ಈ ಕೋರ್ಸ್ ಒಳಗೊಂಡಿದೆ
ಸೋಲಾರ್ ಎಂಬುದು ಸೂರ್ಯನ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಒಂದು ವಿಧಾನ. ಇದನ್ನು ಫೋಟೋ ವೋಲ್ಟಾಯಿಕ್ ಟೆಕ್ನಾಲಜಿ ಎಂದು ಸಹ ಕರೆಯುತ್ತಾರೆ. ಈಗಿನ ದಿನಗಳಲ್ಲಿ ಕರೆಂಟ್‌ನ ಅಗತ್ಯತೆ ದಿನೇ ದಿನೇ ಹೆಚ್ಚುತ್ತಿದೆ. ಭಾರತವು ಅತ್ಯಧಿಕವಾಗಿ ಸೂರ್ಯನ ಕಿರಣದ ದಿನಗಳನ್ನು ಹೊಂದಿದೆ. ಭಾರತ ವರ್ಷದಲ್ಲಿ ಸುಮಾರು 300 ಸೂರ್ಯ ಕಿರಣದ ದಿನಗಳನ್ನು ಹೊಂದಿದೆ. ಹಾಗಾಗಿ ಸೋಲಾರ್ ಪ್ಯಾನೆಲ್ ಗಳನ್ನು ಬಳಸಿಕೊಂಡು ಹೆಚ್ಚು ವಿದ್ಯುತ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಭಾರತಕ್ಕಿದೆ. ಇದನ್ನು ಬಳಸಿಕೊಂಡು ನಿಮಗೆ ಬೇಕಾಗಿರೋ ವಿದ್ಯುತ್‌ಅನ್ನು ನೀವೇ ಉತ್ಪಾದನೆ ಮಾಡಬಹುದು.
ಕರ್ನಾಟಕ ಲಾರ್ಜ್ ಸ್ಕೇಲ್ ಸೋಲಾರ್ ಇನ್ಸ್ಟಾಲೇಷನ್ ನಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಇದರ ಜೊತೆಗೆ ನಮ್ಮ ರಾಜ್ಯದ ಒಟ್ಟಾರೆ ವಿದ್ಯುತ್ ಬಳಕೆಯ ಶೇಕಡಾ 23 ರಷ್ಟು ವಿದ್ಯುತ್ತನ್ನು ಸೋಲಾರ್ ಮೂಲಕ ಪಡೆಯುತ್ತಿದ್ದೇವೆ. ಹಾಗಾಗಿ ಸೋಲಾರ್ ನಿಂದ ಉದ್ಯುತ್ ಅನ್ನು ಉತ್ಪಾದಿಸುವುದು ಲಾಭದಾಯಕ ಎಂದು ಹೇಳಬಹುದು. ನೀವೂ ಸಹ ಈ ಕೋರ್ಸ್ ಮೂಲಕ ನಿಮ್ಮ ಮನೆಗೆ ಬೇಕಾದ ವಿದ್ಯುತ್ತನ್ನು ಸೋಲಾರ್ ಮೂಲಕ ಉತ್ಪಾದಿಸುವುದು ಹೇಗೆ ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ.