ಈ ಕೋರ್ಸ್ ಒಳಗೊಂಡಿದೆ
ವೆಜ್ ರೆಸ್ಟೋರೆಂಟ್ ಒಂದು ಲಾಭದಾಯಕ ಉದ್ಯಮದ ಜೊತೆಗೆ ಒಂದು ಸವಾಲಿನ ಉದ್ಯಮ ಕೂಡ ಹೌದು. ಬೆಂಗಳೂರಿನಂತಹ ನಗರದ ಬಹಳಷ್ಟು ಕುಟುಂಬಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ಕೆಲಸಕ್ಕೆ ಹೋಗುತ್ತಿರುವುದರಿಂದ ಅನೇಕ ಮಂದಿಗೆ ಅಡಿಗೆ ಮಾಡಿಕೊಳ್ಳುವ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಇಂದು ರೆಸ್ಟೋರೆಂಟ್ ಗಳ ಸಂಖ್ಯೆಯೂ ಕೂಡ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಬಹಳಷ್ಟು ಮಂದಿ ತಮ್ಮ ಊರನ್ನು ಬಿಟ್ಟು ಬೇರೆ ಬೇರೆ ನಗರಗಳಿಗೆ ಬಂದು ಕೆಲಸ ಮಾಡುತ್ತಿರುತ್ತಾರೆ. ಅಂಥಹವರಿಗೂ ಸಹ ಆಹಾರ ನೀಡುವ ಕೆಲಸವನ್ನು ಈ ವೆಜ್ ರೆಸ್ಟೋರೆಂಟ್ ಗಳು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿವೆ. ಆಹಾರ ಉದ್ಯಮ ಒಂದು ರಿಸೆಶನ್ ಫ್ರೀ ಉದ್ಯಮ ಆಗಿರುವುದರಿಂದ ಇದರಲ್ಲಿ ಯಾವಾಗಲೂ ಬೇಡಿಕೆ ಮತ್ತು ಅವಕಾಶಗಳು ಇದ್ದೇ ಇರುತ್ತದೆ. ಭಾರತದಲ್ಲಿ ಸಂಘಟಿತ ರೆಸ್ಟೋರೆಂಟ್ ಮತ್ತು ಫುಡ್ ಉದ್ಯಮದ ವ್ಯಾಪ್ತಿ ಸುಮಾರು 1.60 ಲಕ್ಷ ಕೋಟಿಯಷ್ಟು ದೊಡ್ಡದಿದೆ. ಮತ್ತು ಅಸಂಘಟಿತ ರೆಸ್ಟೋರೆಂಟ್ ಮತ್ತು ಫುಡ್ ಉದ್ಯಮದ ವ್ಯಾಪ್ತಿ ಸುಮಾರು 2.5 ಲಕ್ಷ ಕೋಟಿಯಷ್ಟು ದೊಡ್ಡದಿದೆ. ಇದಲ್ಲದೆ ಒಟ್ಟಾರೆ ಈ ರೆಸ್ಟೋರೆಂಟ್ ಮತ್ತು ಫುಡ್ ಉದ್ಯಮ ಸುಮಾರು 4 ಲಕ್ಷ ಕೋಟಿಯಷ್ಟು ಬೃಹತ್ ಗಾತ್ರದ ಉದ್ಯಮ ಎಂದು ಅಂದಾಜಿಸಲಾಗಿದೆ. ಈ ಉದ್ಯಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಮ್ಮ ಮಾರ್ಗದರ್ಶಕರ ಮೂಲಕ ಈ ಕೋರ್ಸ್ ನಲ್ಲಿ ಪಡೆಯಿರಿ.
ಇದರಿಂದ ನೀವು ಕೂಡ ಈ ವೆಜ್ ರೆಸ್ಟೋರೆಂಟ್ ಅನ್ನು ಸ್ಥಾಪಿಸಿ ಲಕ್ಷಗಳಲ್ಲಿ ಆದಾಯವನ್ನು ಗಳಿಸಬಹುದು.