ಈ ಕೋರ್ಸ್ ಒಳಗೊಂಡಿದೆ
ಭಾರತ ಕೃಷಿ ಪ್ರಧಾನ ದೇಶವಾಗಿದೆ. ಅಧಿಕ ಮಂದಿ ಕೃಷಿಯನ್ನು ನಂಬಿ ಬದುಕನ್ನು ಸಾಗಿಸುತ್ತಿದ್ದಾರೆ. ಆದರೆ ಕೇವಲ ಒಂದು ಬೆಳೆಯನ್ನು ಬೆಳೆಯುವುದರಿಂದ ಕೃಷಿಯಲ್ಲಿ ನಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಬೆಳೆ ಹಾನಿಯನ್ನು ತಡೆಗಟ್ಟುವ ಮೂಲಕ ರೈತರು ಉತ್ತಮ ಲಾಭವನ್ನು ಗಳಿಸಲು ಸಾಧ್ಯವಿದೆ. ಇದು ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳುವ ಮೂಲಕ ಸಾಧಿಸಲು ಸಾಧ್ಯವಿದೆ.
ಸಮಗ್ರ ಕೃಷಿ ಎಂಬುದು ಒಂದು ಕೃಷಿ ಪದ್ಧತಿಯಾಗಿದ್ದು, ಇದು ಜಮೀನಿನ ಹೊರಗಿನಿಂದ ಬರುವ ಒಳಹರಿವುಗಳ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಈ ವಿಧಾನದ ಮೂಲಕ ವಿವಿಧ ಉತ್ಪಾದನಾ ಕಾರ್ಯಾಚರಣೆಗಳು, ವೈವಿಧ್ಯಮಯ ಬೆಳೆಗಳನ್ನು ಬೆಳೆಯುವುದು ಮತ್ತು ಬೆಳೆಯ ಉಳಿಕೆಗಳನ್ನು ಬಳಕೆ ಮಾಡುವುದು ಅಥವಾ ಪ್ರಾಣಿಗಳ ತ್ಯಾಜ್ಯದ ಮೂಲಕ ಮಣ್ಣಿನ ಆರೋಗ್ಯವನ್ನು ವೃದ್ಧಿಸುವುದನ್ನು ಒಳಗೊಂಡಿರುತ್ತದೆ.
ಭೂಮಿ, ನೀರು, ಸಸ್ಯವರ್ಗ, ಜಾನುವಾರು ಮತ್ತು ಮಾನವ ಸಂಪನ್ಮೂಲಗಳ ಸಹಕಾರ ನಿರ್ವಹಣೆಯನ್ನು ಸಮಗ್ರ ಕೃಷಿ ಪದ್ಧತಿಗಳ ಬಳಕೆಯ ಮೂಲಕ ಮಾಡಬಹುದು, ಇದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಒಂದು ವಿಧಾನವಾಗಿದೆ. ಇದರಿಂದ ಸುಸ್ಥಿರ ಉತ್ಪಾದಕತೆಯಲ್ಲಿ ಭಾರೀ ಹೆಚ್ಚಳವನ್ನು ಕಾಣಬಹುದು ಮತ್ತು ಜನರು ಕೂಡ ಇದರಿಂದ ಉತ್ತಮ ಜೀವನೋಪಾಯದ ಭದ್ರತೆಯನ್ನು ಹೊಂದುತ್ತಾರೆ.
ಕೃಷಿಕರು ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಲಾಭವನ್ನು ಗಳಿಸಬೇಕು ಎಂಬ ದೃಷ್ಟಿಯಿಂದ ffreedom ಅಪ್ಲಿಕೇಶನ್ ಸಮಗ್ರ ಕೃಷಿಯ ಕುರಿತು ಈ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವೂ ಸಹ ಈ ಕೋರ್ಸ್ ಮೂಲಕ ಲಾಭವನ್ನು ಗಳಿಸಬಹುದು.