4.5 from 1.1K ರೇಟಿಂಗ್‌ಗಳು
 3Hrs 11Min

ಮೀನು ಕೃಷಿ ಸಾಧಕರ ವಿಶೇಷ ಕೋರ್ಸ್

ನೀವು ಮೀನು ಸಾಕಣೆಯ ಬಿಸಿನೆಸ್‌ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದರೆ ನಿಮಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ನೀವು ಈ ಕೋರ್ಸ್‌ ನಲ್ಲಿ ಮೀನು ಸಾಕಣೆಯ ಬಗ್ಗೆ ಹಾಗೂ ವಿವಿಧ ಬಗೆಯ ಮೀನು ಸಾಕಣೆಯ ಕುರಿತು ವಿಶೇಷ ಕೋರ್ಸ್‌ ವಿನ್ಯಾಸಗೊಳಿಸಲಾಗಿದೆ.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Successful Fish Farmers Special Course Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(152)
ಬಿಸಿನೆಸ್ ಕೋರ್ಸ್‌ಗಳು(108)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 11Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
Completion Certificate
 
 

ಕೋರ್ಸ್‌ ಪರಿಚಯ ( Introduction)

ಮೀನು ಕೃಷಿ ಈಗ ಭಾರತದಲ್ಲಿ ಬಹಳ ಲಾಭದಾಯಕ ಮತ್ತು ಯಶಸ್ವಿ ಉದ್ಯಮವಾಗಿ ಹೊರಹೊಮ್ಮಿದೆ. ಮೀನಿನ ಮಾಂಸಗಳಲ್ಲಿ ಅಧಿಕ ಪ್ರೊಟೀನ್‌ ಭರಿತವಾಗಿದ್ದು, ಇದರಲ್ಲಿ ಕಡಿಮೆ ಕ್ಯಾಲೊರಿಗಳು ಮತ್ತು ಕೊಲೆಸ್ಟ್ರಾಲ್‌ ಹೊಂದಿರುತ್ತದೆ. ಇಂದು ದಿನದಿಂದ ದಿನಕ್ಕೆ ಮೀನು ಹಾಗೂ ಮೀನಿನ ಉತ್ಪನ್ನಗಳು ಹೆಚ್ಚುತ್ತಿರುವುದರಿಂದ ಮೀನಿಗೆ ಹೆಚ್ಚಿನ ಬೇಡಿಕೆಯೂ ಇದೆ. ಆದ್ದರಿಂದ ಇಂದು ಮೀನು ಸಾಕಣಿಕೆಯಿಂದ ಹೆಚ್ಚಿನ ಲಾಭವನ್ನು ಕೂಡ ಪಡೆಯಬಹುದಾಗಿದೆ. ಇನ್ನು ಭಾರತ ವಿಶ್ವದ ಎರಡನೇ ಅತಿದೊಡ್ಡ ಮೀನು ಉತ್ಪಾದನಾ ರಾಷ್ಟ್ರವಾಗಿದೆ. ಭಾರತದಲ್ಲಿ ಶೇಕಡ 7.56ರಷ್ಟು ಜಾಗತಿಕವಾಗಿ ಮೀನು ಉತ್ಪಾದನೆಯಾಗುತ್ತದೆ. ದೇಶದಲ್ಲಿ 600 ಬಿಲಿಯನ್‌ ಡಾಲರ್ ಮೀನು ಮಾರಾಟವಾಗುತ್ತದೆ. ಭಾರತದಂದ ಒಟ್ಟು ೪೦-೪೫೦೦೦ ಕೋಟಿ ಮೀನುಗಳನ್ನು ಎಕ್ಸ್‌ ಪೋರ್ಟ್‌ ಮಾಡಲಾಗುತ್ತದೆ.  ಜಾಗತಿಕವಾಗಿ ೧೧೩.೨ ಬಿಲಿಯನ್‌ ಯುಸ್‌ ಡಾಲರ್‌ ನಷ್ಟು ದೊಡ್ಡ ಗಾತ್ರದ ಮೀನು ಮಾರುಕಟ್ಟೆ ಇದೆ. ಪ್ರಪಂಚದಲ್ಲಿ ಅತೀ ಹೆಚ್ಚು ಮೀನು ಉತ್ಪಾದನೆ ಮಾಡುವ ರಾಷ್ಟ್ರ ಚೀನಾ ಆದರೆ ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಮೀನು ಮಾರುಕಟ್ಟೆಗೆ ಹೆಚ್ಚಿನ ಡಿಮ್ಯಾಂಡ್‌ ಇದೆ. ಹಾಗಾಗಿ ನಾವು ನಿಮಗೆ ಈ ಕೋರ್ಸ್‌ ನಲ್ಲಿ ವಿವಿಧ ತಳಿಯ ಮೀನು ಉತ್ಪಾದನೆ ಬಗ್ಗೆ ತಿಳಿಸುತ್ತಿದ್ದೇವೆ. 

 

ಯಾರೆಲ್ಲಈ ಕೋರ್ಸ್‌ ಅನ್ನು ಮಾಡಬಹುದು? (who can take up this course)

  • ಈ ಕೋರ್ಸ್‌ ಅನ್ನು ಯಾರು ಬೇಕಾದರೂ ಮಾಡಬಹುದು.ʼ

  • ನಿಮಗೆ ಮೀನು ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇದ್ದರೆ ನೀವು ಈ ಕೋರ್ಸ್‌ ಅನ್ನು ಮಾಡಬಹುದು.

  • ಈ ಕೋರ್ಸ್‌ ನಿಮಗೆ ಮೀನು ಕೃಷಿಯನ್ನು ಹೇಗೆ ಮಾಡಬಹುದು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.

  • ಈ ಕೋರ್ಸ್‌ ನಿಮಗೆ ಕಡಿಮೆ ಜಾಗದಲ್ಲೂ ಯಾವ ರೀತಿಯ ಮೀನು ಕೃಷಿಯನ್ನು ಮಾಡಬಹುದು ಎಂಬುವುದನ್ನು ಈ ಕೋರ್ಸ್‌ ನಲ್ಲಿ ಕಲಿಯುವಿರಿ.

  • ಯಾವ ಯಾವ ಮೀನಿನ ತಳಿಗಳಿವೆ ಎಂಬುವುದನ್ನು ಕೂಡ ನೀವು ಈ ಕೋರ್ಸ್‌ ನಲ್ಲಿ ಕಲಿಯುವಿರಿ

  • ಈ ಕೋರ್ಸ್‌ ನಲ್ಲಿ ಮೀನು ಕೃಷಿಯನ್ನು ಹೇಗೆ ಮಾಡಬಹುದು ಎಂಬುವುದನ್ನು ಯಶಸ್ವಿ ಮಾರ್ಗದರ್ಶಕರಿಂದ ಕಲಿಯುವಿರಿ. 


 

ಯಾವೆಲ್ಲ ಅಧ್ಯಾಯಗಳು ಈ ಕೋರ್ಸ್‌ ನಲ್ಲಿವೆ? (topics covered in this course)

ಈ ಕೋರ್ಸ್‌ ನಲ್ಲಿ ನೀವು ವಿವಿಧ ರೀತಿಯ ಮೀನು ಸಾಕಣೆಯ ಬಗ್ಗೆ ವಿವರಿಸುತ್ತೇವೆ. 

  • ಬಯೋ ಫ್ಲಾಕ್‌ ಮೀನು ಕೃಷಿ: ಬಯೋಫ್ಲೋಕ್ ತಂತ್ರಜ್ಞಾನ ಎಂದರೆ ಮೀನು ಅಥವಾ ಸೀಗಡಿಗಳಿಗೆ ಹಾನಿಕಾರಕ ಮತ್ತು ವಿಷಕಾರಿಯಾದ ವಸ್ತುಗಳನ್ನು ಕೆಲವು ಪ್ರೋಟೀನ್ ಆಹಾರವಾಗಿ ಪರಿವರ್ತಿಸಲಾಗುತ್ತದೆ. ನೀರಿನ ವಿನಿಮಯದೊಂದಿಗೆ ದಾಸ್ತಾನು ಮಾಡುವಿಕೆಯ ಸಾಂದ್ರತೆಯು ಅಧಿಕವಾಗಿದ್ದಾಗ ಇದನ್ನು ಮೂಲತಃ ಆಕ್ವಾ ಕೃಷಿಯಲ್ಲಿ ಬಳಸಲಾಗುತ್ತದೆ. ಬಳಸಿದ ಟ್ಯಾಂಕ್‌ಗಳನ್ನು ನೇರ ಸೂರ್ಯನ ಬೆಳಕಿನಲ್ಲಿ ಇರಿಸಿದಾಗ ಈ ವಿಧಾನವನ್ನು ಉತ್ಪಾದಕವಾಗಿ ನಡೆಸಲಾಗುತ್ತದೆ.ಬಯೋಫ್ಲೋಕ್ ವ್ಯವಸ್ಥೆಯಲ್ಲಿ, ಸಾರಜನಕದಿಂದ ಉಂಟಾಗುವ ಪೋಷಕಾಂಶಗಳು ಮತ್ತು ತ್ಯಾಜ್ಯಗಳನ್ನು ಮರುಬಳಕೆ ಮಾಡಲಾಗುತ್ತದೆ. ಸಾರಜನಕ ಮತ್ತು ಇಂಗಾಲದ ಡೈಆಕ್ಸೈಡ್ ಅನುಪಾತವನ್ನು ನೀರಿನಲ್ಲಿ ಹೆಚ್ಚಿನ ಮಟ್ಟದಲ್ಲಿ ಇಟ್ಟುಕೊಂಡು ಮರುಬಳಕೆ ಮಾಡಲಾಗುತ್ತದೆ.

 

  • ಕೇಜ್‌ ಕಲ್ಚರ್‌ ಎಂದರೇನು: ಕೇಜ್‌ ಕಲ್ಚರ್‌ ಮೀನು ಕೃಷಿ ಎಂದರೆ ಪಂಜರದ ಮೂಲಕ ಮೀನುಗಳ ಸಾಕಣೆ ಮಾಡುವುದು ಎಂದರ್ಥ. ಮೀನುಗಳನ್ನು ಬೆಳೆಸಲು ಒಂದು ಪಂಜರದಂತೆ  ಹೊಂಡವನ್ನು ನಿರ್ಮಾಣ ಮಾಡಲಾಗುತ್ತದೆ. ಇದು ನೀರಿನ ಮುಕ್ತ ಹರಿವನ್ನು ಒಳಗೊಂಡಿರುತ್ತದೆ. ಇನ್ನು ಈ ಕೇಜ್‌ ಅನ್ನು ಚೌಕಾಕಾರದಲ್ಲಿ ಮಾಡಲ್ಪಟ್ಟಿರುತ್ತದೆ. ಇನ್ನು ಈ ಕೇಜ್‌ ಅನ್ನು ನದಿ, ಸಮುದ್ರ, ಹೊಳೆಯಲ್ಲಿ ಪಂಜರದ ಮೂಲಕ ಮೀನು ಸಾಕಣೆದ ಮಾಡಲಾಗುತ್ತದೆ. ಇಲ್ಲಿ ನೀವು ಕೇಜ್‌ ಕಲ್ಚರ್‌ ನಲ್ಲಿ ನಾಲ್ಕು ವಿಧಗಳಿವೆ. i) ಸ್ಥಿರ ಪಂಜರಗಳು, ii) ತೇಲುವ ಪಂಜರಗಳು, iii) ಮುಳುಗಿರುವ ಪಂಜರಗಳು ಮತ್ತು iv) ಸಬ್ಮರ್ಸಿಬಲ್ ಪಂಜರಗಳು. ಈ ಪಂಜರ ಮೀನು ಸಾಕಣೆಯಲ್ಲಿ ಪ್ರವಾಹ ಬರದಂತೆ ನೋಡಿಕೊಳ್ಳಬೇಕು. ಮತ್ತು ಈ ರೀತಿಯ ಮೀನು ಸಾಕಣೆಗೆ ಶುದ್ಧ, ಆಮ್ಲಜನಕಯುಕ್ತ ನೀರಿನ ನಿರಂತರ ಹರಿವಿನ ಅಗತ್ಯತೆ ಬೇಕಾಗುತ್ತದೆ.  

 

  • ಸಿಗಡಿ ಮೀನು ಕೃಷಿ: ಸಿಗಡಿ ಮೀನು ಎಲ್ಲಾ ಮೀನುಗಳಿಗಿಂತ ಹೆಚ್ಚಿನ ರುಚಿಯನ್ನು ಹೊಂದಿರುತ್ತದೆ. ಹಾಗಾಗಿ ಈ ಸಿಗಡಿ ಮೀನು ಎಲ್ಲಾ ಮಾಂಸಹಾರ ಪ್ರಿಯರು ಇಷ್ಟಪಟ್ಟು ತಿನ್ನುತ್ತಾರೆ. ಹಾಗಾಗಿ ಇಂದು ಈ ಸಿಗಡಿ ಮೀನು ಕೃಷಿಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಇಂದು ಜಾಗತಿಕ ಮಾರುಕಟ್ಟೆಯಲ್ಲಿ 380,000 ಟನ್‌ ಗಳಷ್ಟು ಸಿಹಿನೀರಿನ ಸಿಗಡಿಗಳ ಉತ್ಪಾದನೆ ಮಾಡಲಾಗುತ್ತದೆ. ಈ ಸಿಗಡಿ ಕೃಷಿಯನ್ನು ಸರೋವರ, ನದಿಗಳು ಮತ್ತು ಕಾಲುವೆಗಳಿಗೆ ಹೋಲಿಸಿದರೆ ನಳ್ಳಿ ಕೃಷಿಯು ಉತ್ತಮ ಲಾಭದಾಯಕವಾಗಿದೆ. ಸಿಗಡಿ ಕೃಷಿಯಲ್ಲಿ ಹಲವು ವಿಧಗಳಿವೆ. ಮ್ಯಾಕ್ರೋಬ್ರಾಚಿಯಮ್‌, ರೋಸನ್‌ ಬರ್ಗಿ, ಸ್ಕಾಂಪಿ, ಜಿಂಗಾ ಮುಂತಾದ ವಿಧಗಳಿವೆ. ಇವುಗಳಲ್ಲಿ ಸ್ಕಾಂಪಿ ಎಂದು ಕರೆಯಲ್ಪಡುವ ಸಿಗಡಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಸಿಹಿನೀರಿನ ಸೀಗಡಿಗಳನ್ನು ಬೆಳೆಸಲು ಈಜುಕೊಳಗಳು, ಟ್ಯಾಂಕ್‌ಗಳು ಸೂಕ್ತವಾಗಿದೆ. ಇವುಗಳಲ್ಲಿ ನೀವು ಸಿಗಡಿ ಕೃಷಿಯನ್ನು ಮಾಡಬಹುದಾಗಿದೆ. ನೀವು ಸೀಗಡಿಯನ್ನು ಸೇರಿಸುವ ಮೊದಲು ನೀರನ್ನು ಪರೀಕ್ಷಿಸಬೇಕಾಗುತ್ತದೆ. ನೀರು ರಾಸಾಯನಿಕಗಳು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಮುಕ್ತವಾಗಿರಬೇಕಾಗುತ್ತದೆ. ನೀರಿನಲ್ಲಿ ಮೀನು, ಉಭಯಚರಗಳು ಅಥವಾ ಇತರ ಜೀವಿಗಳು ಇದ್ದರೆ, ಸೀಗಡಿಗಳು ತಿನ್ನುವ ಸಾಧ್ಯತೆ ಇದೆ. ನೀರಿನ ಪಿಹೆಚ್ ಸಮತೋಲನವನ್ನು  ಹತ್ತಕ್ಕಿಂತ ಕಡಿಮೆ ಇರಿಸಿಬೇಕಾಗುತ್ತದೆ. ನಂತರ ನೀರಿಗೆ ಏರೇಟರ್ ಸೇರಿಸಬೇಕಾಗುತ್ತದೆ. 

 

  • ಸೀ - ಬಾಸ್‌ ಮೀನು ಕೃಷಿ: ಈ ಮೀನು ಉಪ್ಪು ನೀರು ಮತ್ತು ಸಿಹಿ ನೀರಿನಲ್ಲಿ ಬೆಳೆಸಬಹುದಾದ ಮೀನು ಇದು. ಈ ಮೀನುಗಳಿಗೆ ಗೋವಾ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಬಯೋ ಪ್ಲಾಕ್‌, ಡ್ಯಾಮ್, ಕೇಜ್‌ ಕಲ್ಚರ್‌ ನಲ್ಲೂ ಸೀ ಬಾಸ್‌ ಮೀನು ಸಾಕಣೆ ಮಾಡಬಹುದು. ಈ ಮೀನುಗಳು ಒಂದು ಎಕರೆಗೆ ೪-೫ ಟನ್‌ ಇಳುವರಿಯನ್ನು ಕೊಡುತ್ತದೆ. ಈ ಮೀನುಗಳಿಗೆ ಉತ್ತಮ ಮಾರುಕಟ್ಟೆ ಬೆಲೆ ಇದೆ. ಒಂದು ಕೆ.ಜಿ ಗೆ ೪೫೦ ರೂ ಹೋಲ್‌ ಸೇಲ್‌ ರೇಟ್‌ ಇರುತ್ತದೆ. ಈ ಮೀನುಗಳ ಡಿಮ್ಯಾಂಡ್‌ ಯಾವತ್ತಿಗೂ ಕಡಿಮೆಯಾಗುವುದಿಲ್ಲ. ಈ ಮೀನುಗಳಿಗೆ ಕಡಿಮೆ ನೀರು ಇದ್ದರೂ ಕೂಡ ಮಾಡಬಹುದು. ಕೆರೆ, ಡ್ಯಾಮ್‌, ಸಮುದ್ರ ತೀರದಲ್ಲಿ ನೀವು ಈ ಕೃಷಿಯನ್ನು ಮಾಡಬಹುದು. ಅಲೆಗಳು ಕಡಿಮೆ ಇರುವ ಸಮುದ್ರದಲ್ಲಿ ಈ ಮೀನುಗಳನ್ನು ಸಾಕಬಹುದು. ಈ ಸೀ ಬಾಸ್‌ ಮೀನುಗಳು ತುಂಬಾ ಸೂಕ್ಮವಾದ ಜೀವಿಗಳು. ಈ ಮೀನುಗಳು ಬೇರೆ ಮೀನುಗಳನ್ನು ತಿಂದು ಬದುಕುತ್ತದೆ. ಈ ಮೀನು ಕೃಷಿ ಕರಾವಳಿಗೆ ಸೂಕ್ತವಾಗಿದೆ. ಮಳೆನಾಡ ಪ್ರದೇಶದಲ್ಲಿ ಈ ಮೀನುಗಳನ್ನು ಸಾಕುವುದು ಸ್ಪಲ್ಪ ಕಷ್ಟ. 

 

  • ಕೊಳದಲ್ಲಿ ಮೀನು ಸಾಕಣಿಕೆ: ಲಾಭದಾಯಕ ಮೀನು ಸಾಕಾಣಿಕೆ ವ್ಯವಹಾರಕ್ಕಾಗಿ, ಮೀನು ಸಾಕಣೆ ಕೊಳ ಅಥವಾ ತೊಟ್ಟಿಯನ್ನು ನಿರ್ಮಿಸಿದ ಇವುಗಳಲ್ಲಿ ಮೀನು ಸಾಕಣೆ ಮಾಡುವುದಾಗಿದೆ. ಇಲ್ಲಿ ನೀವು ಇದಕ್ಕೆ ಸೂಕ್ತವಾದ  ಭೂಮಿ ಅಥವಾ ಜಮೀನನ್ನು ಆರಿಸಿಕೊಳ್ಳಬೇಕು. ಬಳಿಕ ನೀವು ಯಾವ ಜಾತಿಯ ಮೀನುಗಳನ್ನು ಆಯ್ಕೆ ಮಾಡಬಹುದು ಎಂಬುವುದನ್ನು ತಿಳಿದುಕೊಂಡು ನೀವು ಮೀನಿನ ಬಿತ್ತನೆ ಮಾಡಬಹುದು. ಈ ಮೀನುಗಳು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಿದ್ಧವಾದ ನಂತರ ನೀವು ಮೀನು ಆಹಾರವನ್ನು ಸಹ ನಿರ್ವಹಿಸಬಹುದು. ನಂತರ ಮೀನು ಸಾಕಾಣಿಕೆಗೆ ಸೂಕ್ತವಾದ ಭೂಮಿ ಅಥವಾ ಫಾರ್ಮ್ ಆಯ್ಕೆಮಾಡಿಕೊಳ್ಳಿ ಏಕೆಂದರೆ ಮೀನು ಸಾಕಾಣಿಕೆ ವ್ಯವಹಾರದಲ್ಲಿ ಸೂಕ್ತವಾದ ಭೂಮಿ ಅಥವಾ ಜಮೀನನ್ನು ಆರಿಸುವುದು ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ, ನೈಸರ್ಗಿಕ ನೀರಿನ ಸಂಪನ್ಮೂಲಗಳು ಸುಲಭವಾಗಿ ಲಭ್ಯವಿರುವ ಸರೋವರ, ನದಿಗಳು ಅಥವಾ ತೊರೆಯ ಬಳಿ ಮೀನು ಸಾಕಾಣಿಕೆ ವಿಧಾನಗಳು ಸೂಕ್ತವಾಗಿವೆ. ಯಶಸ್ವಿ ಮೀನು ಸಾಕಾಣಿಕೆ ವ್ಯವಹಾರ ಯೋಜನೆಯನ್ನು ಸ್ಥಾಪಿಸಲು ಈ ಪ್ರದೇಶಗಳು ಸೂಕ್ತವಾಗಿವೆ. 

 

  • ಗೌರಿ, ಕಾಟ್ಲಾ, ರೋಹು ಮೀನು ಕೃಷಿ: ರೋಹು, ಕಾಟ್ಲಾ, ಗೌರಿ ಮೀನುಗಳು ಹೆಚ್ಚಾಗಿ ಸಿಹಿನೀರಿನಲ್ಲಿ ಬೆಳೆಯುವ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಹೊಂದಿವೆ. ಸಸ್ಯಹಾರಿ ಮೀನುಗಳೆಂದೆ ಗುರುತಿಸಿಕೊಂಡಿರುವ ಇವುಗಳು ಸಿಹಿನೀರಿನಲ್ಲಿ ಸಹಜ ಬೆಳವಣಿಗೆ ಕಾಣುತ್ತವೆ. ಸಿಹಿನೀರಿನಲ್ಲಿ ಸಹಜ ಪ್ರಾಕೃತಿಕ ವಾತಾವರಣಕ್ಕೆ ಸಮೃದ್ಧವಾಗಿ ಬೆಳೆಯುತ್ತವೆ. ಘಟ್ಟದ ಪರಿಸರದಲ್ಲಿ ಈ ಮೀನುಗಳು ಮೀನು ಪ್ರಿಯರ ಪ್ರಥಮ ಆಯ್ಕೆಯಾಗಿವೆ.

 

  • ಟಿಲಾಪಿಯಾ ಮೀನು ಕೃಷಿ: ಟಿಲಾಪಿಯಾ ಸಸ್ಯಾಹಾರಿ ಮೀನು ಜಾತಿಗಳಲ್ಲಿ ಒಂದಾಗಿದೆ. ಇದು ಬಯೋ ಫ್ಲಾಕ್‌ ವ್ಯವಸ್ಥೆಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ . ಉತ್ತಮವಾಗಿ ನಿರ್ವಹಿಸಲಾದ ಬಯೋ ಫ್ಲಾಕ್‌ ತೊಟ್ಟಿಯಲ್ಲಿ, ಟಿಲಾಪಿಯಾ ಜೀವರಾಶಿ 200-300 mt/ha ತಲುಪಬಹುದು. ಅದರ ಮತ್ತು ಕಡಿಮೆ ಬೆಲೆಯಿಂದಾಗಿ ಇದು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದೆ. ಅದರ ಆಕ್ರಮಣಕಾರಿ ಸ್ವಭಾವದಿಂದಾಗಿ, ಇದನ್ನು ಪ್ರಪಂಚದಾದ್ಯಂತ ವಿವಿಧ ಟ್ಯಾಂಕ್‌ಗಳು ಮತ್ತು ಕೊಳಗಳಲ್ಲಿ ಬೆಳೆಸಲಾಗುತ್ತದೆ. ಪರಿಣಾಮವಾಗಿ, ಬಯೋಫ್ಲೋಕ್ ಫಿಶ್ ಫಾರ್ಮ್ ಈ ರೀತಿಯ ಮೀನುಗಳಿಗೆ ಅತ್ಯುತ್ತಮ ಮೂಲಸೌಕರ್ಯವಾಗಿದೆ. 

 

  • ವನ್ನಾಮಿ ಸೀಗಡಿ: ವನ್ನಾಮಿ ಸೀಗಡಿಗಳು ಉಷ್ಣವಲಯದ ಸೀಗಡಿಗಳಾಗಿವೆ. ಇವುಗಳನ್ನು ಸಮಭಾಜಕದ ಸಮೀಪವಿರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕೃತಕ ಕೊಳಗಳಲ್ಲಿ ಕರಾವಳಿಯುದ್ದಕ್ಕೂ ಸಾಕಲಾಗುತ್ತದೆ. GlobalGAP, BAP ಅಥವಾ ASC ಸ್ಟ್ಯಾಂಡರ್ಡ್‌ಗೆ ಅನುಗುಣವಾಗಿ ಈ ಬೇಸಾಯವು ಹೆಚ್ಚು ಸಮರ್ಥನೀಯ ಎಂದು ಪ್ರಮಾಣೀಕರಿಸಲ್ಪಟ್ಟಿದೆ.ಈ ಸೀಗಡಿಗಳು 20 ಸೆಂಟಿಮೀಟರ್ ಉದ್ದದವರೆಗೆ ಬೆಳೆಯುತ್ತವೆ.

 

ಮೆಂಟರ್ಸ್‌ ಹಾಗೂ ಅವರ ವಿವರಣೆ

ಮೀನು ಕೃಷಿಯನ್ನು ಮಾಡಿ ಯಶಸ್ವಿಯಾದ ಮೆಂಟರ್ಸ್‌ ಗಳು ನಮ್ಮೊಂದಿಗೆ ಇದ್ದಾರೆ. ಅವರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

  1. ಡಾ.ಮಾದೇಶ್‌/ ಪವಿತ್ರಾ ರಾಜ್‌ ಗೋಪಾಲ್‌ : ಇವರು ಮೂಲತ: ಚಾಮರಾಜ ಜಿಲ್ಲೆಯ ದಾನಗೆರೆಯವರಾಗಿದ್ದು, ಮೂರು ವರ್ಷದಿಂದ ಈ ಮೀನು ಕೃಷಿಯನ್ನು ಮಾಡುತ್ತಿದ್ದಾರೆ. ಇವರು ಬಯೋಫ್ಲೋಕ್ ಮೀನು, ನೈಸರ್ಗಿಕ ಅಥವಾ ಸಾಂಪ್ರದಾಯಿಕ ಮೀನು ಕೃಷಿಯನ್ನು ಮಾಡುತ್ತಿದ್ದಾರೆ. 9902357351

  2. ಯಶವಂತ ಕುಮಾರ್‌: ಇವರು ಬೆಂಗಳೂರಿನ ಲಿಂಗರಾಜಪುರದವರಾಗಿದ್ದು, ಇವರು ಕಳೆದ ಎರಡು ವರ್ಷದಿಂದ ಲೈವ್ ಮೀನು ಮಾರಾಟ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಇವರು ಟಿಲಾಪಿಯಾ, ಅಕ್ವೇರಿಯಂ ಮೀನುಗಳು, ಅಲಂಕಾರಿಕ ಮೀನುಗಳ ಮಾರಾಟ ಮಾಡುತ್ತಿದ್ದಾರೆ. - 9986999900

  3. ವಿನೋದ್‌ .ಬಿ.ಹೆಚ್‌: ಇವರು ತುಮಕೂರು ಜಿಲ್ಲೆಯವರಾಗಿದ್ದು, ಫೀಡ್ ಮಿಲ್ ಪ್ಲಾಂಟ್ ಅನ್ನು ಹೊಂದಿದ್ದಾರೆ. ಇವರು ಮೀನುಗಳ ಆಹಾರ ತಯಾರಿಕೆ ಮತ್ತು ಪೂರೈಕೆ ಮಾಡುತ್ತಾರೆ. -9972733973

  4. ಶ್ರೀನಿವಾಸ್‌ ರಾವ್:‌ ಇವರು ರಾಯಚೂರು ಜಿಲ್ಲೆಯವರಾಗಿದ್ದು, ಕಳೆದ ಮೂರು ವರ್ಷಗಳಿಂದ ಸಿಗಡಿ ಕೃಷಿಯನ್ನು ಮಾಡುತ್ತಿದ್ದಾರೆ.- 8317443200

  5. ಹೇಮಾರಾಜ್: ಮಂಗಳೂರಿನ ಮುಲ್ಕಿಯವರಾಗಿರುವ ಇವರು ಕೇಜ್‌ ಕಲ್ಚರ್‌ ಮೀನು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.9029615168

  6. ವಿನಯ್‌: ಬೆಂಗಳೂರಿನ ವಿನಯ್‌ ಅವರು ಮೀನು ಕೃಷಿಯನ್ನು ಮಾಡಿ ಎರಡು ಲಕ್ಷಗಳವರೆಗೆ ಸಂಪಾದನೆ ಮಾಡುತ್ತಿದ್ದಾರೆ- 9880677962

  7. ತಿಮ್ಮಪ್ಪ; ಶಿವಮೊಗ್ಗ ಜಿಲ್ಲೆಯವರಾಗಿರುವ ಇವರು ಗೌರಿ ಮೀನಿನ ಕೃಷಿಯನ್ನು ಮಾಡಿಕೊಂಡು ಎಕರೆಗೆ ಐದು ಲಕ್ಷ ರೂ ವರ್ಷಕ್ಕೆ ಆದಾಯವನ್ನು ಪಡೆಯುತ್ತಿದ್ದಾರೆ. - 7899497346

  8. ನಾಗರಾಜ: ನಾಗರಾಜ್‌ ಮೂಲತ: ಹಾಸನ ಜಿಲ್ಲೆಯವರಾಗಿದ್ದು, ಸಮಗ್ರ ಮೀನು ಕೃಷಿ ಮಾಡಿ ಲಾಭದಾಯಕ ಆದಾಯವನ್ನು ಕಂಡುಕೊಂಡಿದ್ದಾರೆ. - 9972846947

  9. ಮಹೇಶ್‌ ಹೆಬ್ಬಾರ್:‌ ಮಹೇಶ್‌ ಹೆಬ್ಬಾರ್‌ ಉಡುಪಿ ಜಿಲ್ಲೆಯವರಾಗಿದ್ದು, ಕಾಟ್ಲಾ ಮೀನು ಸಾಕಣಿಕೆಯಿಂದ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. - 9731531988

  10. ಶೇಕ್‌ ಖಾಲಿದ್‌: ಉಡುಪಿ ಜಿಲ್ಲೆಯವರಾಗಿರುವ ಇವರು ಬಯೋಫ್ಲೋಕ್ ಟಿಲಾಪಿಯಾ ಮೀನು ಸಾಕಣೆಯನ್ನು ಮಾಡುತ್ತಿದ್ದಾರೆ. - 7019385694

  11. ಅಮರ್‌ ಡಿಸೋಜಾ: ಅಮರ್‌ ಡಿಸೋಜಾ ದಕ್ಷಿಣ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಮೀನು ಕೃಷಿಯನ್ನು ಮಾಡಿ ಅಧಿಕ ಲಾಭವನ್ನು ಗಳಿಸುತ್ತಿದ್ದಾರೆ. 9900431066

  12. ಕೌಶಿಕ್:‌ ಉತ್ತರ ಕನ್ನಡ ಜಿಲ್ಲೆಯ ಕೌಶಿಕ್‌ ಸೀ ಬಾಸ್‌ ಹ್ಯಾಚರಿ ಯನ್ನು ಮಾಡುತ್ತಿದ್ದು, ಉತ್ತಮ ಆದಾಯ ಗಳಿಸುತ್ತಿದ್ದಾರೆ. - 7259453337

 

 

ಸಂಬಂಧಿತ ಕೋರ್ಸ್‌ಗಳು