ಈ ಕೋರ್ಸ್ ಒಳಗೊಂಡಿದೆ
ಮಣ್ಣು ಎಂಬುದು ಒಂದು ಉತ್ತಮವಾದ ನೈಸರ್ಗಿಕ ಸಂಪನ್ಮೂಲವಾಗಿದೆ. ಮಣ್ಣಿನಲ್ಲಿರುವ ಪೌಷ್ಟಿಕಾಂಶದ ಅಂಶ, ಸಂಯೋಜನೆ, ಆಮ್ಲೀಯತೆ, pH ಮಟ್ಟ, ಇತ್ಯಾದಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಮಣ್ಣಿನ ಪರೀಕ್ಷೆಯನ್ನು ನಡೆಸುವುದು ಅವಶ್ಯಕವಾಗಿರುತ್ತದೆ.
ಕೃಷಿ ಭೂಮಿಯ ಮಣ್ಣಿನಲ್ಲಿರುವ ತೇವಾಂಶದ ಪ್ರಮಾಣವನ್ನು ತಿಳಿಯಲು , ಮಣ್ಣಿನ ಕಲುಷಿತ ಪ್ರಮಾಣವನ್ನು ತಿಳಿಯಲು ಮತ್ತು ಬೆಳೆಯ ಉತ್ಪಾದನೆ ಯನ್ನು ಉತ್ತಮವಾಗಿಸಲು ಈ ಮಣ್ಣಿನ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕೆಲವು ಮಣ್ಣಿನ ಪರೀಕ್ಷೆಯನ್ನು ಕೃಷಿ ಭೂಮಿಯಲ್ಲಿ ನಡೆಸಲಾಗುತ್ತದೆ ಮತ್ತು ಕೆಲವು ಪರೀಕ್ಷೆಗಳನ್ನು ಪ್ರಯೋಗಾಲಯದಲ್ಲಿ ನಡೆಸಲಾಗುತ್ತದೆ.
ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಬಳಸಿ ಅಥವಾ ಟ್ರೇ ಗಳ ಮೂಲಕ ಮಣ್ಣಿನ ಮಾದರಿಯನ್ನು ಸಂಗ್ರಹಣೆ ಮಾಡಲಾಗುತ್ತದೆ. ತ್ಯಾಜ್ಯಗಳು ಮತ್ತು ಇತರೆ ಕಸ ಕಡ್ಡಿಗಳನ್ನು ಮಾದರಿ ಮಣ್ಣಿನಿಂದ ಬೇರ್ಪಡು ಮಾಡಲಾಗುತ್ತದೆ. ನಂತರದಲ್ಲಿ ಮಣ್ಣಿನ ಪರೀಕ್ಷೆಯ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ.
ಮಣ್ಣಿನ ಪರೀಕ್ಷೆಯಲ್ಲಿ ಹಲವು ಬಗೆಯ ವಿಧಾನಗಳಿವೆ. ತೇವಾಂಶದ ಪ್ರಮಾಣ ಪರೀಕ್ಷೆ, ಅಟರ್‌ಬರ್ಗ್ ಮಿತಿಗಳ ಪರೀಕ್ಷೆಗಳು, ಮಣ್ಣಿನ ನಿರ್ದಿಷ್ಟ ಗುರುತ್ವಾಕರ್ಷಣೆ, ಮಣ್ಣಿನ ಒಣ ಸಾಂದ್ರತೆ ಇನ್ನು ಮುಂತಾದ ಮಣ್ಣಿನ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ. ಕೃಷಿಯ ವಿವಿಧ ಅವಶ್ಯಕತೆಗೆ ತಕ್ಕಂತೆ ಈ ಪರೀಕ್ಷೆಗಳನ್ನು ಕೈಗೊಳ್ಳಬೇಕಾಗುತ್ತದೆ.
ಈ ಪರೀಕ್ಷೆಗಳ ಬಗ್ಗೆ ಕೃಷಿಕರಿಗೆ ಹೆಚ್ಚು ಅರಿವು ಮೂಡಿಸುವ ನಿಟ್ಟಿನಲ್ಲಿ ffreedom ಅಪ್ಲಿಕೇಶನ್ ಕೃಷಿಯಲ್ಲಿ ಮಣ್ಣಿನ ಪರೀಕ್ಷೆಯ ಮಹತ್ವದ ಕುರಿತಂತೆ ಸಮಗ್ರ ಕೋರ್ಸ್ ಅನ್ನು ತಜ್ಞರ ಸಹಾಯದಿಂದ ಸಿದ್ಧಪಡಿಸಿದೆ. ನೀವೂ ಸಹ ಈ ಕೋರ್ಸ್ ಮೂಲಕ ಅದರ ಸಂಪೂರ್ಣ ಲಾಭವನ್ನು ಪಡೆಯಬಹುದು.