ಈ ಕೋರ್ಸ್ ಒಳಗೊಂಡಿದೆ
ಜೆರ್ಸಿ ಹಸುವು ಬ್ರಿಟನ್ ಮೂಲದ ವಿದೇಶಿ ತಳಿಯಾಗಿದೆ. ಹೆಚ್ಚು ಹಾಲನ್ನು ನೀಡುವ ಕಾರಣಕ್ಕೆ ಈ ತಳಿಯ ಹಸುಗಳನ್ನು ರೈತರು ಸಾಕಣೆ ಮಾಡಲು ಹೆಚ್ಚು ಆಸಕ್ತಿಯನ್ನು ವಹಿಸುತ್ತಾರೆ. ಎಚ್ ಎಫ್ ಹಸುವಿನ ತಳಿಯ ಹೋಲಿಕೆಯಲ್ಲಿ ಜೆರ್ಸಿ ಹಸುವಿನ ತಳಿಯು ಕಡಿಮೆ ದೇಹದ ಗಾತ್ರವನ್ನು ಹೊಂದಿರುತ್ತವೆ ಮತ್ತು ಇದು ಎಲ್ಲ ರೀತಿಯ ವಾತಾವರಣಕ್ಕೂ ಸಹ ಸುಲಭವಾಗಿ ಹೊಂದಿಕೊಳ್ಳುತ್ತವೆ. ಜೆರ್ಸಿ ಹಸುವಿನ ತಳಿಯು ಎಚ್ ಎಫ್ ಹಸುವಿನ ಹೋಲಿಕೆಯಲ್ಲಿ ಸ್ವಲ್ಪ ಕಡಿಮೆ ಮಟ್ಟದ ಹಾಲಿನ ಇಳುವರಿಯನ್ನು ಹೊಂದಿದೆ.
ಜೆರ್ಸಿ ಹಸುವು ಗಿಡ್ಡದಾದ ತಳಿಯಾಗಿದೆ. ಆದರೆ ಕೇವಲ ಒಂದು ಜೆರ್ಸಿ ಹಸುವಿನ ಹಾಲಿನ ಇಳುವರಿ ಮೂಲಕ ಮಾಸಿಕವಾಗಿ ಸುಮಾರು 15 ಸಾವಿರದಷ್ಟು ಆದಾಯವನ್ನು ಗಳಿಸಬಹುದಾಗಿದೆ. ಉತ್ತಮ ಆರೈಕೆಯ ಮೂಲಕ ಪ್ರತಿ ನಿತ್ಯವೂ ಸಹ 25ರಿಂದ 30 ಲೀಟರ್ ತನಕ ಹಾಲಿನ ಇಳುವರಿಯನ್ನು ಪಡೆಯಬಹುದು. ಪ್ರತಿ ಲೀಟರ್ ಗೆ ಸುಮಾರು 20ರಿಂದ 50 ರೂಪಾಯಿ ವರೆಗಿನ ಬೆಲೆಯನ್ನು ಈ ಹಾಲು ಹೊಂದಿರುತ್ತದೆ. ಒಂದು ವರ್ಷದಲ್ಲಿ ಒಂದು ಹಸುವಿನ ಮೂಲಕ 1 ಲಕ್ಷದ ವೆರೆಗೂ ಸಹ ಆದಾಯವನ್ನು ಗಳಿಸಬಹುದಾಗಿದೆ.
ಈ ಸಾಕಣೆಯಲ್ಲಿರುವ ಆದಾಯದ ಅಂಶವನ್ನು ಗಮನಿಸಿ ffreedom ಅಪ್ಲಿಕೇಶನ್ ಜೆರ್ಸಿ ಹಸು ಸಾಕಣೆ ಕುರಿತಂತೆ ಸಮಗ್ರ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಈ ಸಾಕಣೆಯನ್ನು ಮಾಡಿ ಯಶಸ್ಸನ್ನು ಪಡೆದಿರುವ ಸಾಧಕರು ಜೆರ್ಸಿ ಹಸು ಸಾಕಣೆ ಕುರಿತಂತೆ ಉತ್ತಮ ಮಾರ್ಗದರ್ಶನವನ್ನು ಈ ಕೋರ್ಸ್ ಮೂಲಕ ಮಾಡಲಿದ್ದಾರೆ. ನೀವೂ ಸಹ ಅದರ ಸಂಪೂರ್ಣ ಲಾಭವನ್ನು ಪಡೆಯಬಹುದು.