ಈ ಕೋರ್ಸ್ ಒಳಗೊಂಡಿದೆ
ಭಾರತದ ಅತ್ಯಂತ ಕಠಿಣವಾಗಿರುವ ಮತ್ತು ಹೆಚ್ಚು ಜನಪ್ರಿಯತೆ ಪಡೆದಿರುವ ವೃತ್ತಿಪರ ಕೋರ್ಸ್‌ಗಳಲ್ಲಿ ಸಿಎ ಕೂಡ ಒಂದು. ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಬಹಳಷ್ಟು ಕಠಿಣ ಪರಿಶ್ರಮವನ್ನು ಪಡಬೇಕಾಗುತ್ತದೆ. ಇದರ ಜೊತೆಗೆ, ಧೀರ್ಘ ಅವಧಿಯ ವೆರೆಗೆ ಅಧ್ಯಯನದಲ್ಲಿ ಸ್ಥಿರತೆಯನ್ನು ಸಹ ಕಾಪಾಡಿಕೊಳ್ಳಬೇಕಾಗುತ್ತದೆ.
ಆದರೆ ಅಧ್ಯಯನದಲ್ಲಿ ಆಸಕ್ತಿ ಮತ್ತು ಆತ್ಮ ವಿಶ್ವಾಸವನ್ನು ಹೊಂದಿದ್ದರೆ, ಯಾವುದೂ ಸಹ ಕಷ್ಟ ಎನಿಸುವುದಿಲ್ಲ. CA ಕೋಚಿಂಗ್ ತರಗತಿಯಲ್ಲಿ ಸರಾಸರಿ CA ವಿದ್ಯಾರ್ಥಿಯು ಸುಮಾರು 12,000 ಪುಟಗಳಿಗೂ ಹೆಚ್ಚಿನ ಅಧ್ಯಯನ ಸಾಮಗ್ರಿಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. CA ಎಂಬುದು ಭಾರತದಲ್ಲಿ ಲೆಕ್ಕಪರಿಶೋಧನೆಯ ಪವಿತ್ರ ಗ್ರಂಥವೆಂದು ಹೇಳಬಹುದು.
CA ಪರೀಕ್ಷೆಯು ಎಷ್ಟು ಕಷ್ಟವೆಂದು ತಿಳಿಯಬೇಕು ಎಂದರೆ ನೀವು ಪರೀಕ್ಷೆಯ ತೇರ್ಗಡೆ ಪ್ರತಿಶತವನ್ನು ಗಮನಿಸುವುದು ಅಗತ್ಯ. ICAI ಪರೀಕ್ಷೆಯನ್ನು ಪ್ರಯತ್ನಿಸುವ ಒಟ್ಟು ವಿದ್ಯಾರ್ಥಿಗಳಲ್ಲಿ, ಕೇವಲ 3%-8% ಮಾತ್ರ ಇಂಟರ್ಮೀಡಿಯೇಟ್ ಮತ್ತು ಫೈನಲ್ ಪರೀಕ್ಷೆಯನ್ನು ಕ್ಲಿಯರ್ ಮಾಡುತ್ತಾರೆ.
CA ಕನಸನ್ನು ಹೊತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ffreedom ಅಪ್ಲಿಕೇಶನ್ ಸಿಎ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಅತ್ಯುತ್ತಮ ಮಾರ್ಗದರ್ಶಕರು ನಿಮಗೆ CA ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಉತ್ತಮ ಸಲಹೆಯನ್ನು ನೀಡಲಿದ್ದಾರೆ. ನೀವೂ ಸಹ ಅದರ ಪ್ರಯೋಜನವನ್ನು ಪಡೆಯಬಹುದು.