ಈ ಕೋರ್ಸ್ ಒಳಗೊಂಡಿದೆ
ಹೆಗ್ಗೆಣಸಿನ ಕೃಷಿಯನ್ನು ಅತ್ಯಂತ ಲಾಭದಾಯಕ ಮತ್ತು ಸುಸ್ಥಿರ ಕೃಷಿ ಎಂದು ಪರಿಗಣಿಸಲಾಗುತ್ತದೆ, ಈ ಗೆಣಸು ಏಷ್ಯಾ ಮತ್ತು ಆಫ್ರಿಕಾ ಖಂಡದ ಸ್ಥಳೀಯ ಸಸ್ಯವಾಗಿದೆ. ಇದು ಯಾಮ್ ಎಂಬ ಪ್ರಜಾತಿಗೆ ಸೇರಿದ ತಳಿ. ಇದರ ಪ್ರಮುಖ ಗುಣವಿಶೇಷ ಏನೆಂದರೆ, ಇವುಗಳ ಆಕಾರ ಆಲೂಗಡ್ಡೆಯ ರೀತಿ ಇದ್ದು, ಬೇಯಿಸಿಕೊಂಡು ವಿವಿಧ ಭಕ್ಷ್ಯಗಳಲ್ಲಿ ತಿನ್ನಬಹುದಾಗಿದೆ. ಈ ಹೆಗ್ಗೆಣಸನ್ನು ಬಳ್ಳಿ ಅಥವಾ ನೆಲದ ಮೇಲೆ ಬೆಳೆಸಬಹುದು.
ಈ ಸಸ್ಯದ ಆಕ್ರಮಣಕಾರಿ ಮನೋಭಾವ ಏನೆಂದರೆ, ಇವುಗಳಿಗೆ ಸರಿಯಾದ ನೀರು ಮತ್ತು ನಿರ್ವಹಣೆ ಸಿಗದಿದ್ದರೆ, ಸುತ್ತಲಿನ ಪರಿಸರ ವ್ಯವಸ್ಥೆಗಳಿಗೆ ಹಾನಿ ಮಾಡುತ್ತದೆ. ಈ ಗೆಡ್ಡೆಗಳು, ಭೂಮಿಗಿಂತ ಹೆಚ್ಚಾಗಿ ಬಳ್ಳಿಯ ಕಾಂಡಗಳು ಮತ್ತು ಬೇರುಗಳ ಮೇಲೆ ಬೆಳೆಯುತ್ತವೆ. ಗೆಡ್ಡೆಗಳು ಬಲಿತು ಅವು ಬಳ್ಳಿಯನ್ನು ಮುರಿದು ಕೆಳಗೆ ಬೀಳುತ್ತವೆ. ಈ ಹೆಗ್ಗೆಣಸಿನ ಮಾರುಕಟ್ಟೆ ಗಾತ್ರವು 2021 ರಲ್ಲಿ USD 61.58 ಶತಕೋಟಿ ಮೌಲ್ಯದ್ದಾಗಿದೆ. ಜನಪದರು, ಈ ಹೆಗ್ಗೆಣಸನ್ನು ಕಾಂಜಂಕ್ಟಿವಿಟಿಸ್, ಅತಿಸಾರ ಮತ್ತು ಭೇದಿಗೆ ಚಿಕಿತ್ಸೆಯ ರೂಪದಲ್ಲಿ ಹೆಗ್ಗೆಣಸನ್ನು ನೀಡುತ್ತಿದ್ದರು. ಈ ಹೆಗ್ಗೆಣೆಸಿನಿಂದ ಚರ್ಮ, ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಗೆಡ್ಡೆಯನ್ನು ಹೈಡ್ರೋಫೋನಿಕ್ಸ್ ಮತ್ತು ಏರೋಪೋನಿಕ್ಸ್ ವಿಧಾನದ ಮೂಲಕ ಬೆಳೆಸಬಹುದು. ಪ್ರಗತಿಪರ ಕೃಷಿಕರು ಈ ಬಳ್ಳಿ ಆಲೂಗಡ್ಡೆಯನ್ನು ಬೆಳೆಸಿ, ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಈ ಕೃಷಿಯ ಬಗ್ಗೆ ತಿಳಿಸಿಕೊಡುವ ಉದ್ದೇಶದಿಂದ ffreedom App ಈ ಕೋರ್ಸ್‌ಅನ್ನು ಸಿದ್ಧಪಡಿಸಿದೆ. ನೀವೂ ಸಹ ಅದರ ಸಂಪೂರ್ಣ ಲಾಭ ಪಡೆದುಕೊಳ್ಳಿ.