ಈ ಕೋರ್ಸ್ ಒಳಗೊಂಡಿದೆ
ಕೋಳಿ ಸಾಕಣೆ ಒಂದು ಲಾಭದಾಯಕ ಉದ್ಯಮವಾಗಿದೆ. ಬಹಳಷ್ಟು ರೈತರು ಕೃಷಿಯ ಜೊತೆ ಜೊತೆಗೆ ಕೋಳಿ ಸಾಕಣೆಯನ್ನು ಮಾಡಿ ಅದರಿಂದ ಹೆಚ್ಚುವರಿ ಆದಾಯವನ್ನು ಗಳಿಸುತ್ತಿದ್ದಾರೆ. ಕೋಳಿ ಸಾಕಣೆಯಲ್ಲಿ ಹಲವಾರು ಸುಧಾರಿತ ತಳಿಗಳಿದ್ದು ಅದರಲ್ಲಿ ಬಿವಿ 380 ಕೋಳಿ ಕೂಡ ಒಂದು ವಿಶೇಷವಾದ ತಳಿಯಾಗಿದೆ. ಈ ಕೋಳಿಗಳು ಬೇರೆ ತಳಿಯ ಕೋಳಿಗಳಿಗಿಂತ ಭಿನ್ನವಾಗಿದೆ ಮತ್ತು ಹಲವು ವಿಶಿಷ್ಟತೆಯನ್ನು ಹೊಂದಿದೆ.
ಈ ತಳಿಯ ಕೋಳಿಗಳು ವರ್ಷಪೂರ್ತಿ ಮೊಟ್ಟೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಣದಿಂದಲೇ ಈ ಕೋಳಿಗೆ ಬಿವಿ 380 ಎಂಬ ಹೆಸರು ಸಹ ಬಂದಿದೆ. ಈ ಕೋಳಿಯ ಮೊಟ್ಟೆಗಳಿಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದೆ. ಬಿವಿ 380 ಕೋಳಿ ಸಾಕಣೆಯ ನಿರ್ವಹಣೆ ವೆಚ್ಚ ಕೂಡ ಕಡಿಮೆ ಇರುವುದರಿಂದ ಇದು ರೈತರಿಗೆ ಉತ್ತಮ ಲಾಭವನ್ನು ತಂದುಕೊಡುತ್ತದೆ.
ಭಾರತದ ಕುಕ್ಕುಟೋದ್ಯಮವು ಬಹಳ ದೊಡ್ಡ ಗಾತ್ರದ ಮಾರುಕಟ್ಟೆಯನ್ನು ಹೊಂದಿದೆ. ಭಾರತದಲ್ಲಿ ಸುಮಾರು 25 ಮಿಲಿಯನ್ ಅಂದರೆ ಸುಮಾರು ಎರಡೂವರೆ ಕೋಟಿ ರೈತರು ಈ ಕೋಳಿ ಸಾಕಣೆಯನ್ನು ಉಪಕಸುಬಾಗಿ ಅಥವಾ ಪೂರ್ಣ ಕಸುಬಾಗಿ ತೆಗೆದುಕೊಂಡಿದ್ದಾರೆ. ಬಹಳಷ್ಟು ಮಂದಿ ರೈತರು ಕೋಳಿ ಸಾಕಾಣಿಕೆಯ ಮೂಲಕವೇ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಪೌಲ್ಟ್ರಿ ಇಂಡಸ್ಟ್ರಿಯು ಸರಾಸರಿ ಸುಮಾರು 18 ಪರ್ಸೆಂಟ್ ವೇಗದಲ್ಲಿ ಬೆಳೆಯುತ್ತಿದೆ. ಭಾರತದಲ್ಲಿ ಈ ಉದ್ಯಮದ ಮಾರುಕಟ್ಟೆ ಗಾತ್ರ ಸುಮಾರು ಸುಮಾರು 97 ಸಾವಿರ ಕೋಟಿಯಷ್ಟಿದೆ.