ಈ ಕೋರ್ಸ್ ಒಳಗೊಂಡಿದೆ
ಅಗರ್ ವುಡ್ ಅನ್ನು ವುಡ್ಸ್ ಆಫ್ ಗಾಡ್ ಎಂದು ಕರೆಯುತ್ತಾರೆ. ಇದರ ಎಣ್ಣೆಯನ್ನು ಲಿಕ್ವಿಡ್ ಗೋಲ್ಡ್ ಎಂದು ಸಹ ಕರೆಯಲಾಗುತ್ತದೆ. ಇದು ಆಗ್ನೇಯ ಏಷ್ಯಾದ ಸ್ಥಳೀಯವಾಗಿದೆ. ಈ ಮರವು ಸುಮಾರು 40 ಮೀಟರ್ ನಷ್ಟು ಎತ್ತರ ಮತ್ತು 80 ಸೆಂಟಿಮೀಟರ್ ನಷ್ಟು ಅಗಲ ಬೆಳೆಯುತ್ತದೆ. ಹಲವು ವ್ಯಾವಹಾರಿಕ ಕಾರಣಗಳಿಗೆ ಈ ಮರವು ಹೆಚ್ಚು ಮೌಲ್ಯವನ್ನು ಹೊಂದಿದೆ. ಇದು ಉತ್ತಮ ಪರಿಮಳವನ್ನು ನೀಡುವ ಕಾರಣದಿಂದಾಗಿ ಧೂಪದ್ರವ್ಯ ಮತ್ತು ಸುಗಂಧ ದ್ರವ್ಯಗಳ ತಯಾರಿಕೆಗೆ ಹೆಚ್ಚು ಬಳಸಲಾಗುತ್ತದೆ.
ಅಗರ್ ವುಡ್ ಆರೋಗ್ಯದ ದೃಷ್ಟಿಯಿಂದಲೂ ಸಹ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕಾರಿ, ನೋವು ನಿವಾರಕ, ಸಂಧಿವಾತ ವಿರೋಧಿ ಮತ್ತು ಹಸಿವನ್ನು ಸುಧಾರಿಸುವ ಶಕ್ತಿಯನ್ನು ಹೊಂದಿದೆ. ಇದು ದೇಹದ ಎಲ್ಲಾ ಚಕ್ರಗಳನ್ನು ಜಾಗೃತಿ ಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಆಂಟಿಕ್ಯಾನ್ಸರ್ ಚಿಕಿತ್ಸೆಗಾಗಿ ಸಹ ಬಳಸಲಾಗುತ್ತದೆ. ಇದರ ಜೊತೆಗೆ ಧನಾತ್ಮಕ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯನ್ನು ಸಹ ಅಗರ್ ವುಡ್ ಹೊಂದಿದೆ.
ಈ ಕೃಷಿಯಲ್ಲಿರುವ ಮಾರುಕಟ್ಟೆ ಅವಕಾಶವನ್ನು ಗಮನಿಸಿ ffreedom ಅಪ್ಲಿಕೇಶನ್ ಅಗರ್ ವುಡ್ ಕೃಷಿಯ ಕುರಿತ ಸಮಗ್ರ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಈ ಕೃಷಿಯನ್ನು ಮಾಡಿ ಯಶಸ್ಸನ್ನು ಪಡೆದಿರುವ ಸಾಧಕರು ಅಗರ್ ವುಡ್ ಕೃಷಿಯ ಕುರಿತಂತೆ ಉತ್ತಮ ಮಾರ್ಗದರ್ಶನವನ್ನು ಮಾಡಲಿದ್ದಾರೆ. ಈ ಕೋರ್ಸ್ ಮೂಲಕ ನೀವೂ ಸಹ ಅದರ ಸಂಪೂರ್ಣ ಲಾಭವನ್ನು ಪಡೆಯಬಹುದು.