ಈ ಕೋರ್ಸ್ ಒಳಗೊಂಡಿದೆ
ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಗಳಲ್ಲಿ ಒಂದಾಗಿರುವ ಲಂಗ ಮತ್ತು ಬ್ಲೌಸ್ ದಕ್ಷಿಣ ಭಾರತೀಯರಿಗೆ ಸಾಂಸ್ಕೃತಿಕ ಹಿರಿಮೆ ಎಂದು ಹೇಳಬಹುದು. ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಶುಭ ಸಮಾರಂಭಗಳಲ್ಲಿ ತರುಣಿಯರಿಗೆ ತಮ್ಮ ಸೌಂದರ್ಯಕ್ಕೆ ಮೆರುಗು ನೀಡುವುದು ಈ ಲಂಗ ಬ್ಲೌಸ್ ಎಂದು ಹೇಳಬಹುದು.
ದಕ್ಷಿಣ ಭಾರತೀಯರಿಗೆ ಇದು ಸಾಂಸ್ಕೃತಿಕತೆಯ ಪ್ರತೀಕವಾಗಿದೆ ಎಂದು ಸಹ ಹೇಳಬಹುದು. ಈ ಉಡುಗೆಯ ಬಗ್ಗೆ ಆಕರ್ಷಿತರಾಗಿ ಬಹಳಷ್ಟು ವಿದೇಶಿಗರು ಸಹ ಈ ಲಂಗ ಬ್ಲೌಸ್ ಅನ್ನು ತೊಡುವ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂದಿನ ಯುವ ಪೀಳಿಗೆ ತಮ್ಮ ಹಳೆಯ ಸಂಪ್ರದಾಯದ ಉಡುಗೆ ತೊಡುಗೆಗಳ ಕಡೆಗೆ ಹೆಚ್ಚಿನ ಒಲವನ್ನು ಹೊಂದುತ್ತಿದ್ದಾರೆ. ಈ ಕಾರಣದಿಂದ ಲಂಗ ಮತ್ತು ಬ್ಲೌಸ್ ಗೆ ಬೇಡಿಕೆ ಸಹ ಹೆಚ್ಚಾಗಿದೆ.\
ಲಂಗ ಮತ್ತು ಬ್ಲೌಸ್ ಹೊಲಿಯುವುದನ್ನು ಕಲಿಯುವ ಮೂಲಕ ಉತ್ತಮ ವ್ಯಾಪಾರದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಆದಾಯವನ್ನು ಗಳಿಸಲು ಸಾಧ್ಯವಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ffreedom ಅಪ್ಲಿಕೇಶನ್ ಲಂಗ ಬ್ಲೌಸ್ ಸ್ಟಿಚ್ ಮಾಡುವ ಬಗ್ಗೆ ಸಮಗ್ರ ಕೋರ್ಸ್ ಅನ್ನು ಅಭಿವೃದ್ಧಿ ಪಡಿಸಿದೆ. ಈ ಬಿಸಿನೆಸ್ ನಲ್ಲಿ ಯಶಸ್ಸು ಪಡೆದಿರುವ ಸಾಧಕರು ನಿಮಗೆ ಲಂಗ ಬ್ಲೌಸ್ ಸ್ಟಿಚ್ ಮಾಡುವ ಬಗ್ಗೆ ಉತ್ತಮ ಮಾರ್ಗದರ್ಶನವನ್ನು ಮಾಡಲಿದ್ದಾರೆ. ನೀವೂ ಸಹ ಈ ಕೋರ್ಸ್ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬಹುದು.