ಈ ಕೋರ್ಸ್ ಒಳಗೊಂಡಿದೆ
ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕ. ಅದಕ್ಕಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು ಎಂಬ ಕೂಗು ಜಾಗತಿಕ ಮಟ್ಟದಲ್ಲಿ ಆಗಾಗ್ಗೆ ಕೇಳಿಬರುತ್ತದೆ. ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಇನ್ನೊಂದು ವಸ್ತುವನ್ನು ಹೊಂದಬೇಕು ಎಂಬ ದೃಷ್ಟಿ ಇಂದ ಹಲವು ದೇಶಗಳಲ್ಲಿ ಅನೇಕ ಅನ್ವೇಷಣೆಗಳು ಇಂದಿಗೂ ನಡೆಯುತ್ತಲಿದೆ. ಇಂತಹ ಪರ್ಯಾಯಗಳಲ್ಲಿ ಪ್ರಮುಖವಾದದ್ದು ಪೇಪರ್ ಕಪ್ ಮತ್ತು ಪ್ಲೇಟ್ ಗಳು. ಪೇಪರ್ ಗಳನ್ನು ಮರುಬಳಕೆ ಮಾಡಬಹುದು ಮತ್ತು ಇವುಗಳು ಪರಿಸರಕ್ಕೆ ಹಾನಿಕಾರಕ ಅಲ್ಲ ಎಂಬ ಕಾರಣಕ್ಕೆ ಪ್ಲಾಸ್ಟಿಕ್ ನ ಜಾಗವನ್ನು ಇದು ಹೆಚ್ಚಾಗಿ ತುಂಬುತ್ತಿದೆ.
ಪ್ಲಾಸ್ಟಿಕ್ ನಿಂದ ಪ್ರಕೃತಿಯ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮವನ್ನು ಅರಿತಿರುವ ದೇಶಗಳು ಈಗಾಗಲೇ ಪೇಪರ್ ಬ್ಯಾಗ್, ಕಪ್ ಮತ್ತು ಪ್ಲೇಟ್ ಗಳ ಬಳಕೆಯನ್ನು ಶುರು ಮಾಡಿದ್ದಾರೆ. ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಕಡಿಮೆ ವೆಚ್ಚದಲ್ಲಿ ಪೇಪರ್ ಕಪ್ ಮತ್ತು ಪ್ಲೇಟ್ ಗಳು ಸಿಗುವುದರಿಂದ ಇವುಗಳು ಹೆಚ್ಚು ಮಾನ್ಯತೆಯನ್ನು ಪಡೆಯುತ್ತಿದೆ.
ಪೇಪರ್ ಕಪ್ ಮತ್ತು ಪ್ಲೇಟ್ ಅನ್ನು ತಯಾರಿಸುವ ಬಿಸಿನೆಸ್ ಅನ್ನು ಮನೆಯಿಂದಲೂ ಕೂಡ ಶುರು ಮಾಡಬಹುದು. ಈ ಬಿಸಿನೆಸ್ ಮಾಡಲು ತುಂಬಾ ಅನುಭವ ಇರುವಂತಹ ಕೆಲಸಗಾರರ ಅವಶ್ಯಕತೆ ಕೂಡ ಬೇಕಾಗುವುದಿಲ್ಲ. ಇದನ್ನು ಮನೆಯ ಸದಸ್ಯರೇ ಸಹ ಶುರು ಮಾಡಬಹುದು. ಬಹಳ ಚಿಕ್ಕಮಟ್ಟದಲ್ಲಿ ಈ ಬಿಸಿನೆಸ್ ಅನ್ನು ಪ್ರಾರಂಭಿಸಿದರು ಸಹ ತಿಂಗಳಿಗೆ 30 ರಿಂದ 35 ಸಾವಿರದವರೆಗೆ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.