ಈ ಕೋರ್ಸ್ ಒಳಗೊಂಡಿದೆ
ನೀವು ಭಾರತದಲ್ಲಿ ನಿಮ್ಮ ಸ್ವಂತ ಜೇನುನೊಣ ಫಾರ್ಮ್ ಅನ್ನು ಪ್ರಾರಂಭಿಸಲು ಬಯಸಿದರೆ, ಈ ಕೋರ್ಸ್ ಅತ್ಯಂತ ಉಪಯುಕ್ತವಾಗಿದೆ. ಭಾರತದಲ್ಲಿ ಜೇನು ಕೃಷಿಯ ಮೇಲೆ ಕೇಂದ್ರೀಕರಿಸಿ, ಉತ್ತಮ ಉದ್ಯಮ ಪ್ರಾರಂಭಿಸಲು ನೀವು ತಿಳಿಯಬೇಕಾದ ಎಲ್ಲ ಮಾಹಿತಿಯನ್ನು ಕಲಿಯುವಿರಿ. ಏಷ್ಯಾಟಿಕ್ ಜೇನುನೊಣವನ್ನು ತುಡುವೆ ಜೇನು ಎಂದೂ ಸಹ ಕರೆಯುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನ ಸುಂದರ ಬೇತಂಪಾಡಿ ಗ್ರಾಮದಲ್ಲಿ ಜೇನು ಕೃಷಿಯಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವ ಮನಮೋಹನ್ ಅವರು ಈ ಕೋರ್ಸ್‌ಗೆ ಮಾರ್ಗದರ್ಶನ ನೀಡಿದ್ದಾರೆ. ನಿಮ್ಮ ಜೇನುಗೂಡುಗಳನ್ನು ಸ್ಥಾಪಿಸುವುದರಿಂದ ಹಿಡಿದು ಕೊಯ್ಲು ಮಾಡುವವರೆಗೆ ನೀವು ಜೇನುಸಾಕಣೆಯ ಸೂಕ್ಷ್ಮತೆಗಳನ್ನು ಅವರು ಕಲಿಸುತ್ತಾರೆ.
ಈ ಕೋರ್ಸ್, ಜೇನುನೊಣಗಳ ಜೀವಶಾಸ್ತ್ರ ಮತ್ತು ನಡವಳಿಕೆಯ ಮೂಲಗಳಿಂದ ಹಿಡಿದು, ಉಪಕರಣ, ಜೇನುಗೂಡಿನ ನಿರ್ವಹಣೆ ಮತ್ತು ಜೇನುತುಪ್ಪದ ಮಾರುಕಟ್ಟೆ ಬಗ್ಗೆ ಸಮಗ್ರ ಮಾಹಿತಿ ಒದಗಿಸುತ್ತದೆ. ನಿಮ್ಮ ಫಾರ್ಮ್‌ಗೆ ಸರಿಯಾದ ಸ್ಥಳವನ್ನು ಹೇಗೆ ಆರಿಸುವುದು, ವರ್ಷಪೂರ್ತಿ ನಿಮ್ಮ ಜೇನುನೊಣಗಳನ್ನು ಹೇಗೆ ಕಾಳಜಿ ವಹಿಸಬೇಕು ಎಂದು ತಿಳಿಸಿಕೊಡುತ್ತದೆ. ನಿಮ್ಮ ಜೇನುತುಪ್ಪವನ್ನು ಮಾರಾಟಕ್ಕೆ ಹೇಗೆ ಸಂಸ್ಕರಿಸುವುದು ಮತ್ತು ಪ್ಯಾಕೇಜ್ ಮಾಡುವುದು ಎಂಬುದನ್ನು ನೀವು ಕಲಿಯುವಿರಿ.
ಈ ಕೋರ್ಸ್‌ನ ಅಂತ್ಯದ ವೇಳೆಗೆ, ನಿಮ್ಮ ಸ್ವಂತ ಯಶಸ್ವಿ ಜೇನುನೊಣ ಫಾರ್ಮ್‌ನೊಂದಿಗೆ ವರ್ಷಕ್ಕೆ 20 ಲಕ್ಷಗಳವರೆಗೆ ಗಳಿಸುವ ಹಾದಿಯಲ್ಲಿ ನೀವು ಹೆಜ್ಜೆ ಇರಿಸುತ್ತೀರಿ. ಹಾಗಾದರೆ ಇನ್ಯಾಕೆ ತಡ? ಇಂದೇ ಕೋರ್ಸ್‌ಗೆ ನೋಂದಾಯಿಸಿ, ಜೇನು ಕೃಷಿಯ ಸಿಹಿ ಮತ್ತು ಲಾಭದಾಯಕ ಜಗತ್ತಿನಲ್ಲಿ ನಿಮ್ಮ ಪಯಣ ಆರಂಭಿಸಿ!
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಭಾರತದಲ್ಲಿ ಜೇನುನೊಣ ಫಾರ್ಮ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
ಅಪಿಕಲ್ಚರ್ ಕೃಷಿಯೊಂದಿಗೆ ತಮ್ಮ ಆದಾಯದ ಮಾರ್ಗಗಳನ್ನು ವೈವಿಧ್ಯಗೊಳಿಸಲು ನೋಡುತ್ತಿರುವ ರೈತರು
ಭಾರತದಲ್ಲಿ ಲಾಭದಾಯಕ ಜೇನು ಕೃಷಿ ಉದ್ಯಮವನ್ನು ಪ್ರವೇಶಿಸಲು ಬಯಸುತ್ತಿರುವ ಉದ್ಯಮಿಗಳು
ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸಲು ಬಯಸುತ್ತಿರುವ ಜೇನುಸಾಕಣೆ ಉತ್ಸಾಹಿಗಳು
ತಮ್ಮ ಹವ್ಯಾಸವನ್ನು ಆದಾಯ ಗಳಿಸುವ ಮಾರ್ಗವನ್ನಾಗಿ ಕನ್ವರ್ಟ್ ಮಾಡಲು ಬಯಸುವ ವ್ಯಕ್ತಿಗಳು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಜೇನುನೊಣ ಜೀವಶಾಸ್ತ್ರ ಮತ್ತು ನಡವಳಿಕೆಯ ಮೂಲಗಳು
ಭಾರತದಲ್ಲಿ ಜೇನು ಫಾರ್ಮ್ ಅನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ತಂತ್ರಗಳು
ಜೇನು ಕೊಯ್ಲು, ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ತಂತ್ರಗಳು
ಜೇನು ಮತ್ತು ಇತರ ಜೇನುಸಾಕಣೆ ಉತ್ಪನ್ನಗಳ ಮಾರುಕಟ್ಟೆ ಮತ್ತು ಮಾರಾಟದ ತಂತ್ರಗಳು
ಸಾಮಾನ್ಯ ಜೇನುನೊಣ ರೋಗಗಳು ಮತ್ತು ಕೀಟಗಳನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಪರಿಣಾಮಕಾರಿ ವಿಧಾನಗಳು
ಅಧ್ಯಾಯಗಳು