. ಗಾಣದ ಎಣ್ಣೆಗಳು ಯಾವುದೇ ಕಲಬೆರಕೆ ಮತ್ತು ರಾಸಾಯನಿಕ ರಹಿತ ವಾಗಿರುವುದರಿಂದ ಆರೋಗ್ಯದ ದೃಷ್ಟಿಯಿಂದ ಸಹ ಹೆಚ್ಚು ಪ್ರಯೋಜನಕಾರಿಯಾಗಿದೆ.
ಗಾಣದಿಂದ ತಯಾರಿಸಿದ ಅಡುಗೆ ಎಣ್ಣೆಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಆಯಿಲ್ ಮಿಲ್ ಬಿಸಿನೆಸ್ ಗೆ ಉತ್ತಮ ಮಾರುಕಟ್ಟೆ ಅವಕಾಶವಿದೆ. ಅಡುಗೆ ಎಣ್ಣೆಯನ್ನು ಸೂರ್ಯಕಾಂತಿ, ಕೊಬ್ಬರಿ, ಸಾಸಿವೆ, ಕಡಲೆಕಾಯಿ ಮತ್ತು ಮುಂತಾದವುಗಳಿಂದ ಸಿದ್ಧಪಡಿಸಲಾಗುತ್ತದೆ. ಈ ಬಿಸಿನೆಸ್ ಆರಂಭಿಸಲು ಮುಖ್ಯವಾಗಿ ಸರಿಯಾದ ಗಾಣದ ಆಯ್ಕೆ ಮಾಡುವುದು ಸಹ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತದೆ.
ಅಡುಗೆ ಎಣ್ಣೆಯನ್ನು ಹಾಟ್ ಪ್ರೆಸ್ಸ್ಡ್ ಮೂಲಕ ಮತ್ತು ಕೋಲ್ಡ್ ಪ್ರೆಸ್ಸ್ಡ್ ಮೂಲಕ ಎರಡು ರೀತಿಯಾಗಿ ತಯಾರಿಸಲಾಗುತ್ತದೆ. ಹಾಟ್ ಪ್ರೆಸ್ಸ್ಡ್ ಮೂಲಕ ತಯಾರಿಸಿದ ಆಯಿಲ್ ಗಳು ನ್ಯೂಟ್ರಿಯೆಂಟ್ಸ್ ಗಳನ್ನು ಕಳೆದುಕೊಂಡಿರುತ್ತವೆ ಹಾಗಾಗಿ ಇದು ಹೆಚ್ಚು ಪ್ರಯೋಜನಕಾರಿಯಲ್ಲ. ಎತ್ತುಗಳನ್ನು ಬಳಸಿ ಕೋಲ್ಡ್ ಪ್ರೆಸ್ಸ್ಡ್ ಮೂಲಕ ತಯಾರಿಸುವ ಅಡುಗೆ ಎಣ್ಣೆಯು ಹೆಚ್ಚು ಆರೋಗ್ಯಯುತವಾಗಿರುತ್ತದೆ.
ಇಂದು ತಂತ್ರಜ್ಞಾನ ಹೆಚ್ಚು ಮುಂದುವರಿದಿದೆ. ಇಂದು ಟೆಕ್ನಾಲಜಿಯನ್ನು ಬಳಸಿ ಎತ್ತುಗಳಿಲ್ಲದೆ ಮಷೀನ್ ಗಳ ಮೂಲಕ ಸಹ ಕೋಲ್ಡ್ ಪ್ರೆಸ್ಸ್ಡ್ ಆಯಿಲ್ ಗಳನ್ನು ತಯಾರಿಸಲು ಸಾಧ್ಯವಿದೆ. ಇದರಿಂದ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಲು ಸಹ ಸಾಧ್ಯವಿದೆ. ಇದರ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಕೋರ್ಸ್ ಮೂಲಕ ತಿಳಿದುಕೊಳ್ಳುತ್ತೀರಿ.