ಈ ಕೋರ್ಸ್ ಒಳಗೊಂಡಿದೆ
ಸಂಯೋಜಿತ ಕೃಷಿ ಎಂದರೆ ಒಂದು ಸಾಕಣೆಯಿಂದ ಸಿಗುವ ಯಾವುದೋ ವಸ್ತುವಿನ ಮೇಲೆ ಇನ್ನೊಂದು ಸಾಕಣೆ ಅವಲಂಬಿತ ವಾಗಿರುತ್ತದೆ. ಇಂತಹ ಸಂಯೋಜಿತ ಕೃಷಿಯ ಮೂಲಕ ಸಾಕಣೆಯ ಒಟ್ಟು ಖರ್ಚು ವೆಚ್ಚವನ್ನು ತಗ್ಗಿಸಲು ಸಾಧ್ಯವಾಗುತ್ತದೆ. ಈ ಮೂಲಕ ಇದು ಕೃಷಿಕರಿಗೆ ಹೆಚ್ಚು ಲಾಭದಾಯಕವಾಗಿರುತ್ತದೆ.
ಇಂತಹ ಕೃಷಿಯಲ್ಲಿ ಮೀನು ಮತ್ತು ಕೋಳಿಯ ಸಂಯೋಜಿತ ಕೃಷಿಯು ಪ್ರಮುಖವಾದದ್ದು ಎಂದು ಹೇಳಬಹುದು. ನಮ್ಮಲ್ಲಿ ಜನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪ್ರತಿಯೊಬ್ಬರಿಗೆ ತಲಾ ದಕ್ಕುತ್ತಿರುವ ಭೂಮಿಯ ಪ್ರಮಾಣ ಸಹ ಕಡಿಮೆ ಆಗುತ್ತಾ ಬರುತ್ತಿದೆ. ಹಾಗಾಗಿ ಇರುವ ಭೂಮಿಯಲ್ಲೇ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಂಯೋಜಿತ ಕೃಷಿಯು ಹೆಚ್ಚು ಪ್ರಯೋಜನಕರವಾಗಿರಲಿದೆ.
ಈ ಸಂಯೋಜಿತ ಕೃಷಿ ಮೂಲಕ ಸಾಕಣೆಗೆ ಅವಶ್ಯವಿರುವ ಸಂಪನ್ಮೂಲಗಳನ್ನು ಸರಿಪ್ರಮಾಣದಲ್ಲಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಉತ್ಪಾದಕತೆಯು ಸಹ ಸುಮಾರು ಎರಡರಿಂದ ಮೂರು ಪಟ್ಟು ಹೆಚ್ಚಾಗುತ್ತದೆ. ಈ ಕೃಷಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಆಹಾರದ ಖರ್ಚಿನಲ್ಲಿ ಸಹ ಸುಮಾರು 40 ರಿಂದ 60 ಪರ್ಸೆಂಟ್ ನಷ್ಟು ಹಣವನ್ನು ಉಳಿತಾಯ ಮಾಡಲು ಸಾಧ್ಯ ಆಗುತ್ತದೆ. ಈ ಕೃಷಿಯ ಮೂಲಕ ಲಭ್ಯವಿರುವ ಜಾಗವನ್ನು ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಕಾರ್ಮಿಕರ ವೆಚ್ಚ ಸಹ ಕಡಿಮೆ ಮಾಡಲು ಸಹಾಯವಾಗುತ್ತದೆ. ಈ ಸಂಯೋಜಿತ ಕೃಷಿಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಈ ಕೋರ್ಸ್ ಮೂಲಕ ವಿವರವಾಗಿ ತಿಳಿದುಕೊಳ್ಳುತ್ತೀರಿ.