ಈ ಕೋರ್ಸ್ ಒಳಗೊಂಡಿದೆ
ಬಾತುಕೋಳಿ ಸಾಕಣೆಯು ಸಾಂಪ್ರದಾಯಿಕ ವ್ಯಾಪಾರಗಳಲ್ಲಿ ಒಂದಾಗಿದ್ದು ಇದು ಬಹಳ ಹಿಂದಿನಿಂದಲೂ ಈ ಸಾಕಣೆಯನ್ನು ಮಾಡಲಾಗುತ್ತಿದೆ. ಬಾತುಕೋಳಿಯನ್ನು ಅವುಗಳ ಮಾಂಸ ಮತ್ತು ಮೊಟ್ಟೆಗಳಿಗಾಗಿ ಸಾಕಣೆ ಮಾಡಲಾಗುತ್ತದೆ. ಬಾತುಕೋಳಿಗಳನ್ನು ಸಾಕಣೆ ಮಾಡಲು ಕೊಳದ ಅವಶ್ಯಕತೆ ಇದೆ ಎಂದು ಬಹಳಷ್ಟು ಮಂದಿ ತಪ್ಪು ಗ್ರಹಿಸಿದ್ದಾರೆ. ಆದರೆ ಇವುಗಳನ್ನು ಕೊಳಗಳಿಲ್ಲದೆ ಸಹ ಉತ್ತಮವಾಗಿ ಸಾಕಣೆ ಮಾಡಬಹುದು.
ಬಾತುಕೋಳಿಯಲ್ಲಿ ಹಲವು ವಿಭಿನ್ನ ತಳಿಗಳು ಇದೆ. ಈ ಕಾರಣಕ್ಕೆ ಇವುಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ ಮತ್ತು ಇದರ ವ್ಯಾಪಾರವೂ ಸಹ ಲಾಭದಾಯಕವಾಗಿದೆ. ನೀರಿನ ಲಭ್ಯತೆ ಇಲ್ಲದೆ ಬಾತುಕೋಳಿ ಸಾಕಣೆ ಮಾಡಿದರೆ ಅವುಗಳು ಇಡುವ ಮೊಟ್ಟೆಗಳು ಫಲವತ್ತಾಗಿರುವುದಿಲ್ಲ. ಇದರಿಂದ ಮೊಟ್ಟೆಗಳನ್ನು ಮರಿ ಮಾಡಲು ಸಾಧ್ಯವಾಗುವುದಿಲ್ಲ. ಬಾತುಕೋಳಿಗಳು ಸಂತಾನೋತ್ಪತ್ತಿ ಮಾಡಲು ನೀರಿನ ಅಗತ್ಯವಿರುತ್ತದೆ.
ಇತರ ಕೋಳಿ ಸಾಕಣೆ ವ್ಯವಹಾರಗಳಿಗೆ ಹೋಲಿಸಿದರೆ, ಈ ಸಾಕಣೆಯಲ್ಲಿ ಬಾತುಕೋಳಿಗಳನ್ನು ಸರಳವಾಗಿ ಮತ್ತು ಸುಲಭವಾಗಿ ನಿರ್ವಹಣೆ ಮಾಡಬಹುದು. ಇವುಗಳನ್ನು ಕಡಿಮೆ ಸ್ಥಳಾವಕಾಶದಲ್ಲಿ ಸಹ ಉತ್ತಮವಾಗಿ ಸಾಕಣೆ ಮಾಡಬಹುದು ಮತ್ತು ಇವುಗಳು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನು ಸಹ ಹೊಂದಿರುತ್ತವೆ. ಬಾತುಕೋಳಿಗಳು ರಾತ್ರಿ ಮತ್ತು ಬೆಳಿಗ್ಗೆ ಸಮಯದಲ್ಲಿ ಮೊಟ್ಟೆಗಳನ್ನು ಇಡುತ್ತವೆ ಮತ್ತು ಇವುಗಳಿಂದ ಕೃಷಿಕರು ಪ್ರತಿನಿತ್ಯವೂ ಸಹ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ.
ಈ ಸಾಕಣೆಯಲ್ಲಿರುವ ಮಾರುಕಟ್ಟೆ ಅವಕಾಶವನ್ನು ಗಮನಿಸಿ ffreedom ಅಪ್ಲಿಕೇಶನ್ ಬಾತುಕೋಳಿ ಸಾಕಣೆ ಕುರಿತಂತೆ ಸಮಗ್ರ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಈ ಕೋರ್ಸ್ ಮೂಲಕ ನೀವೂ ಸಹ ಇದರ ಸಂಪೂರ್ಣ ಲಾಭವನ್ನು ಪಡೆಯಬಹುದು.