ಈ ಕೋರ್ಸ್ ಒಳಗೊಂಡಿದೆ
ಡ್ರ್ಯಾಗನ್ ಹಣ್ಣುಗಳು ಔಷಧೀಯ ಗುಣಗಳನ್ನು ಹೊಂದಿರುವ ಕಾರಣಕ್ಕೆ ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ. ಇದರ ಜೊತೆಗೆ ಈ ಹಣ್ಣನ್ನು ಡಯಟ್ ಬಗ್ಗೆ ಕಾಳಜಿ ಇರುವವರೂ ಸಹ ಡಯಟ್ ಫುಡ್ ಆಗಿ ಇದರ ಸೇವನೆಯನ್ನು ಮಾಡುತ್ತಾರೆ. ಈ ಕಾರಣಕ್ಕೆ ಡ್ರ್ಯಾಗನ್ ಫ್ರೂಟ್ ಗೆ ಹೆಚ್ಚಿನ ಮಾರುಕಟ್ಟೆ ಬೇಡಿಕೆ ಇದೆ. ಈ ಹಣ್ಣನ್ನು ಬೆಳೆಯುವುದರಿಂದ ಉತ್ತಮವಾದ ಲಾಭವನ್ನು ಸಹ ಗಳಿಸಲು ಸಾಧ್ಯವಿದೆ.
ಈ ಹಣ್ಣುಗಳಿಗೆ ನಿರ್ವಹಣೆಯ ಅವಶ್ಯಕತೆ ಹೆಚ್ಚು ಇರುವುದಿಲ್ಲ. ಈ ಕಾರಣಕ್ಕಾಗಿ ಭಾರತದಾದ್ಯಂತ ರೈತರು ಈ ಹಣ್ಣಿನ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಈ ಹಣ್ಣನ್ನು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ತಮಿಳುನಾಡು, ಒಡಿಶಾ, ಗುಜರಾತ್ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಅನೇಕ ಈಶಾನ್ಯ ರಾಜ್ಯಗಳಲ್ಲಿ ಈ ಡ್ರ್ಯಾಗನ್ ಹಣ್ಣಿನ ಕೃಷಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.
ಇತ್ತೀಚಿನ ಒಂದು ವರದಿಯ ಪ್ರಕಾರ, ಡ್ರ್ಯಾಗನ್ ಹಣ್ಣುಗಳನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಸುಮಾರು 3,000-4,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಮತ್ತು ಪ್ರತಿ ವರ್ಷವು ಸರಿಸುಮಾರು 12,000 ಟನ್ ಡ್ರ್ಯಾಗನ್ ಹಣ್ಣುಗಳನ್ನು ಉತ್ಪಾದಿಸುತ್ತಿದೆ. ಈ ಹಣ್ಣಿನ ಮಾರುಕಟ್ಟೆಯು ಪ್ರತಿ ವರ್ಷ ಸುಮಾರು 3.9 ಪರ್ಸೆಂಟ್ CAGR ವೇಗದಲ್ಲಿ ಬೆಳೆಯುತ್ತಿದೆ.