ಈ ಕೋರ್ಸ್ ಒಳಗೊಂಡಿದೆ
ನಮ್ಮ ರಾಜ್ಯದ ವಿವಿಧ ಪ್ರದೇಶಗಳಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ರೈತ ಸಮೂಹವೇ ಇದೆ. ವಿವಿಧ ಬೆಳೆಗಳಿಗೆ ವಿವಿಧ ವಾತಾವರಣದಲ್ಲಿ ಬೇರೆ ಬೇರೆ ರೀತಿಯ ಕೀಟ ಮತ್ತು ರೋಗ ಬಾದೆಗಳು ಸಾಮಾನ್ಯವಾಗಿ ಕಾಡುತ್ತವೆ. ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳನ್ನು ಕೀಟಗಳು ಅಥವಾ ರೋಗಗಳು ಸಂಪೂರ್ಣ ಹಾಳುಗೆಡವುತ್ತವೆ ಮತ್ತು ಇದರಿಂದ ಕೃಷಿಕರಿಗೆ ಬಹಳಷ್ಟು ನಷ್ಟ ಸಂಭವಿಸುವ ಸಾಧ್ಯತೆ ಇರುತ್ತದೆ.
ರೈತರು ಕೇವಲ ಬೆಳೆ ನಷ್ಟವನ್ನು ಅನುಭವಿಸುವುದಲ್ಲದೆ, ಬೆಳೆಯನ್ನು ಬೆಳೆಯಲು ಖರ್ಚು ಮಾಡಿರುವ ಹಣವನ್ನು ಸಹ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗುತ್ತದೆ. ಇದರಿಂದ ಕೆಲವೊಮ್ಮೆ ರೈತರು ಸಾಲದ ಸುಳಿಯಲ್ಲಿ ಸಿಲುಕುವ ಪರಿಸ್ಥಿತಿಯೂ ಸಹ ಎದುರಾಗತ್ತದೆ. ಹೀಗಾಗಿ ರೈತನು ತನ್ನ ಬೆಳೆಗಳ ಕುರಿತಾಗಿ ಹೆಚ್ಚು ಜಾಗರೂಕತೆಯನ್ನು ವಹಿಸುವ ಅವಶ್ಯಕತೆ ಇರುತ್ತದೆ.
ರೈತರು ಬೆಳೆಗಳನ್ನು ಬೆಳೆಯುವ ಮುಂಚೆ ಆಯಾ ಬೆಳೆಗಳಿಗೆ ಸಾಮಾನ್ಯವಾಗಿ ತಗುಲುವ ಕೀಟಗಳು ಮತ್ತು ರೋಗಗಳು ಯಾವುವು ಮತ್ತು ಅವುಗಳನ್ನು ನಿಯಂತ್ರಿಸುವ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇರುತ್ತದೆ. ಈ ಅಂಶಗಳನ್ನು ಗಮನಿಸಿ ffreedom ಅಪ್ಲಿಕೇಶನ್ ಕೃಷಿ ವಿವಿಯ ತಜ್ಞರ ಸಹಾಯದಿಂದ “ಕೃಷಿಯಲ್ಲಿ ಕೀಟ ಮತ್ತು ರೋಗ ನಿಯಂತ್ರಣ” ಎಂಬ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವೂ ಸಹ ಈ ಕೋರ್ಸ್ ಮೂಲಕ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು.