ಈ ಕೋರ್ಸ್ ಒಳಗೊಂಡಿದೆ
ನಮ್ಮ ಕಡಲೆ ಮೌಲ್ಯವರ್ಧನೆ ಬಿಸಿನೆಸ್ ಕೋರ್ಸ್‌ಗೆ ಸುಸ್ವಾಗತ!
ತಮ್ಮದೇ ಸ್ವಂತ ನೆಲಗಡಲೆ ಮೌಲ್ಯವರ್ಧನೆಯ ಬಿಸಿನೆಸ್ ಅನ್ನು ಆರಂಭಿಸಲು ಬಯಸುವ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕೋರ್ಸ್ ಅನ್ನು ಸಿದ್ಧಪಡಿಸಲಾಗಿದೆ. ಈ ಕೋರ್ಸ್‌ನಲ್ಲಿ ನೀವು ಕೃಷಿ ಉದ್ಯಮದ ಮೂಲಭೂತ ಅಂಶಗಳು ನೆಲಗಡಲೆಗೆ ಹೇಗೆ ಅನ್ವಯಿಸುತ್ತವೆ ಎಂಬುದನ್ನು ಕಲಿಯುತ್ತೀರಿ.
ನೆಲಗಡಲೆಯನ್ನು ಸ್ವಚ್ಛಗೊಳಿಸುವ, ಹುರಿಯುವ ಮತ್ತು ರುಬ್ಬುವ ತಂತ್ರಗಳ ಬಗ್ಗೆ ನೀವು ಪ್ರಾಕ್ಟಿಕಲ್ ಅನುಭವವನ್ನು ಪಡೆದುಕೊಳ್ಳುತ್ತೀರಿ. ಜೊತೆಗೆ ಅಂತಿಮ ಉತ್ಪನ್ನವು ಗ್ರಾಹಕರ ಅಗತ್ಯತೆಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಗುಣಮಟ್ಟದ ನಿಯಂತ್ರಣ ಮಾಡುವುದು ಹೇಗೆ ಎಂದು ತಿಳಿಯುತ್ತೀರಿ. ನಿಮ್ಮ ಉತ್ಪನ್ನಗಳನ್ನು ಪ್ಯಾಕೇಜಿಂಗ್ ಮತ್ತು ಲೇಬಲಿಂಗ್ ಮಾಡುವ ಅಗತ್ಯತೆಗಳ ಬಗ್ಗೆ ಸಹ ಕಲಿಯುತ್ತೀರಿ.
ಕಡಲೆಕಾಯಿ ಉತ್ಪನ್ನಗಳನ್ನು ಉತ್ತೇಜಿಸಿ ಸಹಾಯ ಮಾಡಲು ಮಾರ್ಕೆಟಿಂಗ್ ಮತ್ತು ಸೇಲ್ಸ್ ನ ತಂತ್ರಗಳು, ಹಣಕಾಸಿನ ನಿರ್ವಹಣೆ ಮತ್ತು ದಾಖಲೆಗಳ ಪರಿಷ್ಕರಣೆಯ ಬಗ್ಗೆ ತಿಳಿದುಕೊಳ್ಳುತ್ತೀರಿ.
ನೆಲಗಡಲೆ ಮೌಲ್ಯವರ್ಧನೆ ಬಿಸಿನೆಸ್ ನಲ್ಲಿ ಒಳ್ಳೆಯ ಹೆಸರನ್ನು ಗಳಿಸಿಕೊಂಡು ಯಶಸ್ವಿಯಾಗಿರುವ ಮತ್ತು ಅನುಭವಿ ಉದ್ಯಮಿ ಸಹೋದರರಾದ ಶರಣ್ಯ ರಾಜೇಂದ್ರನ್ ಮತ್ತು ಅಶ್ವತ್ಥ್ ರಾಜೇಂದ್ರನ್ ಅವರು ಈ ಕೋರ್ಸ್‌ಗೆ ಮಾರ್ಗದರ್ಶನ ನೀಡುತ್ತಾರೆ. ಈ ಬಿಸಿನೆಸ್ ಆರಂಭಿಸಿ, ನೆಲಗಡಲೆ ಉದ್ಯಮದಲ್ಲಿ ಯಶಸ್ವಿಯಾಗುವುದು ಹೇಗೆ ಎಂದು ತಿಳಿಯಲು ಅವರ ಮಾರ್ಗದರ್ಶನ ನಿಮಗೆ ಸಹಾಯ ಮಾಡುತ್ತದೆ.
ಕೋರ್ಸ್ ನ ಅಂತ್ಯದ ವೇಳೆಗೆ ಕಡಲೆ ಮೌಲ್ಯವರ್ಧನೆ ಬಿಸಿನೆಸ್ ಆರಂಭಿಸಲು ಅಗತ್ಯವಿರುವ ಉನ್ನತ ಮಟ್ಟದ ಕೌಶಲ್ಯ ಮತ್ತು ಜ್ಞಾನವನ್ನು ಪಡೆದುಕೊಳ್ಳುತ್ತೀರಿ.
ಹಾಗಿದ್ದರೆ ಇನ್ನೇಕೆ ತಡ? ಈ ಕೋರ್ಸ್ ಗೆ ಈಗಲೇ ನೋಂದಣಿ ಮಾಡಿಸಿಕೊಂಡು, ಯಶಸ್ವಿ ಕೃಷಿ ಉದ್ಯಮಿ ಆಗುವತ್ತ ಮೊದಲ ದಾಪುಗಾಲು ಇರಿಸಿ!
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ತಮ್ಮ ಆದಾಯದ ಸ್ಟ್ರೀಮ್‌ಗಳನ್ನು ಇನ್ನಷ್ಟು ಹೆಚ್ಚಳ ಮಾಡಲು ಬಯಸುವ ಉದ್ಯಮಿ ಮತ್ತು ಸಣ್ಣ ಬಿಸಿನೆಸ್‌ನ ಮಾಲೀಕರು
ತಮ್ಮ ಕಡಲೆಕಾಯಿ ಬೆಳೆಗೆ ಮೌಲ್ಯವರ್ಧನೆ ಮಾಡಲು ಆಸಕ್ತಿ ಹೊಂದಿರುವ ರೈತ ಮತ್ತು ಯುವ ಕೃಷಿ ಉತ್ಸಾಹಿಗಳು
ಕೃಷಿ ಬಿಸಿನೆಸ್ ವಲಯದಲ್ಲಿ ಪರಿವರ್ತನೆ ಬಯಸುತ್ತಿರುವ ವೃತ್ತಿಪರ ಕೃಷಿ ಆಸಕ್ತರು
ಕೃಷಿಯಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯಲು ಬಯಸುವ ವಿದ್ಯಾರ್ಥಿ ಮತ್ತು ಪದವೀಧರರು
ಸುಸ್ಥಿರ ಮತ್ತು ಲಾಭದಾಯಕ ಕೃಷಿ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಕೃಷಿ ಉದ್ಯಮದ ಮೂಲಭೂತ ಅಂಶಗಳು ಮತ್ತು ಅವು ಕಡಲೆಕಾಯಿಗೆ ಅವು ಹೇಗೆ ಅನ್ವಯಿಸುತ್ತವೆ
ಕಡಲೆಕಾಯಿ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಮೌಲ್ಯವರ್ಧನೆಯ ಸಂಭಾವ್ಯ ಅವಕಾಶಗಳನ್ನು ಗುರುತಿಸುವುದು
ಕಡಲೆಕಾಯಿ ಉತ್ಪನ್ನಗಳನ್ನು ಉತ್ತೇಜಿಸಲು ಸಹಾಯ ಮಾಡುವ ಮಾರ್ಕೆಟಿಂಗ್ ಮತ್ತು ಮಾರಾಟದ ತಂತ್ರಗಳ ಬಗ್ಗೆ
ಹಣಕಾಸು ನಿರ್ವಹಣೆ ಮತ್ತು ದಾಖಲೆಗಳ ಪರಿಷ್ಕರಣೆ
ಬಿಸಿನೆಸ್ ಪ್ಲಾನ್ ಅನ್ನು ಅಭಿವೃದ್ಧಿಪಡಿಸುವುದು, ಮಾರುಕಟ್ಟೆಯ ಸಂಶೋಧನೆ ಮತ್ತು ಟಾರ್ಗೆಟ್ ಮಾರುಕಟ್ಟೆಯನ್ನು ಗುರುತಿಸುವ ಬಗ್ಗೆ
ಅಧ್ಯಾಯಗಳು
ನಿಮ್ಮ ಮಾರ್ಗದರ್ಶಕರ ಪರಿಚಯ: ಉದ್ಯಮದ ವೃತ್ತಿಪರರಿಂದ ಅಮೂಲ್ಯವಾದ ಒಳನೋಟಗಳನ್ನು ಪಡೆದುಕೊಳ್ಳಿ
ಯಶಸ್ಸಿಗೆ ಸರಿಯಾದ ವೆರೈಟಿಯ ಆಯ್ಕೆ: ಪರಿಪೂರ್ಣವಾದ ಕಡಲೆಕಾಯಿ ವೆರೈಟಿ ಆಯ್ಕೆಯೊಂದಿಗೆ ನಿಮ್ಮ ಇಳುವರಿಯನ್ನು ಹೆಚ್ಚಿಸಿಕೊಳ್ಳಿ
ಕೊಯ್ಲು ಮತ್ತು ಸಂಸ್ಕರಣಾ ತಂತ್ರ: ಕಡಲೆಕಾಯಿಯನ್ನು ಕ್ಷೇತ್ರದಿಂದ ಜನರೆಡೆಗೆ ತೆಗೆದುಕೊಂಡು ಹೋಗುವ ಹಂತಗಳ ಬಗ್ಗೆ ತಿಳಿಯಿರಿ
ಲಾಭದಾಯಕ ತೈಲದ ಗಿರಣಿ ನಿರ್ಮಾಣ: ನಿಮ್ಮ ಸ್ವಂತ ತೈಲದ ಗಿರಣಿ ಆರಂಭಿಸಿ ಲಾಭ ಗಳಿಸಿ
ತೈಲ ಉತ್ಪಾದನೆ ಹೆಚ್ಚಳಕ್ಕೆ ಸಲಹೆ ಸೂಚನೆ: ನಿಮ್ಮ ತೈಲದ ಇಳುವರಿಯನ್ನು ಹೆಚ್ಚಿಸಿ ದಕ್ಷತೆಯನ್ನು ಸುಧಾರಿಸಿಕೊಳ್ಳಿ
ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್: ಪರಿಣಾಮಕಾರಿ ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್‌ನೊಂದಿಗೆ ನಿಮ್ಮ ಉತ್ಪನ್ನ ಎದ್ದು ಕಾಣುವಂತೆ ಮಾಡಿ
ಮಾರಾಟ, ವಿತರಣೆ ಮತ್ತು ಹಣಕಾಸು:ನಿಮ್ಮ ಉತ್ಪನ್ನದ ಮಾರಾಟ ಮತ್ತು ಹಣವನ್ನು ಸುರಕ್ಷಿತಗೊಳಿಸುವುದು ಹೇಗೆ ಎಂದು ತಿಳಿದುಕೊಳ್ಳಿ
ಯೂನಿಟ್ ಎಕನಾಮಿಕ್ಸ್ ಮತ್ತು ಕೊನೆಯ ಮಾತು: ಕಡಲೆ ಬೇಸಾಯದ ವೆಚ್ಚಗಳು ಮತ್ತು ಅಂತಿಮ ಅಂಶಗಳನ್ನು ಅನ್ವೇಷಿಸಿ