ಈ ಕೋರ್ಸ್ ಒಳಗೊಂಡಿದೆ
ಕೆ ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂಬುದು ಬಹಳಷ್ಟು ಯುವಕರ ಕನಸು. ಈ ಕನಸನ್ನು ಬೆನ್ನತ್ತಿ ಲಕ್ಷಾಂತರ ಮಂದಿ ಪ್ರತಿ ವರ್ಷವೂ ಸಹ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ ಯಶಸ್ಸು ಸಿಗುವುದು ಕೆಲವೇ ಮಂದಿಗೆ ಮಾತ್ರ. ಆದರೆ, ಇದು ಭೇದಿಸಲು ಆಗದ ಚಕ್ರವ್ಯೂಹವೇನು ಅಲ್ಲ. ಕಬ್ಬಿಣದ ಕಡೆಲೆಯಂತಹ ಈ ಪರೀಕ್ಷೆಯನ್ನು ನೀವು ಸುಲಭವಾಗಿ ಉತ್ತೀರ್ಣರಾಗಬೇಕೆಂದರೆ ಅದಕ್ಕೆ, ನಿಮಗೆ ಉತ್ತಮ ಮಾರ್ಗದರ್ಶನದ ಅಗತ್ಯವಿದೆ.
ನಿಮ್ಮ ಕನಸಿಗೆ ದಾರಿದೀಪವಾಗುವ ದೃಷ್ಟಿಯಿಂದ ffreedom ಅಪ್ಲಿಕೇಶನ್ ಬಹಳಷ್ಟು ಶ್ರಮವಹಿಸಿ ಉನ್ನತ ಮಾರ್ಗದರ್ಶಕರಿಂದ ಈ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಯಾವ ರೀತಿಯಲ್ಲಿ ನೀವು ಕೆ ಪಿ ಎಸ್ ಸಿ ಪರೀಕ್ಷೆಗೆ ಸಿದ್ಧವಾಗಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾರ್ಗದರ್ಶನವನ್ನು ಈ ಕೋರ್ಸ್ ನಿಮಗೆ ನೀಡಲಿದೆ. ಇದರ ಜೊತೆಗೆ ಕನಸನ್ನು ನನಸು ಮಾಡಿಕೊಳ್ಳಲು ಯಾವ ರೀತಿಯ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಲಹೆಯನ್ನು ಸಹ ಈ ಕೋರ್ಸ್ ನಿಮಗೆ ನೀಡುತ್ತದೆ. ನೀವೂ ಸಹ ಇದರ ಲಾಭವನ್ನು ಪಡೆದು ಯಶಸ್ವಿಯಾಗಿ ಕೆ ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು.