4.5 from 32.5K ರೇಟಿಂಗ್‌ಗಳು
 4Hrs 3Min

ಹೈನುಗಾರಿಕೆ ಕೋರ್ಸ್- 10 ಹಸುಗಳಿಂದ 1.5 ಲಕ್ಷ ಸಂಪಾದಿಸಿ!

ಹೈನುಗಾರಿಕೆಯ ಕಲೆಯನ್ನು ಕಲಿಯಿರಿ ಮತ್ತು ಕೇವಲ 10 ಹಸುಗಳಿಂದ ತಿಂಗಳಿಗೆ 1.5 ಲಕ್ಷದವರೆಗೆ ಗಳಿಸಿ.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Dairy Farming Course Online
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(42)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
4Hrs 3Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು,ಕೆರಿಯರ್ ಬಿಲ್ಡಿಂಗ್ - ಗೈಡ್ , Completion Certificate
 
 

ನಮ್ಮ ಸಮಗ್ರ ಡೈರಿ ಫಾರ್ಮಿಂಗ್ ಕೋರ್ಸ್‌ಗೆ ಸುಸ್ವಾಗತ, ಇಲ್ಲಿ ಯಶಸ್ವಿ ಡೈರಿ ಫಾರ್ಮಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಮತ್ತು ನಡೆಸುವ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನಾವು ನಿಮಗೆ ಕಲಿಸುತ್ತೇವೆ. ನೀವೂ ಸಹ ಡೈರಿ ಫಾರ್ಮಿಂಗ್ ಎಂದರೇನು ಅಥವಾ ಡೈರಿ ಫಾರ್ಮ್ ಅನ್ನು ಹೇಗೆ ಪ್ರಾರಂಭಿಸುವುದು ಎಂದು ತಿಳಿಯಲು ಬಯಸಿದ್ದರೆ, ಈ ಕೋರ್ಸ್ ನಿಮಗೆ ಸೂಕ್ತವಾಗಿದೆ.

ಈ ಕೋರ್ಸ್ ಪಶುಸಂಗೋಪನೆಯ ಬೇಸಿಕ್ಸ್ ನಿಂದ ಹಿಡಿದು ಲಾಭವನ್ನು ಹೆಚ್ಚಿಸುವ ಸುಧಾರಿತ ವ್ಯಾಪಾರ ತಂತ್ರಗಳವರೆಗೆ ಹೈನುಗಾರಿಕೆಯ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತವೆ. ಇದರ ಜೊತೆಗೆ ವಿವಿಧ ರೀತಿಯ ಹಸುಗಳು ಮತ್ತು ಅವುಗಳ ಹಾಲಿನ ಉತ್ಪಾದನೆ, ಹಾಗೆಯೇ ಅವುಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಸಹ ನೀವು ಕಲಿಯುವಿರಿ.

ಆದರೆ ಹೈನುಗಾರಿಕೆಯ ತಾಂತ್ರಿಕ ಅಂಶಗಳ ಜೊತೆಗೆ ಡೈರಿ ಕೃಷಿ ಬಿಸಿನೆಸ್ ನಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದ ನಿಜ ಜೀವನದ ಮಾರ್ಗದರ್ಶಕರ ಯಶಸ್ಸಿನ ಕಥೆಗಳನ್ನು ಸಹ ನಮ್ಮ ಕೋರ್ಸ್ ಒಳಗೊಂಡಿದೆ. ಈ ಕೋರ್ಸ್ ನಲ್ಲಿ ಉಡುಪಿ ತಾಲೂಕು ಕುಕ್ಕೆ ಗ್ರಾಮದ ನಾಗರಾಜ ಪೈ, ಮೈಸೂರು ತಾಲೂಕು ಗೋಪಾಲಪುರದ ದಿಲೀಪ್ ಮತ್ತು ಉಡುಪಿಯ ಚೈತನ್ಯ, ವರುಣ್ ಮತ್ತು ಚಾಣಕೆಗೊಡೆದೊಡ್ಡಿ ಗ್ರಾಮದ ಅಭಿಲಾಷ್ ಅವರು ನಿಮಗೆ ಮಾರ್ಗದರ್ಶನ ಮಾಡಲಿದ್ದಾರೆ. 

ಈ ಅನುಭವಿ ಡೈರಿ ರೈತರು ಲಾಭದಾಯಕ ಡೈರಿ ಕೃಷಿ ಬಿಸಿನೆಸ್ ಅನ್ನು ನಿರ್ಮಿಸಲು ತಮ್ಮ ಸಲಹೆಗಳು ಮತ್ತು ತಂತ್ರಗಳನ್ನು ಹಂಚಿಕೊಳ್ಳುತ್ತಾರೆ. ಸಣ್ಣ ಕಾರ್ಯಾಚರಣೆಯನ್ನು  ದೊಡ್ಡದಾಗಿಸುವುದು ಸೇರಿದಂತೆ ಹಸುವಿನ ಸಗಣಿ ಮುಂತಾದ ಹಾಲಿನ ಉಪಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಆಗುವ ಪ್ರಯೋಜನಗಳು ಮತ್ತು ಅವುಗಳನ್ನು ಹೆಚ್ಚುವರಿ ಆದಾಯದ ಮಾರ್ಗಗಳಾಗಿ ಪರಿವರ್ತಿಸುವುದು ಹೇಗೆ ಎಂಬುದರ ಕುರಿತು ಸಹ ಅವರು ಮಾತನಾಡುತ್ತಾರೆ.

ಹಾಗಾದರೆ, ಲಾಭದಾಯಕ ಡೈರಿ ಫಾರ್ಮ್ ಬಿಸಿನೆಸ್ ಅನ್ನು ಆರಂಭಿಸುವುದು ಹೇಗೆ ಎಂದು ನಮ್ಮ ಈ ಕೋರ್ಸ್ ನಿಮಗೆ ತೋರಿಸುತ್ತದೆ. ಈಗಲೇ ನೋಂದಾಯಿಸಿ ಮತ್ತು ಹೈನುಗಾರಿಕೆಯಲ್ಲಿನ ನಿಮ್ಮ ಪ್ಯಾಷನ್ ಅನ್ನು ಯಶಸ್ವಿ ಮತ್ತು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಿ. 

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ತಮ್ಮದೇ ಆದ ಡೈರಿ ಕೃಷಿ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಡೈರಿ ರೈತರು

  • ಉದ್ಯಮದಲ್ಲಿ ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸಲು ಬಯಸುವ ಪ್ರಸ್ತುತ ಡೈರಿ ರೈತರು

  • ಪಶುಸಂಗೋಪನೆ ಮತ್ತು ಹಾಲು ಉತ್ಪಾದನೆಯಂತಹ ಹೈನುಗಾರಿಕೆಯ ತಾಂತ್ರಿಕ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಜನರು

  • ಮಾರ್ಕೆಟಿಂಗ್ ಮತ್ತು ಲಾಭದಾಯಕತೆ ಸೇರಿದಂತೆ ಡೈರಿ ಕೃಷಿಯ ಬಿಸಿನೆಸ್ ತಂತ್ರಗಳನ್ನು ಅನ್ವೇಷಿಸಲು ಬಯಸುವ ವ್ಯಕ್ತಿಗಳು

  • ಕೃಷಿ ಉದ್ಯಮದಲ್ಲಿ, ನಿರ್ದಿಷ್ಟವಾಗಿ ಹೈನುಗಾರಿಕೆಯಲ್ಲಿ ವೃತ್ತಿ ಅಥವಾ ಬಿಸಿನೆಸ್ ಮಾಡಲು ಬಯಸುವವರು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಸರಿಯಾದ ಹಸು ಆಯ್ಕೆ, ಅವುಗಳ ಆರೋಗ್ಯ ನಿರ್ವಹಣೆ ಮತ್ತು ಹಾಲುಕರೆಯುವ ವ್ಯವಸ್ಥೆ ಬಗ್ಗೆ ಮಾಹಿತಿ

  • ಹಾಲು, ಚೀಸ್ ಮತ್ತು ಹಾಲಿನ ಇತರ ಉಪಉತ್ಪನ್ನಗಳನ್ನು ಒಳಗೊಂಡಂತೆ ಡೈರಿ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವುದು

  • ನಿಮ್ಮ ಡೈರಿ ಕಾರ್ಯಾಚರಣೆಯನ್ನು ಮತ್ತು ಲಾಭವನ್ನು ಹೆಚ್ಚಿಸಲು ಸುಧಾರಿತ ಬಿಸಿನೆಸ್ ತಂತ್ರಗಳು

  • ಆಹಾರ, ಸಂತಾನೋತ್ಪತ್ತಿ ಮತ್ತು ರೋಗ ನಿರ್ವಹಣೆಯಂತಹ ಪಶುಸಂಗೋಪನೆಯ ಪ್ರಾಯೋಗಿಕ ಕೌಶಲ್ಯಗಳು

  • ಗೊಬ್ಬರ ನಿರ್ವಹಣೆ ಮತ್ತು ಹುಲ್ಲುಗಾವಲು ನಿರ್ವಹಣೆ ಸೇರಿದಂತೆ ಡೈರಿ ಕೃಷಿಯ ಉತ್ತಮ ಅಭ್ಯಾಸಗಳು

 

ಅಧ್ಯಾಯಗಳು 

  • ಡೈರಿ ಫಾರ್ಮಿಂಗ್: ಬೇಸಿಕ್ಸ್: ಹೈನುಗಾರಿಕೆ ಮತ್ತು ಅದರ ಲಾಭದಾಯಕತೆಯ ಸಾಮರ್ಥ್ಯದ ಬಗ್ಗೆ ತಿಳಿಯಿರಿ
  • ನಿಮ್ಮ ಡೈರಿ ಫಾರ್ಮಿಂಗ್ ಮಾರ್ಗದರ್ಶಕರನ್ನು ಭೇಟಿ ಮಾಡಿ: ನಿಮ್ಮ ಅನುಭವಿ ಮಾರ್ಗದರ್ಶಕರನ್ನು ಮತ್ತು ಅವರ ಯಶಸ್ಸಿನ ಕಥೆಗಳನ್ನು ತಿಳಿದುಕೊಳ್ಳಿ
  • ನಿಮ್ಮ ಡೈರಿ ಕೃಷಿ ಪ್ರಶ್ನೆಗಳಿಗೆ ಉತ್ತರಗಳು: ಹೈನುಗಾರಿಕೆಯ ಮೂಲಭೂತ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ಪಡೆಯಿರಿ
  • ನಿಮ್ಮ ಡೈರಿ ಫಾರ್ಮಿಂಗ್ ಬಿಸಿನೆಸ್ ಗೆ ಬಂಡವಾಳ: ಡೈರಿ ರೈತರಿಗೆ ಅಗತ್ಯವಿರುವ ಬಂಡವಾಳ ಮತ್ತು ಲಭ್ಯವಿರುವ ಸಾಲಗಳು, ಸರ್ಕಾರಿ ಸೌಲಭ್ಯಗಳು ಮತ್ತು ವಿಮೆಯನ್ನು ಅರ್ಥಮಾಡಿಕೊಳ್ಳಿ
  • ನಿಮ್ಮ ಡೈರಿ ಫಾರ್ಮ್‌ಗಾಗಿ ಪರಿಪೂರ್ಣ ಸ್ಥಳವನ್ನು ಆರಿಸುವುದು: ಸರಿಯಾದ ಸ್ಥಳವನ್ನು ಹೇಗೆ ಆರಿಸುವುದು ಮತ್ತು ನಿಮ್ಮ ಡೈರಿ ಫಾರ್ಮ್‌ಗಾಗಿ ಒಪ್ಪಂದಗಳ ಮಾತುಕತೆ ಮಾಡುವುದು ಹೇಗೆ ಎಂದು ತಿಳಿಯಿರಿ
  • ನ್ಯಾವಿಗೇಟಿಂಗ್ ನಿಯಮಗಳು ಮತ್ತು ಅವಶ್ಯಕತೆಗಳು: ಅಗತ್ಯ ನೋಂದಣಿಗಳು, ಅನುಮತಿಗಳು, ಪರವಾನಗಿಗಳು ಮತ್ತು ಮಾಲೀಕತ್ವದ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಿ
  • ಯಶಸ್ಸಿಗಾಗಿ ನಿಮ್ಮ ಡೈರಿ ಫಾರ್ಮ್ ಅನ್ನು ಸಜ್ಜುಗೊಳಿಸುವುದು: ನಿಮ್ಮ ಡೈರಿ ಫಾರ್ಮ್‌ಗೆ ಅಗತ್ಯವಾದ ಉಪಕರಣಗಳು ಮತ್ತು ಇತರ ಅವಶ್ಯಕತೆಗಳನ್ನು ಅನ್ವೇಷಿಸಿ
  • ನಿಮ್ಮ ಜಾನುವಾರುಗಳ ಆರೈಕೆ: ನಿಮ್ಮ ಜಾನುವಾರುಗಳಿಗೆ ಆಹಾರ, ನೀರು ಮತ್ತು ಶೆಡ್ ಅವಶ್ಯಕತೆಗಳ ಬಗ್ಗೆ ವಿವರವಾಗಿ ತಿಳಿಯಿರಿ
  • ಜಾನುವಾರುಗಳ ಆರೋಗ್ಯವನ್ನು ನಿರ್ವಹಿಸುವುದು: ನಿಮ್ಮ ಜಾನುವಾರುಗಳ ರೋಗ ನಿರ್ವಹಣೆಯ ಒಳನೋಟಗಳನ್ನು ತಿಳಿಯಿರಿ 
  • ನಿಮ್ಮ ಡೈರಿ ಫಾರ್ಮ್‌ಗಾಗಿ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಮತ್ತು ನಿರ್ವಹಿಸುವುದು: ನಿಮ್ಮ ಡೈರಿ ಫಾರ್ಮ್‌ಗಾಗಿ ಸಿಬ್ಬಂದಿಯನ್ನು ಹೇಗೆ ನೇಮಿಸಿಕೊಳ್ಳುವುದು ಮತ್ತು ನಿರ್ವಹಿಸುವುದು ಎಂಬುದನ್ನು ತಿಳಿಯಿರಿ
  • ನಿಮ್ಮ ಡೈರಿ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್: ನಿಮ್ಮ ಡೈರಿ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಮಾಡುವ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳಿ
  • ನಿಮ್ಮ ಡೈರಿ ಬಿಸಿನೆಸ್ ವಿಸ್ತರಿಸುವುದು: ಆನ್‌ಲೈನ್ ಮತ್ತು ಹೋಮ್ ಡೆಲಿವರಿ ಸೇವೆಗಳ ಮೂಲಕ ಹೆಚ್ಚು ಗ್ರಾಹಕರನ್ನು ಆಕರ್ಷಿಸುವುದು ಹೇಗೆ ಎಂದು ತಿಳಿಯಿರಿ
  • ಹೈನುಗಾರಿಕೆಯಲ್ಲಿ ಗರಿಷ್ಠ ಲಾಭ: ಡೈರಿ ಕೃಷಿ ಬಿಸಿನೆಸ್ ನಲ್ಲಿ ಬೆಲೆ ನಿಗದಿ, ವೆಚ್ಚಗಳು ಮತ್ತು ಲಾಭದ ಅಂಶಗಳನ್ನು ಅರ್ಥಮಾಡಿಕೊಳ್ಳಿ

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.