ಈ ಕೋರ್ಸ್ ಒಳಗೊಂಡಿದೆ
ಪ್ರೀಡಂ ಆಯಪ್ ನ ಮಹಿಳಾ ಉದ್ಯಮಶೀಲತೆ ಕೋರ್ಸ್ ಗೆ ಸುಸ್ವಾಗತ, ಯುವ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಮತ್ತು ಮಹಿಳಾ ಉದ್ಯಮಶೀಲತೆಯ ಅಭಿವೃದ್ಧಿಯನ್ನು ಉತ್ತೇಜಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್ ಮಹಿಳೆಯರಿಗೆ ತಮ್ಮ ಸ್ವಂತ ಬಿಸಿನೆಸ್ ಆರಂಭಿಸಿ, ಬೆಳೆಸಲು ಮತ್ತು ಅವರ ನೆಟ್‌ವರ್ಕ್ ನಿರ್ಮಿಸಲು ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಅಗತ್ಯವಿರುವ ಸಾಧನಗಳನ್ನು ಈ ಕೋರ್ಸ್ ಮೂಲಕ ಪರಿಚಯಿಸಲಾಗುತ್ತದೆ.
ಈ ಕೋರ್ಸ್‌ನಲ್ಲಿ ಉಮಾ ರೆಡ್ಡಿ, ಸುಪ್ರಿಯಾ ಕಾಮತ್, ಮೀರಾ ಶಿವಂಗಯ್ಯ, ಛಾಯಾ ನಂಜಪ್ಪ ಮತ್ತು ಜೆಸ್ಸಿ ಲಾರೆನ್ಸ್ ಮಾರ್ಗದರ್ಶಕರಾಗಿದ್ದಾರೆ.
ಉಮಾ ರೆಡ್ಡಿ ಅವರು ತಮ್ಮ ತಂದೆಯಿಂದ ಸಾಲ ಪಡೆದು ಸರ್ಕ್ಯೂಟ್ ಬೋರ್ಡ್ ಬಿಸಿನೆಸ್ ಆರಂಭಿಸಿದ್ದರು. ಇಂದು ಇವರ ಸಾಧನೆಗಳಿಗಾಗಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸುಪ್ರಿಯಾ ಕಾಮತ್ ಅವರು ತಮ್ಮ ಮಾವನವರ ಬಿಸಿನೆಸ್ ಅನ್ನು ವಹಿಸಿಕೊಂಡು, ಮೇಲ್ದರ್ಜೆಗೇರಿಸಿದರು. ಮೀರಾ ಶಿವಂಗಯ್ಯ ಅವರು ಪ್ರಿಂಟಿಂಗ್ ಪ್ರೆಸ್ ಬಿಸಿನೆಸ್ ಆರಂಭಿಸಿದರು. ಇವರು ಅನೇಕ ಮಹಿಳೆಯರಿಗೆ ಗಾರ್ಮೆಂಟ್ ಉದ್ಯಮದಲ್ಲಿ ತರಬೇತಿ ನೀಡಿದ್ದಾರೆ. ಇದರೊಂದಿಗೆ ಇವರು ಪಿಯು ಕಾಲೇಜು ಸಹ ಆರಂಭಿಸಿದ್ದಾರೆ.
ಛಾಯಾ ನಂಜಪ್ಪ ಅವರು ನೆಕ್ಟರ್ ಫ್ರೆಶ್ ಎಂಬ ಅಗ್ರಿ-ಸೆಕ್ಟರ್ ಬಿಸಿನೆಸ್ ಆರಂಭಿಸಿದರು. ಜೆಸ್ಸಿ ಲಾರೆನ್ಸ್ ಅನೇಕ ಮಹಿಳಾ ಕಾರ್ಮಿಕರನ್ನು ನೇಮಿಸಿಕೊಳ್ಳುವ ಗಾರ್ಮೆಂಟ್ ಫ್ಯಾಕ್ಟರಿಯನ್ನು ಆರಂಭಿಸಿದ್ದಾರೆ.
ಈ ಮಹಿಳಾ ಉದ್ಯಮಶೀಲತೆ ಕೋರ್ಸ್ ಯುವ ಮಹಿಳಾ ಉದ್ಯಮಿಗಳಿಗೆ ವ್ಯವಹಾರದಲ್ಲಿ ಯಶಸ್ವಿ ಮಹಿಳೆಯರಿಂದ ಕಲಿಯಲು ಮತ್ತು ತಮ್ಮದೇ ಆದ ಯಶಸ್ಸಿನ ಕಥೆಗಳನ್ನು ರಚಿಸಲು ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಪಡೆಯಲು ಪರಿಪೂರ್ಣ ಅವಕಾಶವಾಗಿದೆ. ಇದೀಗ ನಮ್ಮೊಂದಿಗೆ ಸೇರಿ ಮತ್ತು ನಿಮ್ಮ ಉದ್ಯಮಶೀಲತೆಯ ಪ್ರಯಾಣವನ್ನು ಇಂದೇ ಆರಂಭಿಸಿ!
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ತಮ್ಮ ಸ್ವಂತ ಉದ್ಯಮವನ್ನು ಆರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಮಹಿಳಾ ಉದ್ಯಮಿಗಳು
ತಮ್ಮ ಅಸ್ತಿತ್ವದಲ್ಲಿರುವ ವ್ಯಾಪಾರವನ್ನು ಬೆಳೆಸಲು ಬಯಸುವ ಯುವ ಮಹಿಳಾ ಉದ್ಯಮಿಗಳು
ಉದ್ಯಮಶೀಲತೆಯ ಪ್ರಪಂಚದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಮಹಿಳೆಯರು
ತಮ್ಮ ವ್ಯವಹಾರ ಕೌಶಲ್ಯ ಮತ್ತು ಜ್ಞಾನವನ್ನು ಅಭಿವೃದ್ಧಿಪಡಿಸಲು ಬಯಸುವ ಮಹಿಳೆಯರು
ಇತರ ಮಹಿಳಾ ಉದ್ಯಮಿಗಳೊಂದಿಗೆ ನೆಟ್‌ವರ್ಕ್ ಮಾಡಲು ಬಯಸುವ ಮಹಿಳೆಯರು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಬಿಸಿನೆಸ್ ಕಲ್ಪನೆಯನ್ನು ಅಭಿವೃದ್ಧಿಪಡಿಸಿ ಮತ್ತು ಯಶಸ್ವಿ ಬಿಸಿನೆಸ್ ಪ್ಲಾನ್ ರಚಿಸಿ
ಮಾರ್ಕೆಟಿಂಗ್ ಮತ್ತು ಮಾರಾಟದ ಪ್ರಪಂಚವನ್ನು ನ್ಯಾವಿಗೇಟ್ ಮಾಡಿ
ಬಿಸಿನೆಸ್ ನಡೆಸುವ ಕಾನೂನು ಮತ್ತು ಹಣಕಾಸಿನ ಅಂಶಗಳ ಬಗ್ಗೆ ತಿಳಿಯಿರಿ
ನಾಯಕತ್ವ ಮತ್ತು ನಿರ್ವಹಣಾ ಕೌಶಲ್ಯಗಳನ್ನು ತಿಳಿಯಿರಿ
ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ ಮತ್ತು ನಿಮ್ಮ ಸಂಪರ್ಕ ಜಾಲವನ್ನು ನಿರ್ಮಿಸಿ
ಅಧ್ಯಾಯಗಳು