ಈ ಕೋರ್ಸ್ ಒಳಗೊಂಡಿದೆ
ffreedom Appನಲ್ಲಿ ಲಭ್ಯವಿರುವ ನಮ್ಮ ಸಮಗ್ರ ಮೀನು ಸಾಕಣೆ ಕೋರ್ಸ್‌ನೊಂದಿಗೆ ಮೀನು ಸಾಕಾಣಿಕೆಯ ರೋಮಾಂಚಕಾರಿ ಜಗತ್ತಿನಲ್ಲಿ ಮುಳುಗೇಳಿ! ಮೀನು ಸಾಕಾಣಿಕೆ ಬಿಸಿನೆಸ್ ಪ್ರಾರಂಭಿಸಲು ಅಥವಾ ಅಕ್ವಾಕಲ್ಚರ್ ಮತ್ತು ಫಿಶ್ ಕಲ್ಚರ್ ಬಗ್ಗೆ ತಮ್ಮ ಅಸ್ತಿತ್ವದಲ್ಲಿರುವ ಜ್ಞಾನವನ್ನು ವಿಸ್ತರಿಸಲು ಆಸಕ್ತಿ ಹೊಂದಿರುವ ಯಾರಿಗಾದರೂ ಈ ಕೋರ್ಸ್ ಸೂಕ್ತವಾಗಿದೆ.
ತಜ್ಞರು ಮತ್ತು ಮೀನುಗಾರಿಕೆ ಇಲಾಖೆಯ ಅನುಭವಿ ಸಹಾಯಕ ಪ್ರಾಧ್ಯಾಪಕರಾದ ಡಾ. ಎ.ವಿ. ಸ್ವಾಮಿ ಅವರ ಮಾರ್ಗದರ್ಶನದೊಂದಿಗೆ ಮತ್ತು ತಿಮ್ಮಪ್ಪ, ಮಧು, ಅಮರ್ ಡಿಸೋಜಾ ಮತ್ತು ವಿನಯ್ ಅವರ ಪ್ರೇರೇಪಿಸುವ ಯಶಸ್ಸಿನ ಕಥೆಗಳ ಮೂಲಕ, ನೀವು ಮೀನು ಸಾಕಾಣಿಕೆ ಮತ್ತು ಮೀನು ಸಾಕಾಣಿಕೆ ಉದ್ಯಮದಲ್ಲಿ ಹೇಗೆ ಯಶಸ್ವಿಯಾಗಬಹುದು ಎಂಬುದರ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯುತ್ತೀರಿ.
ಶಿವಮೊಗ್ಗ ಜಿಲ್ಲೆಯ ಸಾಗರದ ಮಧು ಅವರು ಚಿಕ್ಕಮಗಳೂರಿನಲ್ಲಿ ಜಮೀನು ಖರೀದಿಸಿ ಹೋಂಸ್ಟೇ ಬಿಸಿನೆಸ್ ಜೊತೆಗೆ ಮೀನು ಸಾಕಾಣಿಕೆಯನ್ನು ಯಶಸ್ವಿಯಾಗಿ ಆರಂಭಿಸಿದ್ದಾರೆ. ಕಾಫಿ ಕೃಷಿಯೊಂದಿಗೆ ಹಂದಿ ಸಾಕಾಣಿಕೆ ಹಾಗೂ ಮೀನು ಸಾಕಾಣಿಕೆಯನ್ನು ಮೇಳೈಸಿ ಸಮಗ್ರ ಕೃಷಿಯಲ್ಲಿ ಚಿಕ್ಕಮಗಳೂರಿನ ಅಮರ್ ಡಿಸೋಜ ಯಶಸ್ಸು ಸಾಧಿಸಿದ್ದು ಹೇಗೆ ಎಂಬುದನ್ನು ತಿಳಿಯಿರಿ. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ವಿನಯ್, ಮೀನು ಸಾಕಾಣಿಕೆಯಲ್ಲಿ ಹೊಸ ತಂತ್ರಜ್ಞಾನ ಬಳಸಿ ಲಾಭ ಹೆಚ್ಚಿಸಿಕೊಳ್ಳುವ ಬಗ್ಗೆ ತಮ್ಮ ಜ್ಞಾನವನ್ನೂ ಕೂಡ ಹಂಚಿಕೊಳ್ಳಲಿದ್ದಾರೆ.
ನಮ್ಮ ಮೀನು ಸಾಕಣೆ ಕೋರ್ಸ್ ಮೂಲಕ, ಯಶಸ್ವಿಯಾಗಿ ಮೀನು ಸಾಕಣೆಯನ್ನು ಪ್ರಾರಂಭಿಸಲು ಮತ್ತು ಬೆಳೆಯಲು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ನೀವು ಪಡೆಯುತ್ತೀರಿ. ಇದರ ಜೊತೆಗೆ ಮೀನು ಸಾಕಣೆಯಲ್ಲಿನ ಇತ್ತೀಚಿನ ಆವಿಷ್ಕಾರಗಳ ಬಗ್ಗೆ ತಿಳಿಯಿರಿ ಮತ್ತು ಖರ್ಚುಗಳನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಲಾಭವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಸಹ ಕಂಡುಕೊಳ್ಳಿ.
ಮೀನು ಸಾಕಾಣಿಕೆ ಬಗೆಗಿನ ನಿಮ್ಮ ಪ್ಯಾಷನ್ ಅನ್ನು ಅಭಿವೃದ್ಧಿಶೀಲ ಬಿಸಿನೆಸ್ಆಗಿ ಪರಿವರ್ತಿಸಲು ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ನಮ್ಮ ಮೀನು ಕೃಷಿ ಕೋರ್ಸ್‌ಗೆ ಸೈನ್ ಅಪ್ ಮಾಡಿ ಮತ್ತು ಈ ಲಾಭದಾಯಕ ಉದ್ಯಮದ ಪ್ರಯೋಜನಗಳನ್ನು ಪಡೆದುಕೊಳ್ಳಲು ಪ್ರಾರಂಭಿಸಿ!
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಮೀನು ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು.
ತಮ್ಮ ಆದಾಯದ ಮಾರ್ಗಗಳನ್ನು ವೈವಿಧ್ಯಗೊಳಿಸಲು ಬಯಸುವ ರೈತರು.
ಅಕ್ವಾಕಲ್ಚರ್ ಮತ್ತು ಮೀನು ಕೃಷಿಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು.
ಮೀನು ಸಾಕಣೆ ಮತ್ತು ಮೀನು ಸಾಕಾಣಿಕೆ ಬಿಸಿನೆಸ್ ಬಗ್ಗೆ ತಮ್ಮ ಜ್ಞಾನವನ್ನು ವಿಸ್ತರಿಸಲು ಬಯಸುವ ಯಾರಾದರೂ.
ಮೀನು ಸಾಕಾಣಿಕೆ ಕ್ಷೇತ್ರವನ್ನು ಅನ್ವೇಷಿಸಲು ಬಯಸುವ ಇತರೆ ವೃತ್ತಿಪರರು.
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಯಶಸ್ವಿ ಮೀನು ಕೃಷಿ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ನಿರ್ವಹಿಸುವುದು
ಮೀನು ಸಾಕಣೆಯಲ್ಲಿ ಇತ್ತೀಚಿನ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳು
ವೆಚ್ಚಗಳನ್ನು ಕಡಿಮೆ ಮಾಡಿ ಲಾಭವನ್ನು ಹೆಚ್ಚಿಸುವ ತಂತ್ರಗಳು
ಮೀನು ಸಾಕಣೆ ಮತ್ತು ಜಲಚರಗಳ ಬಗ್ಗೆ ಬೇಸಿಕ್ ಮಾಹಿತಿ
ಮೀನು, ಹಂದಿಗಳು ಮತ್ತು ಕಾಫಿ ಕೃಷಿಯ ಮೂಲಕ ಯಶಸ್ವಿ ಸಮಗ್ರ ಕೃಷಿಯನ್ನು ಮಾಡುವ ತಂತ್ರಗಳು
ಅಧ್ಯಾಯಗಳು