ಈ ಕೋರ್ಸ್ ಒಳಗೊಂಡಿದೆ
ನೀವು ಸಣ್ಣ ಪ್ರಾವಿಷನ್ ಸ್ಟೋರ್ ಅಥವಾ ಕಿರಾಣಿ ಅಂಗಡಿ ಪ್ರಾರಂಭಿಸಲು ಆಸಕ್ತಿ ಹೊಂದಿದ್ದೀರಾ? ಆದರೆ ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿಯಲು ಸಹಾಯ ಬೇಕಾ? ನಮ್ಮ ಕೋರ್ಸ್, “ಪ್ರಾವಿಷನ್ ಸ್ಟೋರ್ ಹೇಗೆ ಪ್ರಾರಂಭಿಸುವುದು” ನಿಮ್ಮ ಅಂಗಡಿಯನ್ನು ಆರಂಭ ಮಾಡಲು ಅಗತ್ಯ ಸಲಹೆ, ಸೂಚನೆಗಳನ್ನು ನೀಡುತ್ತದೆ. ಅನುಭವಿ ಬಿಸಿನೆಸ್ ವೃತ್ತಿಪರರ ನೇತೃತ್ವದಲ್ಲಿ, ಬಿಸಿನೆಸ್ ಪ್ಲಾನ್ ರಚನೆ, ಸೋರ್ಸಿಂಗ್ ದಾಸ್ತಾನು, ಅಂಗಡಿಯನ್ನು ಮಾರ್ಕೆಟಿಂಗ್ ಮಾಡುವುದರ ಬಗ್ಗೆ ಮಾಹಿತಿ ನೀಡುತ್ತದೆ.
ಹಣಕಾಸು ನಿರ್ವಹಣೆ ಮತ್ತು ವೆಚ್ಚಗಳ ಮಾಹಿತಿ ಸೇರಿದಂತೆ ಪ್ರಾವಿಷನ್ ಸ್ಟೋರ್ ಪ್ರಾರಂಭಿಸುವ ಹಾಗೂ ನಡೆಸುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕೋರ್ಸ್ ನಿಮಗೆ ಕಲಿಸುತ್ತದೆ. ಪ್ರಾವಿಷನ್ ಸ್ಟೋರ್‌ಗಳ ಲಾಭಾಂಶಗಳ ಬಗ್ಗೆ ಹಾಗೂ ನಿಮ್ಮ ಗ್ರಾಹಕರನ್ನು ಸಂತೋಷವಾಗಿಟ್ಟುಕೊಂಡು ನಿಮ್ಮ ಲಾಭ ಹೆಚ್ಚಳ ಹೇಗೆ ಮಾಡಬೇಕು ಎಂಬುದರ ಕುರಿತು ನೀವು ಕಲಿಯುವಿರಿ. ಕೋರ್ಸ್‌ನ ಉದ್ದಕ್ಕೂ, ನೀವು ಸಂವಾದಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು.
ಯಶಸ್ವಿ ಮಳಿಗೆಗಳ ನೈಜ - ಜೀವನದ ಉದಾಹರಣೆಗಳಿಂದ ಕಲಿಯಬಹುದು. ಕೋರ್ಸ್‌ನ ಅಂತ್ಯದ ವೇಳಗೆ ನೀವು, ನಿಮ್ಮ ಪ್ರಾವಿಷನ್ ಸ್ಟೋರ್‌ಅನ್ನು ಹೇಗೆ ಪ್ರಾರಂಭಿಸುವುದು ಹಾಗೂ ಬೆಳೆಸುವುದು ಎಂಬುದರ ಕುರಿತು ದೃಢವಾದ ತಿಳಿವಳಿಕೆಯನ್ನು ಹೊಂದಿರುತ್ತೀರಿ. ದಿನಸಿ ಉದ್ಯಮದಲಲ್ಲಿ ಯಶಸ್ವಿ ಉದ್ಯಮಿಯಾಗುವ ಹಾದಿಯಲ್ಲಿ ನಿಮ್ಮನ್ನು ಹೊಂದಿಸಿ, ಇದೀಗ ನಮ್ಮೊಂದಿಗೆ ಸೇರಿ, ಕಿರಾಣಿ ಬಿಸಿನೆಸ್ ಬಗ್ಗೆ ತಿಳಿಯಿರಿ.
ಈ ಬಿಸಿನೆಸ್‌ನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಕೌಶಲ್ಯಗಳನ್ನು ನೀವು ಕಲಿಯುವಿರಿ.
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಕಿರಾಣಿ ಅಂಗಡಿ ಬಿಸಿನೆಸ್ ಪ್ರಾರಂಭಿಸುವ ಮೂಲಭೂತ ಅಂಶಗಳ ಕಲಿಯಲು ಬಯಸುವ ಮಹಾತ್ವಾಕಾಂಕ್ಷಿ ಉದ್ಯಮಿಗಳು
ತಮ್ಮ ಮಳಿಗೆಗಳ ಬಿಸಿನೆಸ್ ಪ್ಲಾನ್ ಚೇಂಜ್ ಮಾಡಿ, ಸವಾಲುಗಳನ್ನು ಹೇಗೆ ಜಯಿಸಬೇಕು ಎಂದು ಕಲಿಯಲು ಬಯಸುತ್ತಿರುವ ಬಿಸಿನೆಸ್ ಮಾಲೀಕರು
ಯಶಸ್ವಿ ಅಂಗಡಿಯನ್ನು ನಡೆಸುವ ಮೂಲಭೂತ ಅಂಶಗಳನ್ನು ಕಲಿಯಲು ಆಸಕ್ತಿ ಹೊಂದಿರುವ ಅಂಗಡಿ ಉತ್ಸಾಹಿಗಳು
ವಿವಿಧ ಕಿರಾಣಿ ಅಂಗಡಿಯ ಲಾಭಾಂಸಗಳ ಬಗ್ಗೆ ತಿಳಿದುಕೊಳ್ಳು ಉತ್ಸುಕರಾಗಿರುವ ವ್ಯಕ್ತಿಗಳು
ಯಶಸ್ವಿ ಕಿರಾಣಿ ಅಂಗಡಿಯನ್ನು ನಡೆಸುವ ಕುರಿತು ಪ್ರಾಯೋಗಿಕ ಸಲಹೆಗಳನ್ನು ಹುಡುಕುತ್ತಿರುವ ವ್ಯಕ್ತಿಗಳು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಮಾರುಕಟ್ಟೆ ಸಂಶೋಧನೆ, ಹಣಕಾಸು ಪ್ರಕ್ಷೇಪ ಹಾಗೂ ಬೆಳವಣಿಗೆಯ ತಂತ್ರಗಳೊಂದಿಗೆ ಸಮಗ್ರ ಕಿರಾಣಿ ಅಂಗಡಿ ಬಿಸಿನೆಸ್ ಪ್ಲಾನ್ ಅನ್ನು ತಿಳಿಯಿರಿ
ಲಾಭದಾಯಕತೆಯನ್ನು ಹೆಚ್ಚಿಸಲು ಮತ್ತು ತ್ಯಾಜ್ಯವನ್ನು ಕಡಿಮೆ ಮಾಡಲು ಸ್ಥಳ ಆಯ್ಕೆ ಮತ್ತು ದಾಸ್ತಾನು ನಿರ್ವಹಣೆಯನ್ನು ಉತ್ತಮ ಮಾಡುವ ಬಗ್ಗೆ
ಅತ್ಯುತ್ತಮ ಗ್ರಾಹಕ ಸೇವೆಯನ್ನು ಒದಗಿಸುವ ಮೂಲಕ, ಗ್ರಾಹಕರನ್ನು ಆಕರ್ಷಣೆ ಮಾಡಲು ಹಾಗೂ ಉಳಿಸಿಕೊಳ್ಳಲು ಪರಿಣಾಮಕಾರಿ ತಂತ್ರಗಳನ್ನು ಕಲಿಯಿರಿ
ಬೆಲೆ, ದಾಸ್ತಾನು ನಿರ್ವಹಣೆ ಹಾಗೂ ವೆಚ್ಚ ನಿಯಂತ್ರಣದ ಮೂಲಕ ಕಿರಾಣಿ ಅಂಗಡಿಯ ಲಾಭಾಂಶವನ್ನು ಹೇಗೆ ಹೆಚ್ಚಳ ಮಾಡಬೇಕು ಎಂದು ತಿಳಿಯಿರಿ
ಅಧ್ಯಾಯಗಳು