4.5 from 3.4K ರೇಟಿಂಗ್‌ಗಳು
 3Hrs 12Min

10 ಗುಂಟೆ ಕೃಷಿ ಭೂಮಿಯಲ್ಲಿ ವರ್ಷಕ್ಕೆ 50 ಲಕ್ಷ ಗಳಿಸಿ!

ನೀವೂ ಸಹ ನಿಮ್ಮ ಸಣ್ಣ ಕೃಷಿ ಭೂಮಿಯಲ್ಲಿ ಕೃಷಿ ಆರಂಭಿಸಿ ಲಕ್ಷಗಳಲ್ಲಿ ಗಳಿಸಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Farming in Agricultural Land Course Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(43)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 12Min
 
ಪಾಠಗಳ ಸಂಖ್ಯೆ
8 ವೀಡಿಯೊಗಳು
 
ನೀವು ಕಲಿಯುವುದು
Completion Certificate
 
 

(ಪರಿಚಯ)

ಮುಂಚೆ ಕೃಷಿ ಲಾಭದಾಯಕವಲ್ಲ ಎಂದು ಊರು ಬಿಟ್ಟು ಬೇರೆ ಕೆಲಸವನ್ನು ಅರಸಿ ನಗರಗಳಿಗೆ ಯುವಕರು ವಲಸೆ ಹೋಗುತ್ತಿದ್ದರು. ಆದರೆ ಇಂದು ಹೊರದೇಶಗಳಲ್ಲಿ ಕಲಿತು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರೂ ಸಹ ಕೃಷಿಯ ಕಡೆ ಮುಖ ಮಾಡುತ್ತಿದ್ದಾರೆ. ತಮ್ಮ ಭೂಮಿಯಲ್ಲಿ ವಿವಿಧ ರೀತಿಯ ಕೃಷಿಯನ್ನು ಮಾಡಿ ಯಶಸ್ವಿ ಸಹ ಆಗುತ್ತಿದ್ದಾರೆ. ಇದೆಲ್ಲವನ್ನು ನೋಡುವಾಗ ಕೃಷಿಯಿಂದ ಉತ್ತಮ ಮತ್ತು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ ಎಂಬುದು ಅರಿವಾಗುತ್ತದೆ. ಕೃಷಿಯ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದುವುದರಿಂದ ಸಣ್ಣ ಭೂಮಿಯಲ್ಲೂ ಸಹ ಉತ್ತಮ ಆದಾಯವನ್ನು ಪಡೆಯಬಹುದು ಎಂಬುದನ್ನು ನಮ್ಮ ಈ ಕೋರ್ಸ್ ನ ಮಾರ್ಗದರ್ಶಕರು ಸ್ವತಃ ತಾವೇ ಕೃಷಿಯನ್ನು ಮಾಡಿ ತೋರಿಸಿ ಕೊಟ್ಟಿದ್ದಾರೆ. ನೀವು ಸಹ ಈ ಕೋರ್ಸ್ ಮೂಲಕ ಸಣ್ಣ ಭೂಮಿಯಲ್ಲಿ ವಿವಿಧ ರೀತಿಯ ಕೃಷಿಯನ್ನು ಮಾಡಿ ಹೇಗೆ ಉತ್ತಮ ಆದಾಯವನ್ನು ಗಳಿಸಬಹುದು ಎಂಬುದನ್ನು ತಿಳಿದುಕೊಳ್ಳಬಹುದು.      

 

(ಈ ಕೋರ್ಸ್ ಅನ್ನು ಯಾರು ಪಡೆಯಬಹುದು?)

  1. ನೀವು ಕೃಷಿ ಮಾಡಲು ಬಯಸಿದ್ದರೆ, ಈ ಕೋರ್ಸ್ ಮೂಲಕ ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು.
  2. ನೀವು ಕೃಷಿಗೆ ಸಂಬಂಧ ಪಟ್ಟಂತೆ ಉತ್ತಮ ಲಾಭದಾಯಕ ಹೂಡಿಕೆಯನ್ನು ಮಾಡಲು ಹುಡುಕುತ್ತಿದ್ದರೆ, ನೀವು ಕೂಡ ಈ ಕೋರ್ಸ್ ಮೂಲಕ ಪ್ರಯೋಜನವನ್ನು ಪಡೆಯಬಹುದು.
  3. ನಿಮಗೆ ಕೃಷಿಯ ವ್ಯವಹಾರದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿಯಿದ್ದರೆ ನೀವು ಸಹ ಈ ಕೋರ್ಸ್ ಮೂಲಕ ಪ್ರಯೋಜನವನ್ನು ಪಡೆಯಬಹುದು.
  4. ನೀವು ಕೃಷಿಯಲ್ಲಿ ಸ್ವಾವಲಂಬಿಯಾದ ಬದುಕನ್ನು ಕಟ್ಟಿಕೊಳ್ಳಬೇಕು ಅಂದುಕೊಂಡಿದ್ದರೆ ನೀವು ಸಹ ಈ ಕೋರ್ಸ್ ನಿಂದ ಉತ್ತಮ ಲಾಭವನ್ನು ಪಡೆಯಬಹುದು.
  5. ನೀವು ಕೃಷಿಕರಾಗಿದ್ದು, ಕೃಷಿಯಲ್ಲಿ ಹೊಸತನದ ಮಾರ್ಪಾಡನ್ನು ತರುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಲು ಬಯಸಿದ್ದರೆ ನೀವೂ ಸಹ ಈ ಕೋರ್ಸ್ ನಿಂದ ಉತ್ತಮ ಲಾಭವನ್ನು ಪಡೆಯಬಹುದು.
  6. ನೀವು ಈಗಾಗಲೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೆ ಜೊತೆಗೆ ಕೃಷಿಯಲ್ಲಿನ ಇನ್ನಷ್ಟು ಸುಧಾರಿತ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇದ್ದರೆ ನೀವೂ ಸಹ ಈ ಕೋರ್ಸ್ ಮೂಲಕ ಉತ್ತಮ ಪ್ರಯೋಜನವನ್ನು ಪಡೆಯಬಹುದು.

 

(ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳು)

  1. ಕೋರ್ಸ್ ನ ಪರಿಚಯ - ಈ ವಿಭಾಗದಲ್ಲಿ ನೀವು, ಈ ಕೋರ್ಸ್ ನಲ್ಲಿ ಏನೆಲ್ಲಾ ಇದೆ ಹಾಗು ಅದರಿಂದ ನೀವು ಏನೆಲ್ಲ ಕಲಿಯಬಹುದು ಎನ್ನುವ ಬಗ್ಗೆ ಮಾಹಿತಿಯನ್ನು ಪಡೆಯುತ್ತೀರಿ.
  2. ಮಾರ್ಗದರ್ಶಕರ ಪರಿಚಯ - ಈ ವಿಭಾಗದಲ್ಲಿ ನೀವು ಈ ಕೋರ್ಸ್ ನ ಮಾರ್ಗದರ್ಶಕರ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ. ಅವರು ಕೃಷಿಯನ್ನು ಯಾಕೆ ಶುರು ಮಾಡಿದರು. ಕೃಷಿಯನ್ನು ಮಾಡಲು ಅವರಿಗೆ ಪ್ರೇರೇಪಣೆ ಏನು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ ಮತ್ತು ಕೃಷಿಯಿಂದ ಎಷ್ಟು ಲಾಭವನ್ನು ಅವರು ಗಳಿಸುತ್ತಿದ್ದಾರೆ. ಕೃಷಿಯಲ್ಲಿ ಅವರು ಎದುರಿಸಿದ ಸವಾಲುಗಳೇನು ಮತ್ತು ಅದನ್ನು ಸಮರ್ಥವಾಗಿ ಹೇಗೆ ಎದುರಿಸಿ ಸಾಧನೆ ಮಾಡಿದರು ಎಂಬುದರ ಬಗ್ಗೆ ವಿವರವಾಗಿ ಈ ಕೋರ್ಸ್ ನಲ್ಲಿ ತಿಳಿದುಕೊಳ್ಳುತ್ತೀರಿ.
  3. ಕೋಳಿ ಸಾಕಣೆ - ಕೋಳಿ ಸಾಕಣೆ ಒಂದು ಉತ್ತಮ ಮತ್ತು ಲಾಭದಾಯಕ ಸಾಕಣೆ ಎನ್ನಬಹುದು. ಕೋಳಿ ಸಾಕಣೆ ಮೂಲಕ ಹೆಚ್ಚಿನ ಆದಾಯವನ್ನು ಪಡೆಯಬಹುದು. ನಮ್ಮ ಮಾರ್ಗದರ್ಶಕರು ಸಹ ಅವರ 10 ಗುಂಟೆ ಜಾಗದಲ್ಲಿ ಇತರೆ ಸಾಕಣೆಗಳ ಜೊತೆಗೆ ಕೋಳಿ ಸಾಕಾಣೆಯನ್ನು ಸಹ ಮಾಡುತ್ತಿದ್ದಾರೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಸಣ್ಣ ಪ್ರಮಾಣದಲ್ಲಿ ಕೋಳಿಗಳನ್ನು ಸಾಕಣೆಯನ್ನು ಪ್ರಾರಂಭಿಸುವುದು ಒಳಿತು. ಕೋಳಿ ಸಾಕಣೆಯಿಂದ ದಿನವೂ ಸಹ ಸಣ್ಣ ಪ್ರಮಾಣದ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. ಉತ್ತಮ ತಳಿಯ ಕೋಳಿಯನ್ನು ಆಯ್ಕೆ ಮಾಡುವುದರಿಂದ ಉತ್ತಮ ಲಾಭವನ್ನು ಗಳಿಸಬಹುದು. ಕೋಳಿಗಳಿಗೆ ಯಾವಾಗಲೂ ಸಹ ಮಾರುಕಟ್ಟೆಯಲ್ಲಿ ಬೇಡಿಕೆ ಇರುತ್ತದೆ. ನಮ್ಮ ಮಾರ್ಗದರ್ಶಕರೂ ಸಹ ಈ ಕೋಳಿ ಸಾಕಣೆಯನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡು ಅದರಿಂದ ಅಧಿಕ ಲಾಭವನ್ನು ಗಳಿಸುತ್ತಿದ್ದಾರೆ.      
  4. ಕುರಿ ಸಾಕಣೆ - ಕುರಿ ಸಾಕಣೆ ಸಹ ಒಂದು ಉತ್ತಮವಾದ ಲಾಭದಾಯಕ ಸಾಕಣೆ ಎನ್ನಬಹುದು. ಕುರಿ ಸಾಕಣೆಯಿಂದ ಹಲವು ರೀತಿಯ ಪ್ರಯೋಜನವನ್ನು ಪಡೆಯಬಹುದು. ಇದನ್ನು ಸಾಕಣೆ ಮಾಡುವುದರಿಂದ ಉಣ್ಣೆ, ಹಾಲು ಮತ್ತು ಮಾಂಸದ ಮೂಲಕ ಸಹ ಆದಾಯವನ್ನು ಗಳಿಸಬಹುದು. ಕುರಿಗಳನ್ನು ನಿರ್ವಹಣೆ ಮಾಡುವುದು ಸಹ ಸುಲಭ ಎಂದು ಹೇಳಬಹುದು. ಉತ್ತಮ ತಳಿಯ ಕುರಿಗಳನ್ನು ಸಾಕಣೆಗೆ ಆಯ್ಕೆ ಮಾಡುವುದು ಸಹ ಲಾಭದಾಯಕ ವಾಗಿರುತ್ತದೆ. ನಮ್ಮ ಮಾರ್ಗದರ್ಶಕರೂ ಸಹ ಈ ಕುರಿ ಸಾಕಣೆಯನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡು ಅಧಿಕ ಲಾಭವನ್ನು ಗಳಿಸುತ್ತಿದ್ದಾರೆ.    
  5. ಹೈನುಗಾರಿಕೆ - ಕೃಷಿಯ ಉಪಕಸುಬು ಗಳಲ್ಲಿ ಹೈನುಗಾರಿಕೆ ಭಾರತದ ಪ್ರತಿ ರೈತನ ಪ್ರಥಮ ಆಯ್ಕೆ ಎಂದೇ ಹೇಳಬಹುದು. ಹಸುಗಳನ್ನು ನಮ್ಮ ದೇಶದಲ್ಲಿ ಪೂಜ್ಯ ಭಾವನೆಯಿಂದ ಕಾಣುವುದರಿಂದ ಹೈನುಗಾರಿಕೆಗೆ ವಿಶೇಷ ಸ್ಥಾನ ಇದೆ ಎಂದು ಹೇಳಬಹುದು. ಹೈನುಗಾರಿಕೆಯು ಸಹ ದೊಡ್ಡದಾದ ಮಾರುಕಟ್ಟೆಯನ್ನು ಹೊಂದಿದೆ. ಹಾಲಿನ ಒಕ್ಕೂಟಗಳು ರೈತರಿಂದ ಹಾಲನ್ನು ಪಡೆದು ಅದನ್ನು ಪ್ಯಾಕೆಟ್ ಮೂಲಕ ಮಾರಾಟ ಮಾಡುತ್ತಾರೆ. ಇದರ ಜೊತೆಗೆ ಹೆಚ್ಚುವರಿ ಹಾಲನ್ನು ವಿವಿಧ ಹಾಲಿನ ಉತ್ಪನ್ನಗಳ ತಯಾರಿಕೆಗೆ ಬಳಸುತ್ತಾರೆ. ಹಾಗಾಗಿ ಹೈನುಗಾರಿಕೆಯು ಸಹ ಪ್ರತಿ ರೈತನಿಗೆ ಲಾಭವನ್ನು ನೀಡುತ್ತದೆ. ಹಾಲನ್ನು ಡೈರಿಗಳಿಗೆ ಮಾರಾಟ ಮಾಡುವ ಮೂಲಕ ಪ್ರತಿ ನಿತ್ಯವೂ ಸಹ ಉತ್ತಮ ಆದಾಯವನ್ನು ಪಡೆಯಬಹುದು. ನಮ್ಮ ಮಾರ್ಗದರ್ಶಕರೂ ಸಹ ಹೈನುಗಾರಿಕೆಯನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡು ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ.    
  6. ಮೀನು ಕೃಷಿ ಪ್ರಾಯೋಗಿಕ ವಿವರಣೆ - ಇತ್ತೀಚಿನ ದಿನಗಳಲ್ಲಿ ಮೀನು ಸಾಕಣೆ ಮಾಡಲು ಹಲವಾರು ಹೊಸ ವಿಧಾನಗಳು ಸೇರ್ಪಡೆಗೊಂಡಿವೆ. ನಮ್ಮ ಮಾರ್ಗದರ್ಶಕರು RAS ಟೆಕ್ನೋಲಜಿ ಬಳಸಿಕೊಂಡು ಮೀನು ಸಾಕಣೆಯನ್ನು ಮಾಡುತ್ತಿದ್ದಾರೆ. ನಮ್ಮ ಮಾರ್ಗದರ್ಶಕರು ಮೀನು ಸಾಕಣೆ ಮಾಡಲು ತಿಲಾಪಿಯ ತಳಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ತಿಲಾಪಿಯ ತಳಿಯನ್ನು ಆಯ್ಕೆ ಮಾಡಲು ಪ್ರಮುಖ ಉದ್ದೇಶ ಇವುಗಳಲ್ಲಿ ಮೋರ್ಟಾಲಿಟಿ ರೇಟ್ ಕಮ್ಮಿ ಇರುತ್ತದೆ. ಹಾಗಾಗಿ ಈ ಮೀನಿನ ತಳಿಗಳಲ್ಲಿ ಮರಣ ಪ್ರಮಾಣ ಕಮ್ಮಿಇರುತ್ತದೆ. ಕೆಲವು ಬಾರಿ ಆಕ್ಸಿಜನ್ ಇರದಿದ್ದರೂ ಅಥವಾ ಕೆಲವು ಬಾರಿ ಆಹಾರದ ಪೂರೈಕೆಯಲ್ಲಿ ಏರುಪೇರಾದರೂ ಅವುಗಳನ್ನು ಎದುರಿಸಿ ಜೀವಿಸುವ ಶಕ್ತಿಯನ್ನು ಈ ತಳಿಯ ಮೀನುಗಳು ಹೊಂದಿರುತ್ತವೆ.
  7. ಜೇನು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ - ಜೇನು ಕೃಷಿಯನ್ನು ಸಹ ನಮ್ಮ ಮಾರ್ಗದರ್ಶಕರು ಅಳವಡಿಸಿಕೊಂಡಿದ್ದಾರೆ. ಇದರ ಮೂಲಕ ಅವರು ಮಾಸಿಕ ಆದಾಯವನ್ನು ಸಹ ಗಳಿಸುತ್ತಿದ್ದಾರೆ. ಜೇನು ಸಾಕಣೆ ಸಾಮಾನ್ಯವಾಗಿ ಇಳುವರಿಯನ್ನು ಹೆಚ್ಚು ನೀಡುವ ಸಾಕಣೆ ಆಗಿದೆ. ಜೇನು ತುಪ್ಪವನ್ನು ಮಾರಾಟ ಮಾಡುವ ಮೂಲಕ ಇದರಿಂದ ಆದಾಯವನ್ನು ಗಳಿಸಬಹುದು. ಇದೆಲ್ಲದರ ಜೊತೆಗೆ ಜೇನುಗಳನ್ನು ಬ್ರೀಡ್ ಮಾಡುವ ಮೂಲಕ ಸಹ ಉತ್ತಮ ಆದಾಯವನ್ನು ಗಳಿಸಬಹುದು. ಜೇನು ಕುಟುಂಬಗಳನ್ನು ಹೆಚ್ಚು ಹೆಚ್ಚು ಬೆಳೆಸುವುದರಿಂದ ಮತ್ತು ಅವುಗಳನ್ನು ಮಾರಾಟ ಮಾಡುವುದರಿಂದ ಉತ್ತಮ ವ್ಯವಹಾರವನ್ನು ಮಾಡಲು ಸಾಧ್ಯವಾಗುತ್ತದೆ.

 

(ನೀವು ಫ್ರೀಡಂ ಅಪ್ ನಿಂದ ಈ ಕೋರ್ಸ್ ಅನ್ನು ಏಕೆ ತೆಗೆದುಕೊಳ್ಳಬೇಕು)

10 ಗುಂಟೆ ಕೃಷಿ ಭೂಮಿಯಲ್ಲಿ ವರ್ಷಕ್ಕೆ 50 ಲಕ್ಷ ಗಳಿಸಿ ಎಂಬ ಕೋರ್ಸ್ ಅನ್ನು ನೀವು ffreedom app ನಿಂದ ಯಾಕೆ ತೆಗೆದುಕೊಳ್ಳಬೇಕು ಅಂದರೆ, ಈ ಕೋರ್ಸ್ ನಲ್ಲಿ ಮಾರ್ಗದರ್ಶಕರಾಗಿ ನಿಮಗೆ ಮಾರ್ಗದರ್ಶನ ಮಾಡುವವರು ಪ್ರಭಾಕರ ಹುಳಿಯಾರ್ ಅವರು. ಇವರು ಮೂಲತಃ ತುಮಕೂರು ಜಿಲ್ಲೆಯ ಹುಳಿಯಾರಿನ ನಿವಾಸಿ. ಬಡ ರೈತ ಕುಟುಂಬದಲ್ಲಿ ಜನಿಸಿದ ಇವರು ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೃಷಿ ಕ್ಷೇತ್ರದಲ್ಲಿ ಏನಾದರು ಸಾಧನೆ ಮಾಡಬೇಕೆಂಬ ಹಂಬಲ ಅವರಲ್ಲಿತ್ತು. ಅದರಂತೆ, 1 ರಿಂದ 1. 5 ಎಕರೆ ಭೂಮಿಯಲ್ಲಿ ಬಾಳೆ ಬೆಳೆಸುವ ಪ್ರಯತ್ನದಲ್ಲಿ ಇವರು ವಿಫಲರಾಗುತ್ತಾರೆ. ಆದರೆ ಛಲಬಿಡದೆ ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಂಡ ಇವರು ಬೆಂಗಳೂರಿನಲ್ಲಿ ಲಕ್ಷಗಟ್ಟಲೆ ಸಂಬಳ ಪಡೆಯುತ್ತಿದ್ದ ಉದ್ಯೋಗಕ್ಕೆ ಗುಡ್ ಬೈ ಹೇಳಿ ಮತ್ತೆ ತಮ್ಮ ಹಳ್ಳಿಗೆ ಹೋಗಿ ಕೃಷಿಯಲ್ಲಿ ತೊಡಗುತ್ತಾರೆ ಮತ್ತು ಅದರಲ್ಲಿ ಯಶಸ್ಸನ್ನು ಸಹ ಪಡೆಯುತ್ತಾರೆ. ಈ ಹಿಂದೆ ಕೇವಲ 4 ಗುಂಟೆ ಕೃಷಿ ಭೂಮಿಯಲ್ಲಿ ಸಮಗ್ರ ಕೃಷಿ ಮಾಡಿ ವರ್ಷಕ್ಕೆ 15 ಲಕ್ಷ ಆದಾಯ ಗಳಿಸುತ್ತಿದ್ದರು. ಹೀಗೆಯೇ ಕೃಷಿಯಲ್ಲಿ ಹಂತ ಹಂತವಾಗಿ ಪ್ರಗತಿ ಸಾಧಿಸಿದ ಅವರು ಈಗ ಕೇವಲ 10 ಗುಂಟೆ ಜಮೀನಿನಲ್ಲಿ ಕೋಳಿ, ಕುರಿ, ಜೇನು, ಮೀನು ಕೃಷಿ ಮಾಡಿ ವರ್ಷಕ್ಕೆ 50 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇದಲ್ಲದೇ ಕೃಷಿಯಲ್ಲಿನ ಸಾಧನೆಗಾಗಿ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ಇದರ ಜತೆಗೆ ಕೇವಲ 7 ಗುಂಟೆ ಪ್ರದೇಶದಲ್ಲಿ RAS ಪದ್ಧತಿಯಲ್ಲಿ ಮೀನು ಕೃಷಿ ಮಾಡಿ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದು, ಮೀನು ಸಾಕಾಣಿಕೆಯ ಸಾಧನೆಗಾಗಿ ಫ್ರೀಡಂ ಅವಾರ್ಡ್ ಕೂಡ ಪಡೆದಿದ್ದಾರೆ. ಇವರು ಈ ಕೋರ್ಸ್ ನ ಮೂಲಕ ನಿಮಗೆ ಕೃಷಿಯ ಕುರಿತಂತೆ ಮಾರ್ಗದರ್ಶನ ಮಾಡುತ್ತಾರೆ. ನೀವು ಸಹ ಅವರ ಮಾರ್ಗದರ್ಶನದಿಂದ ಸಣ್ಣ ಭೂಮಿಯಲ್ಲಿ ಕೃಷಿಯನ್ನು ಪ್ರಾರಂಭಿಸಿ ಲಕ್ಷಗಳಲ್ಲಿ ಆದಾಯ ಪಡೆಯಬಹುದು.  

 

   (ನೀವು ಈ ಕೋರ್ಸ್ ನಿಂದ ಏನನ್ನು ಕಲಿಯುತ್ತೀರಿ)

ಈ ಕೋರ್ಸ್ ಮೂಲಕ ನೀವು,

  1. ಕೇವಲ 10 ಎಕರೆ ಭೂಮಿಯಲ್ಲಿ ವರ್ಷಕ್ಕೆ 50 ಲಕ್ಷ ಗಳಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುತ್ತೀರಿ.
  2. ಸಮಗ್ರ ಕೃಷಿಯೊಂದಿಗೆ ಮೌಲ್ಯವನ್ನು ಸೇರಿಸುವ ಮೂಲಕ ಆದಾಯವನ್ನು ಹೇಗೆ ಹೆಚ್ಚಿಸುವುದು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ.
  3. ಕೃಷಿ ಭೂಮಿಯ ಬೆಳೆಗಳನ್ನು ಮಾರುಕಟ್ಟೆ ಮಾಡುವುದು ಮತ್ತು ಮಾರಾಟ ಮಾಡುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ.
  4.  ಸಮಗ್ರ ಕೃಷಿಯಲ್ಲಿ ಕೋಳಿ, ಕುರಿ, ಮೀನು, ಜೇನು ಮತ್ತು ಹೈನುಗಾರಿಕೆಯನ್ನು ಹೇಗೆ ನಿರ್ವಹಿಸುವುದು ಮತ್ತು ಆದಾಯ ಗಳಿಸುವುದು ಎಂಬುದನ್ನು ತಿಳಿದುಕೊಳ್ಳುತ್ತೀರಿ.
  5. ಸಣ್ಣ ಪ್ರಮಾಣದ ಸಮಗ್ರ ಕೃಷಿಗೆ ಎಷ್ಟು ಬಂಡವಾಳದ ಅಗತ್ಯವಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ.  
  6. ಪಶುಸಂಗೋಪನೆಯಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸುವುದು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ.

 

ಸಂಬಂಧಿತ ಕೋರ್ಸ್‌ಗಳು

 
Ffreedom App

ಈಗಲೇ ffreedom app ಡೌನ್‌ಲೋಡ್ ಮಾಡಿ ಮತ್ತು ಕೇವಲ ₹399 ರಿಂದ ಪ್ರಾರಂಭವಾಗುವ ಮತ್ತು ತಜ್ಞರು ಸಿದ್ಧಪಡಿಸಿರುವ 1000ಕ್ಕೂ ಹೆಚ್ಚು ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆಯಿರಿ