ಈ ಕೋರ್ಸ್ ಒಳಗೊಂಡಿದೆ
ನಿಮ್ಮ ರೂಫ್ ಟಾಪ್ ಅನ್ನು ಹಸಿರು ತೋಟವಾಗಿ ಪರಿವರ್ತಿಸಲು ಮತ್ತು ಈ ಮೂಲಕ ಆದಾಯವನ್ನು ಗಳಿಸಲು ನೀವು ಆಸಕ್ತಿ ಹೊಂದಿದ್ದೀರಾ? ಹಾಗಿದ್ದರೆ ನಮ್ಮ ಟೆರೇಸ್ ಗಾರ್ಡನ್ ಬಿಸಿನೆಸ್ ಕೋರ್ಸ್ ನಿಮಗೆ ಉತ್ತಮ ಆಯ್ಕೆಯಾಗಿದೆ! ಈ ಸಮಗ್ರ ಕೋರ್ಸ್‌ನಲ್ಲಿ, ಟೆರೇಸ್ ಗಾರ್ಡನ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ಈ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಇತರರಿಗಿಂತ ಭಿನ್ನವಾಗಿ ಎದ್ದು ಕಾಣಲು ನಿಮಗೆ ಸಹಾಯ ಮಾಡುವ ವಿವಿಧ ಟೆರೇಸ್ ಗಾರ್ಡನ್ ಕಲ್ಪನೆಗಳನ್ನು ಅನ್ವೇಷಿಸುವುದು ಹೇಗೆ ಎಂಬುದನ್ನು ಸಹ ನೀವು ಕಲಿಯುವಿರಿ.
ಭಾರತದಲ್ಲಿ ನಿಮ್ಮದೇ ಸ್ವಂತ ಟೆರೇಸ್ ಗಾರ್ಡನ್ ಬಿಸಿನೆಸ್ ಅನ್ನು ಕಿಕ್‌ಸ್ಟಾರ್ಟ್ ಮಾಡಲು ಪರಿಣಿತ ಮಾರ್ಗದರ್ಶಕರಾದ ಅಶ್ವಿನಿ ಗಜೇಂದ್ರನ್, ಮಾಲಿನಿ ಜಗನ್ನಾಥ್, ಸಂತೋಷ್ ಮತ್ತು ಮಾಧವ್ ನೇತೃತ್ವದಲ್ಲಿ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಟೆರೇಸ್ ಗಾರ್ಡನ್ ಅನ್ನು ಸ್ಥಾಪಿಸುವುದರಿಂದ ಹಿಡಿದು ನಿಮ್ಮ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವವರೆಗೆ ಎಲ್ಲಾ ಅಗತ್ಯ ಕೌಶಲ್ಯಗಳನ್ನು ನೀವು ಇದರಲ್ಲಿ ಕಲಿಯುವಿರಿ.
ಸಾವಯವ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಸುಸ್ಥಿರ ಜೀವನಕ್ಕಾಗಿ ಹೆಚ್ಚುತ್ತಿರುವ ಅಗತ್ಯತೆಯೊಂದಿಗೆ, ಟೆರೇಸ್ ಗಾರ್ಡನಿಂಗ್ ಭಾರತದಲ್ಲಿ ಲಾಭದಾಯಕ ಬಿಸಿನೆಸ್ ಅವಕಾಶವಾಗಿದೆ. ಈ ಕೋರ್ಸ್ ತೆಗೆದುಕೊಳ್ಳುವ ಮೂಲಕ, ನಿಮ್ಮದೇ ಸ್ವಂತ ಯಶಸ್ವಿ ಟೆರೇಸ್ ಗಾರ್ಡನಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಾದ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ನೀವು ಹೊಂದಿರುತ್ತೀರಿ.
ನಮ್ಮ ಮಾರ್ಗದರ್ಶಕರು ಈ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ಪ್ರತಿಯೊಂದು ಹಂತದ ಬಗ್ಗೆಯೂ ನಿಮಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ. ಟೆರೇಸ್ ಗಾರ್ಡನಿಂಗ್ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಎಂಬುದರ ಕುರಿತು ಅಮೂಲ್ಯವಾದ ಒಳನೋಟಗಳನ್ನು ಅವರು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ, ಇದರ ಜೊತೆಗೆ ನಿಮ್ಮ ಸಸ್ಯಗಳನ್ನು ನಿರ್ವಹಿಸಲು ಸಲಹೆಗಳು ಮತ್ತು ತಂತ್ರಗಳು ಮತ್ತು ನಿಮ್ಮ ಟೆರೇಸ್ ಜಾಗವನ್ನು ಉತ್ತಮಗೊಳಿಸುವುದು ಮತ್ತು ಸರಿಯಾದ ಟಾರ್ಗೆಟ್ ಆಡಿಯನ್ಸ್ ಅನ್ನು ಗುರುತಿಸುವುದು ಹೇಗೆ ಎಂದು ಸಹ ನೀವು ತಿಳಿಯುತ್ತೀರಿ.
ತೋಟಗಾರಿಕೆ ಬಗೆಗಿನ ನಿಮ್ಮ ಪ್ಯಾಷನ್ ಅನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಲು ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ನಮ್ಮ ಟೆರೇಸ್ ಗಾರ್ಡನ್ ಬಿಸಿನೆಸ್ ಕೋರ್ಸ್‌ಗೆ ffreedom Appನಲ್ಲಿ ನೋಂದಾಯಿಸಿ ಮತ್ತು ನಿಮ್ಮ ಟೆರೇಸ್ ಗಾರ್ಡನ್ ಕನಸುಗಳನ್ನು ನನಸಾಗಿಸುವುದು ಹೇಗೆ ಎಂದು ತಿಳಿಯಿರಿ!
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಹೊಸ ಬಿಸಿನೆಸ್ ಅವಕಾಶವನ್ನು ಹುಡುಕುತ್ತಿರುವ ಪ್ಯಾಷನೇಟ್ ತೋಟಗಾರರು
ರೂಫ್ ಟಾಪ್ ಜಾಗವನ್ನು ಗರಿಷ್ಠವಾಗಿ ಉಪಯೋಗಿಸಿಕೊಳ್ಳಲು ಬಯಸುವ ನಗರವಾಸಿಗಳು
ಬದಲಾವಣೆಯನ್ನು ತರಲು ಉತ್ಸುಕರಾಗಿರುವ ಹಸಿರು ಉದ್ಯಮಿಗಳು
ತಮ್ಮ ಕೌಶಲ್ಯವನ್ನು ಹೆಚ್ಚಿಸಲು ಉತ್ಸುಕರಾಗಿರುವ ಆರಂಭಿಕರು ಮತ್ತು ತಜ್ಞರು
ಭಾರತದಲ್ಲಿನ ಎಲ್ಲಾ ಹಿನ್ನೆಲೆ ಮತ್ತು ಪ್ರದೇಶಗಳಿಗೆ ಸೂಕ್ತವಾದ ಬಿಸಿನೆಸ್ ಅವಕಾಶವನ್ನು ಹುಡುಕುತ್ತಿರುವವರು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ವಿವಿಧ ಸಸ್ಯಗಳು ಮತ್ತು ತರಕಾರಿಗಳಿಗೆ ಟೆರೇಸ್ ಗಾರ್ಡನ್ ಅನ್ನು ಹೇಗೆ ವಿನ್ಯಾಸಗೊಳಿಸುವುದು ಮತ್ತು ಹೊಂದಿಸುವುದು
ಕೀಟ ನಿಯಂತ್ರಣ ಮತ್ತು ಮಣ್ಣಿನ ತಯಾರಿಕೆ ಸೇರಿದಂತೆ ನಿಮ್ಮ ಸಸ್ಯಗಳನ್ನು ನಿರ್ವಹಿಸುವ ಮತ್ತು ಕಾಳಜಿ ವಹಿಸುವ ತಂತ್ರಗಳು
ನಿಮ್ಮ ಟೆರೇಸ್ ಗಾರ್ಡನ್ ಅನ್ನು ಲಾಭದಾಯಕ ಬಿಸಿನೆಸ್ ಆಗಿಸಲು ಮಾರ್ಕೆಟಿಂಗ್ ಮತ್ತು ಮಾರಾಟದ ತಂತ್ರಗಳು
ನಿಮ್ಮ ಟಾರ್ಗೆಟ್ ಆಡಿಯನ್ಸ್ ಮತ್ತು ಅವರ ಅಗತ್ಯಗಳನ್ನು ಹೇಗೆ ಗುರುತಿಸುವುದು ಮತ್ತು ಪೂರೈಸುವುದು
ಹಣಕಾಸು ನಿರ್ವಹಣೆ ಮತ್ತು ಗ್ರಾಹಕ ಸೇವೆಯಂತಹ ಅಗತ್ಯ ಬಿಸಿನೆಸ್ ಕೌಶಲ್ಯಗಳು
ಅಧ್ಯಾಯಗಳು