4.4 from 4.5K ರೇಟಿಂಗ್‌ಗಳು
 1Hrs 19Min

ಡೆಕ್ಕನಿ ಕುರಿ ಸಾಕಣೆ ಕೋರ್ಸ್ - ವರ್ಷಕ್ಕೆ 12 ಲಕ್ಷ ಗಳಿಸಿ!

ಯಶಸ್ವಿ ಡೆಕ್ಕನಿ ಕುರಿ ಸಾಕಾಣಿಕೆಯ ರಹಸ್ಯಗಳನ್ನು ಅನ್ವೇಷಿಸಿ ಮತ್ತು ವರ್ಷಕ್ಕೆ 12 ಲಕ್ಷ ಗಳಿಸಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Deccani Sheep Farming Course Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(147)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 19Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

ಯಶಸ್ವಿ ಡೆಕ್ಕನಿ ಕುರಿ ಕೃಷಿಕರಾಗಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸಲು ಡೆಕ್ಕನಿ ಕುರಿ ಸಾಕಣೆ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಡೆಕ್ಕನಿ ಕುರಿ ತಳಿಯು ಕುರಿಗಳಲ್ಲಿ ಹೆಚ್ಚು ಬೇಡಿಕೆಯಿರುವ ತಳಿಯಾಗಿದ್ದು, ಅದರ ಉತ್ತಮ ಗುಣಮಟ್ಟದ ಮಾಂಸ ಮತ್ತು ಉಣ್ಣೆ ಮತ್ತು ವಿವಿಧ ಪರಿಸರಗಳಿಗೆ ಹೊಂದಿಕೊಳ್ಳುವಿಕೆಗೆ ಹೆಸರುವಾಸಿಯಾಗಿದೆ.

ಡೆಕ್ಕನಿ ಕುರಿ ತಳಿಯು ಶುದ್ಧ ಕಪ್ಪು, ಒರಟಾದ ಉಣ್ಣೆಯ ಕುರಿಗಳಾಗಿದ್ದು ಅರೆ-ಶುಷ್ಕ ಪ್ರದೇಶಗಳಲ್ಲಿ ಹೊಂದಿಕೊಳ್ಳುವಿಕೆಗೆ ಮತ್ತು ಕುರಿಮರಿಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಇದನ್ನು ಸ್ಥಳೀಯವಾಗಿ "ನಲ್ಲ ಗೊರ್ರೆ" ಎಂದು ಸಹ ಕರೆಯಲಾಗುತ್ತದೆ ಮತ್ತು ಇದು ಸಾಮಾನ್ಯವಾಗಿ ತೆಲಂಗಾಣ ಮತ್ತು ಸುತ್ತಮುತ್ತಲಿನ ರಾಜ್ಯಗಳ ಡೆಕ್ಕನ್ ಪ್ರದೇಶದಲ್ಲಿ ಕಂಡುಬರುತ್ತದೆ. ಈ ಕೋರ್ಸ್, ಡೆಕ್ಕನಿ ತಳಿ ಸೇರಿದಂತೆ ವಿವಿಧ ರೀತಿಯ ತಳಿಗಳ ಬಗ್ಗೆ ಮತ್ತು ಕೃಷಿಗೆ ಯಾವ ಕುರಿ ತಳಿ ಉತ್ತಮ ಎಂದು ನಿರ್ಧರಿಸುವ ಬಗ್ಗೆ ನೀವು ಇಲ್ಲಿ ಕಲಿಯುವಿರಿ. ಮಾಂಸ ಮತ್ತು ಉಣ್ಣೆ ಉತ್ಪಾದನೆ ಸೇರಿದಂತೆ ಡೆಕ್ಕನಿ ಕುರಿಗಳ ವಿವಿಧ ಉಪಯೋಗಗಳು, ಸಂತಾನೋತ್ಪತ್ತಿ ಮತ್ತು ಕ್ರಾಸ್‌ಬ್ರೀಡಿಂಗ್‌ ಮುಂತಾದವುಗಳ ಬಗ್ಗೆ ನೀವು ಕಲಿಯುವಿರಿ.

ಹೆಚ್ಚುವರಿಯಾಗಿ, ನಿಮ್ಮ ಕುರಿಗಳನ್ನು ಮತ್ತು ಕುರಿ ಉತ್ಪನ್ನಗಳನ್ನು ಹೇಗೆ ಮಾರ್ಕೆಟಿಂಗ್ ಮಾಡುವುದು ಮತ್ತು ಮಾರಾಟ ಮಾಡುವುದು ಎಂಬುದನ್ನು ಈ ಕೋರ್ಸ್ ತಿಳಿಸುತ್ತದೆ, ಇದು ನೀವು ಸ್ವಾವಲಂಬಿಯಾಗಲು ಮತ್ತು ಲಾಭದಾಯಕವಾಗಲು ಸಹಾಯ ಮಾಡುತ್ತದೆ. ಉತ್ತಮ ಗುಣಮಟ್ಟದ ಮಾಂಸ ಮತ್ತು ಉಣ್ಣೆಯನ್ನು ಉತ್ಪಾದಿಸುವ ಮೂಲಕ ಮತ್ತು ಉದ್ಯಮಕ್ಕೆ ಅಮೂಲ್ಯವಾದ ಸೇವೆಯನ್ನು ಒದಗಿಸುವ ಮೂಲಕ ಆರ್ಥಿಕ ಯಶಸ್ಸನ್ನು ಸಾಧಿಸಲು ಈ ಜ್ಞಾನವು ನಿಮಗೆ ಸಹಾಯ ಮಾಡುತ್ತದೆ.

ಅನುಭವಿ ಮತ್ತು ಯಶಸ್ವಿ ರೈತ ಬೀರೇಶ್ ಅವರಿಂದ ಯಶಸ್ವಿ ಡೆಕ್ಕನಿ ಕುರಿ ಸಾಕಾಣಿಕೆಯ ರಹಸ್ಯಗಳನ್ನು ತಿಳಿಯಿರಿ. ಈ ಕೋರ್ಸ್‌ಗೆ ಸೇರುವ ಮೂಲಕ ನಿಜವಾದ ಸಾಧಕರಿಂದ ಸಾಬೀತಾದ ತಂತ್ರಗಳ ಬಗ್ಗೆ ಮಾರ್ಗದರ್ಶನ ಪಡೆದು ಡೆಕ್ಕನಿ ಕುರಿ ಸಾಕಾಣಿಕೆಯಲ್ಲಿ ಮಾಸ್ಟರ್ ಆಗಿ.

ಒಟ್ಟಾರೆಯಾಗಿ, ಕುರಿ ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಮತ್ತು ನಿರ್ದಿಷ್ಟವಾಗಿ ಡೆಕ್ಕನಿ ಕುರಿ ತಳಿ ಸಾಕಣೆ ಕ್ಷೇತ್ರದಲ್ಲಿ ಯಶಸ್ವಿಯಾಗಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಲು ಬಯಸುವವರಿಗೆ ಈ ಕೋರ್ಸ್ ಅತ್ಯುತ್ತಮ ಅವಕಾಶವಾಗಿದೆ.

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಕುರಿ ಸಾಕಾಣಿಕೆಯಲ್ಲಿ ಆಸಕ್ತಿ ಇರುವವರು

  • ಡೆಕ್ಕನಿ ಕುರಿ ಸಾಕಾಣಿಕೆಯಲ್ಲಿ ಪರಿಣತಿ ಹೊಂದಲು ಬಯಸುವ ಮಹತ್ವಾಕಾಂಕ್ಷಿ ರೈತರು

  • ತಮ್ಮ ವ್ಯವಹಾರವನ್ನು ವಿಸ್ತರಿಸಲು ಮುಂದಾಗಿರುವ ಜಾನುವಾರು ಸಾಕಣೆದಾರರು 

  • ಹೆಚ್ಚುವರಿ ಜ್ಞಾನ ಮತ್ತು ಕೌಶಲ್ಯಗಳನ್ನು ಕಲಿಯಲು ಬಯಸುವ ಕೃಷಿ ವಿದ್ಯಾರ್ಥಿಗಳು ಅಥವಾ ವೃತ್ತಿಪರರು

  • ಡೆಕ್ಕನಿ ಕುರಿ ತಳಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವವರು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಯಶಸ್ವಿ ಡೆಕ್ಕನಿ ಕುರಿ ಸಾಕಾಣಿಕೆಗೆ ತಂತ್ರಗಳು

  • ಕೃಷಿಗಾಗಿ ಉತ್ತಮ ಕುರಿಗಳನ್ನು ಹೇಗೆ ನಿರ್ಧರಿಸುವುದು ಎಂದು ತಿಳಿಯಿರಿ

  • ಡೆಕ್ಕನಿ ಕುರಿ ತಳಿಯ ಬಗ್ಗೆ ತಿಳಿಯಿರಿ

  • ಕುರಿ ಸಂತಾನೋತ್ಪತ್ತಿ, ತಳಿಶಾಸ್ತ್ರ, ಪೋಷಣೆ, ಆರೋಗ್ಯ ಮತ್ತು ನಿರ್ವಹಣೆ

  • ಕುರಿ ಸಾಕಾಣಿಕೆಯಲ್ಲಿ ಬಳಸಲಾಗುವ ಇತ್ತೀಚಿನ ತಂತ್ರಜ್ಞಾನಗಳು ಮತ್ತು ತಂತ್ರಗಳು

 

ಅಧ್ಯಾಯಗಳು 

  • ಕೋರ್ಸ್ ಅವಲೋಕನ ಮತ್ತು ಪರಿಚಯ: ಈ ಮಾಡ್ಯೂಲ್, ಕೋರ್ಸ್ ನ ವಿಷಯ, ಉದ್ದೇಶಗಳು ಮತ್ತು ನಿರೀಕ್ಷೆಗಳ ಅವಲೋಕನವನ್ನು ಒದಗಿಸುತ್ತದೆ. 
  • ಮಾರ್ಗದರ್ಶಕರನ್ನು ಭೇಟಿ ಮಾಡಿ: ಈ ಮಾಡ್ಯೂಲ್, ಕೋರ್ಸ್ ಮಾರ್ಗದರ್ಶಕರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಡೆಕ್ಕನಿ ಕುರಿ ಸಾಕಾಣಿಕೆಯಲ್ಲಿ ಅವರ ಸಾಧನೆಯ ಬಗ್ಗೆ ಮಾಹಿತಿ ಒದಗಿಸುತ್ತದೆ.
  • ಡೆಕ್ಕನಿ ಕುರಿ ತಳಿಯನ್ನು ಅರ್ಥಮಾಡಿಕೊಳ್ಳುವುದು: ಈ ಮಾಡ್ಯೂಲ್, ಡೆಕ್ಕನಿ ಕುರಿಯ ಗುಣಲಕ್ಷಣಗಳು, ಉಪಯೋಗಗಳು ಮತ್ತು ಡಿಸ್ಟ್ರಿಬ್ಯುಶನ್ ಸೇರಿದಂತೆ ಡೆಕ್ಕನಿ ಕುರಿ ತಳಿಯ ಬಗ್ಗೆ ಮಾಹಿತಿ ಒದಗಿಸುತ್ತದೆ. 
  • ದೈಹಿಕ ಮತ್ತು ನಡವಳಿಕೆ ಲಕ್ಷಣಗಳು: ಈ ಮಾಡ್ಯೂಲ್, ಡೆಕ್ಕನಿ ಕುರಿ ತಳಿಯ ಉಣ್ಣೆ ಮತ್ತು ಮಾಂಸದ ಗುಣಮಟ್ಟ ಸೇರಿದಂತೆ ದೈಹಿಕ ಮತ್ತು ನಡವಳಿಕೆಯ ಗುಣಲಕ್ಷಣಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.
  • ಡೆಕ್ಕನಿ ಕುರಿಗಳ ಜೀವನ ಚಕ್ರ: ಈ ಮಾಡ್ಯೂಲ್, ಡೆಕ್ಕನಿ ಕುರಿಗಳ ಜೀವನ ಚಕ್ರದ ವಿವಿಧ ಹಂತಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ ಸಂತಾನೋತ್ಪತ್ತಿ, ಗರ್ಭಧಾರಣೆ, ಕುರಿಮರಿ ಮತ್ತು ಪ್ರೌಢವಸ್ಥೆ ಬಗ್ಗೆ ಮಾಹಿತಿ ಸೇರಿವೆ. 
  • ಕುರಿ ಶೆಡ್ ಸ್ಥಾಪಿಸುವುದು: ಈ ಮಾಡ್ಯೂಲ್, ಶೆಡ್ ನ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ.  
  • ಆಹಾರ ಮತ್ತು ನೀರಿನ ನಿರ್ವಹಣೆ: ಈ ಮಾಡ್ಯೂಲ್, ಡೆಕ್ಕನಿ ಕುರಿಗಳ ಪೌಷ್ಟಿಕಾಂಶದ ಅವಶ್ಯಕತೆಗಳ ಬಗ್ಗೆ ಮತ್ತು ನೀರಿನ ಪೂರೈಕೆ, ಆಹಾರ ನಿರ್ವಹಣೆಯ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ.
  • ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ: ಈ ಮಾಡ್ಯೂಲ್, ಡೆಕ್ಕನಿ ಕುರಿಗಳನ್ನು ಸಾಮಾನ್ಯವಾಗಿ ಬಾಧಿಸುವ ರೋಗಗಳ ಬಗ್ಗೆ ಮತ್ತು ಅವುಗಳನ್ನು ತಡೆಗಟ್ಟುವ ಬಗ್ಗೆ ಮಾಹಿತಿ ಒಳಗೊಂಡಿದೆ.
  • ಬೆಲೆ ಮತ್ತು ಮೌಲ್ಯಮಾಪನ ತಂತ್ರಗಳು: ಈ ಮಾಡ್ಯೂಲ್, ಮಾಂಸ ಮತ್ತು ಉಣ್ಣೆ ಸೇರಿದಂತೆ ಡೆಕ್ಕನಿ ಕುರಿಯ ಉತ್ಪನ್ನಗಳಿಗೆ ಬೆಲೆ ನಿಗದಿ ಪಡಿಸುವ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ.
  • ಪ್ರಮೋಷನ್ ಮತ್ತು ಮಾರಾಟ ತಂತ್ರಗಳು: ಈ ಮಾಡ್ಯೂಲ್, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮತ್ತು ಸಾಂಪ್ರದಾಯಿಕ ವಿಧಾನಗಳ ಮೂಲಕ ಡೆಕ್ಕನಿ ಕುರಿಗಳನ್ನು ಮತ್ತು ಅವುಗಳ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ತಿಳಿಸುತ್ತದೆ. 
  • ಫೈನಾನ್ಷಿಯಲ್ ಅನಾಲಿಸಿಸ್ ಮತ್ತು ಪ್ಲಾನಿಂಗ್: ಈ ಮಾಡ್ಯೂಲ್, ಆದಾಯ ಮತ್ತು ಲಾಭದ ಲೆಕ್ಕಾಚಾರಗಳು, ಬಜೆಟಿಂಗ್ ಮತ್ತು ವೆಚ್ಚ ನಿರ್ವಹಣೆ ಸೇರಿದಂತೆ ಡೆಕ್ಕನಿ ಕುರಿ ಸಾಕಾಣಿಕೆಯ ಆರ್ಥಿಕ ಅಂಶಗಳನ್ನು ಒಳಗೊಂಡಿದೆ.
  • ತಜ್ಞರ ಒಳನೋಟಗಳು ಮತ್ತು ಸಲಹೆಗಳು: ಈ ಮಾಡ್ಯೂಲ್, ಡೆಕ್ಕನಿ ಕುರಿ ಸಾಕಾಣಿಕೆ ಬಗ್ಗೆ ಮಾರ್ಗದರ್ಶಕರಿಂದ ಪ್ರಾಯೋಗಿಕ ಸಲಹೆ ಮತ್ತು ಸೂಚನೆಗಳನ್ನು ಒಳಗೊಂಡಿದೆ.  

 

ಸಂಬಂಧಿತ ಕೋರ್ಸ್‌ಗಳು

 
Ffreedom App

ಈಗಲೇ ffreedom app ಡೌನ್‌ಲೋಡ್ ಮಾಡಿ ಮತ್ತು ಕೇವಲ ₹399 ರಿಂದ ಪ್ರಾರಂಭವಾಗುವ ಮತ್ತು ತಜ್ಞರು ಸಿದ್ಧಪಡಿಸಿರುವ 1000ಕ್ಕೂ ಹೆಚ್ಚು ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆಯಿರಿ