ಈ ಕೋರ್ಸ್ ಒಳಗೊಂಡಿದೆ
ಬಿದಿರುಗಳು ಒಂದು ರೀತಿಯ ಹೂಬಿಡುವ ಸಸ್ಯವಾಗಿದ್ದು, ಇದು ಹುಲ್ಲಿನ ಕುಟುಂಬಕ್ಕೆ ಸೇರಿದ್ದಾಗಿದೆ. ಇವುಗಳು ವಿಶ್ವದಲ್ಲೇ ಹೆಚ್ಚು ವೇಗವಾಗಿ ಬೆಳೆಯುವ ಸಸ್ಯವಾಗಿದೆ. ಕೆಲವು ಬಿದಿರುಗಳು ಕೇವಲ ಒಂದು ದಿನದಲ್ಲಿ 90 ಸೆಂ.ಮೀ.ವರೆಗೆ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಪ್ರಪಂಚದಲ್ಲಿ 1400 ಕ್ಕೂ ಹೆಚ್ಚಿನ ಜಾತಿಯ ಬಿದಿರುಗಳು ಇರಬಹುದು ಎಂದು ಅಂದಾಜಿಸಲಾಗಿದೆ.
ಬಿದಿರುಗಳು ಉಷ್ಣವಲಯದ ಮತ್ತು ಸಮಶೀತೋಷ್ಣ ಹವಾಮಾನದಲ್ಲಿ ಹೆಚ್ಚು ಬೆಳೆಯಲಾಗುತ್ತದೆ, ಆದರೆ ಕೆಲವು ತಂಪಿರುವ ಪರ್ವತ ಪ್ರದೇಶದಲ್ಲಿ ಸಹ ಬೆಳೆಯುವುದನ್ನು ಗಮನಿಸಬಹುದಾಗಿದೆ. ಅರಣ್ಯ ಪ್ರದೇಶಗಳಲ್ಲಿ ಇವುಗಳು ಹೆಚ್ಚು ಕಾಣಸಿಗುತ್ತವೆ. ಬಿದಿರುಗಳು 35% ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಮತ್ತು ಇದರಿಂದ ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಬಿದಿರುಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಇವುಗಳು ದೇಶದ ಆರ್ಥಿಕತೆಗೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ. ನಮ್ಮ ದೇಶದ ಈಶಾನ್ಯ ರಾಜ್ಯಗಳಲ್ಲಿ ಬಿದಿರನ್ನು ಹೆಚ್ಚು ಬೆಳೆಯಲಾಗಿತ್ತದೆ. ಬಿದಿರುಗಳು ವ್ಯಾವಹಾರಿಕವಾಗಿ ಉತ್ತಮ ಆದಾಯವನ್ನು ತಂದು ಕೊಡುವ ಸಾಮರ್ಥ್ಯವನ್ನು ಹೊಂದಿದೆ.
ಪ್ರತಿ ವರ್ಷವೂ ಸಹ ಸುಮಾರು 9,000 ಕೋಟಿಯಷ್ಟು ವಾರ್ಷಿಕ ವಹಿವಾಟನ್ನು ಬಿದಿರುಗಳು ಮಾಡುತ್ತವೆ ಎಂದು ವರದಿ ಮಾಡಲಾಗಿದೆ. ಬಿದಿರಿಗೆ ಸುಮಾರು 26 ಮಿಲಿಯನ್ ಮೆಟ್ರಿಕ್ ಟನ್ ನಷ್ಟು ಬೇಡಿಕೆ ಭಾರತದಲ್ಲೇ ಇದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ ಎಂಬುದನ್ನು ಅಂದಾಜಿಸಲಾಗಿದೆ.