ಈ ಕೋರ್ಸ್ ಒಳಗೊಂಡಿದೆ
ನಿಮ್ಮ ಸ್ವಂತ ಆಯುಷ್ ವೆಲ್ನೆಸ್ ಬಿಸಿನೆಸ್ ಆರಂಭಿಸಲು ಸಿದ್ದರಿದ್ದೀರಾ? ನೀವು ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ತೆರೆಯಲು ಆಸಕ್ತಿ ಹೊಂದಿದ್ದೀರಾ? ಹಾಗಾದರೆ ಈ ಸಮಗ್ರ ಚಿಕಿತ್ಸೆಗಾಗಿ ಇರುವ ನಿಮ್ಮ ಆಸಕ್ತಿಯನ್ನು ಯಶಸ್ವಿ ಬಿಸಿನೆಸ್ ಆಗಿ ಮಾಡಲು ನಮ್ಮ ಕೋರ್ಸ್ ಅನ್ನು ಸಜ್ಜುಗೊಳಿಸಲಾಗಿದೆ.
ಆಯುಷ್, ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯ ಸಂಕ್ಷಿಪ್ತ ರೂಪವಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ನ್ಯಾಚುರಲ್ ಟ್ರೀಟ್‌ಮೆಂಟ್ ಮತ್ತು ಸ್ವಾಸ್ಥ್ಯದ ಮೇಲೆ ಗಮನಹರಿಸುವುದರಿಂದ ಜನಪ್ರಿಯತೆಯನ್ನು ಗಳಿಸಿರುವ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದೆ. ಇಂದು ಆಯುಷ್ ವೆಲ್ನೆಸ್ ಬಿಸಿನೆಸ್ ಆರಂಭಿಸಿರುವುದರಿಂದ ಬೆಳೆಯುತ್ತಿರುವ ಇದು ಜನರ ಜೀವನದ ಮೇಲೆ ಸಕರಾತ್ಮಕ ಪರಿಣಾಮ ಬೀರುವುದರ ಜೊತೆಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕೂಡ ಹೊಂದಿದೆ.
ಈ ಕೋರ್ಸ್‌ನಲ್ಲಿ ನೀವು ಆಯುಷ್ ಮಾರುಕಟ್ಟೆ ಮತ್ತು ಅದರ ಮೌಲ್ಯಮಾಪನದ ಬಗ್ಗೆ ತಿಳುವಳಿಕೆಯ ಜೊತೆಗೆ ಸಂಪೂರ್ಣ ಪ್ರಾಕ್ಟಿಕಲ್ ಮಾಹಿತಿಯನ್ನು ಪಡೆಯುವಿರಿ. ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ಗೆ ಇಂದು ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಹೆಚ್ಚಿರುವುದರಿಂದ ಈ ಉದ್ಯಮ ಲಾಭದಾಯಕವಾಗಿದೆ.
ಆಯುಷ್ ಸೆಂಟರ್‌ನ ಹೆಸರಾಂತ ವೈದ್ಯರು ಮತ್ತು ಪ್ರೊಫೆಸರ್ ಆಗಿರುವ ಡಾ. ಹೈದರ್ ಅಲಿ ಇವರ ಮಾರ್ಗದರ್ಶನದಲ್ಲಿ ಈ ಕೋರ್ಸ್ ಒಂಬತ್ತು ಮಾಡ್ಯೂಲ್‌ಗಳನ್ನು ಹೊಂದಿದೆ. ಆಯುಷ್ ಸೆಂಟರ್ ಸ್ಥಾಪಿಸುವುದರಿಂದ ಹಿಡಿದು, ಮಾರ್ಕೆಟಿಂಗ್ ಮಾಡುವವರೆಗೆ ಈ ಕೋರ್ಸ್ ಮಾಹಿತಿ ನೀಡುತ್ತದೆ.
ಈ ಕೋರ್ಸ್‌ನ ಕೊನೆಯಲ್ಲಿ ನಿಮ್ಮದೇ ಸ್ವಂತ ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ಬಿಸಿನೆಸ್ ಆರಂಭಿಸಲು ನೀವು ಎಲ್ಲಾ ಮಾಹಿತಿ ಮತ್ತು ಕೌಶಲ್ಯಗಳನ್ನು ಪಡೆದುಕೊಳ್ಳುವಿರಿ.
ನೀವು ನಿಮ್ಮದೇ ಸ್ವಂತ ಬಿಸಿನೆಸ್ ಆರಂಭಿಸುವ ಯೋಚನೆಯಲ್ಲಿದ್ದರೆ, ಅಥವಾ ಯಾವುದೇ ಅಡೆತಡೆಗಳನ್ನು ನಿವಾರಿಸಲು ನಿಮಗೆ ಸಹಾಯದ ಅಗತ್ಯವಿದ್ದರೆ ಈ ಕೋರ್ಸ್ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ಬಿಸಿನೆಸ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ರಾಯೋಗಿಕ ಪರಿಹಾರಗಳನ್ನು ಈ ಕೋರ್ಸ್ ಒದಗಿಸುತ್ತದೆ. ಯಶಸ್ವಿ ಆಯುಷ್ ವೆಲ್ನೆಸ್ ಬಿಸಿನೆಸ್ ಹೊಂದುವ ನಿಮ್ಮ ಕನಸುಗಳು ಹಾಗೆಯೇ ಉಳಿಯಲು ಬಿಡಬೇಡಿ - ಇಂದೇ ನಿಮ್ಮ ಪ್ರಯಾಣವನ್ನು ಆರಂಭಿಸಿ!
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ತಮ್ಮದೇ ಆದ ಆಯುಷ್ ವೆಲ್ನೆಸ್ ಬಿಸಿನೆಸ್ ಆರಂಭಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು
ಆಯುಷ್ ಕ್ಷೇತ್ರದಲ್ಲಿ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ವಿಸ್ತರಿಸಲು ಆಸಕ್ತಿ ಹೊಂದಿರುವ ವೈದ್ಯರು
ನೈಸರ್ಗಿಕ ಪರಿಹಾರಗಳು ಮತ್ತು ಸಮಗ್ರ ಚಿಕಿತ್ಸೆ ಬಗ್ಗೆ ಉತ್ಸುಕರಾಗಿರುವ ತರಬೇತುದಾರರು
ಆಯುಷ್ ತತ್ವಗಳನ್ನು ಸೇರಿಸಿ, ತಮ್ಮ ಪರಿಣತಿಯನ್ನು ವಿಸ್ತರಿಸಲು ಬಯಸುವ ಯೋಗ ಬೋಧಕರು
ಆಯುಷ್ ತತ್ವಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅವುಗಳನ್ನು ತಮ್ಮ ಅಭ್ಯಾಸದಲ್ಲಿ ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿರುವ ಪ್ರಕೃತಿ ಚಿಕಿತ್ಸಕರು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಮಾರುಕಟ್ಟೆಯನ್ನು ಗುರುತಿಸಿ ಮತ್ತುಬಿಸಿನೆಸ್ ಪ್ಲಾನ್ ಅನ್ನು ರಚಿಸಿ
ಆಯುಷ್ ತತ್ವಗಳು ಮತ್ತು ಅವುಗಳ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಿ
ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸಲು ಕಲಿಯಿರಿ
ಕಾನೂನು ಮತ್ತು ನಿಯಂತ್ರಕ ಅವಶ್ಯಕತೆಗಳ ಜ್ಞಾನವನ್ನು ಪಡೆದುಕೊಳ್ಳಿ
ಹಣಕಾಸು ಮತ್ತು ಬಜೆಟ್ ಅನ್ನು ಹೇಗೆ ನಿರ್ವಹಿಸುವುದು ಎಂದು ತಿಳಿಯಿರಿ
ಅಧ್ಯಾಯಗಳು